BBK 11: ಸದ್ಯಕ್ಕಿಲ್ಲ ಬಿಗ್ ಬಾಸ್ ಫಿನಾಲೆ: ವೀಕ್ಷಕರಿಗೆ ಸಿಕ್ಕತು ಭರ್ಜರಿ ಗುಡ್ ನ್ಯೂಸ್
ಇದೀಗ ಬಿಗ್ ಬಾಸ್ ಸೀಸನ್ 11ರ ಶೋವನ್ನ ವಾರಗಳ ಕಾಲ ಮುಂದುವರೆಸುವುದಕ್ಕೆ ಭರ್ಜರಿ ಪ್ಲ್ಯಾನ್ ನಡೆಯುತ್ತಿದೆಯಂತೆ. ಈ ಬಾರಿಯ ಸೀಸನ್ 11 ಗ್ರ್ಯಾಂಡ್ ಫಿನಾಲೆಯನ್ನು ಎರಡು ವಾರಗಳ ಕಾಲ ಮುಂದಕ್ಕೆ ಹಾಕುವ ಪ್ಲಾನ್ನಲ್ಲಿದ್ದಾರಂತೆ ಬಿಗ್ ಬಾಸ್ ಟೀಮ್.


ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟತ್ತ ತಲುಪಿದ್ದು ರೋಚಕತೆ ಸೃಷ್ಟಿಸುತ್ತಿದೆ. ಆರಂಭದಲ್ಲಿ ಶೋಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಇರಲಿಲ್ಲ. ಆದರೀಗ ಬಿಗ್ ಬಾಸ್ಗೆ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ವೀಕೆಂಡ್ನ ಟಿಆರ್‌ಪಿ ಕೂಡ ಎರಡಂಕಿ ದಾಟಿದೆ. ಬಿಗ್ ಬಾಸ್ ಅನ್ನು ಪ್ರತಿದಿನ ವೀಕ್ಷಣೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಕಡೆಯಿಂದ ವೀಕ್ಷರಿಗೆ ಗುಡ್ ನ್ಯೂಸ್ ಒಂದು ಬಂದಿದೆ.
ಬಿಗ್ ಬಾಸ್ 11ರ ಸೀಸನ್ ಶುರುವಾಗಿ 93 ದಿನಗಳು ಕಳೆದಿದೆ. ಪ್ರತಿ ಸೀಸನ್‌ನಂತೆ ಈ ಸೀಸನ್ ಕೂಡ ಒಂದಷ್ಟು ವಾದ – ವಾಗ್ವಾದದಿಂದಲೇ ಸದ್ದು ಮಾಡಿದೆ. ಆರಂಭಿಕ ವಾರಗಳಲ್ಲಿ ಜಗದೀಶ್- ರಂಜಿತ್ ಅವರ ನಡುವಿನ ಮಾತಿನ ಚಕಮಕಿ ಬಿಗ್ ಬಾಸ್ ಮನೆಯಿಂದ ದೊಡ್ಡ ವಿವಾದದ ಸುದ್ದಿಯಾಗಿಯೇ ಹೊರಹೊಮ್ಮಿತ್ತು.
ದೊಡ್ಮನೆಯಲ್ಲಿ ಜಗಳಗಳು ಕಾಮನ್. ಆದರೆ, ಈ ಸೀಸನ್ನಲ್ಲಿ ಅದು ಕೊಂಚ ಅಧಿಕವಾಗಿದೆ. ಅಚ್ಚರಿ ಎಂದರೆ ಇದೇ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಇದಕ್ಕೆ ತಕ್ಕಂತೆ ಬಿಗ್ ಬಾಸ್ ಕೂಡ ಪ್ರತಿದಿನ ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಿದ್ದಾರೆ. ನಾಮಿನೇಷನ್ ವಿಚಾರ, ಎಲಿಮಿನೇಷನ್ನಲ್ಲಿ, ಟಾಸ್ಕ್ನಲ್ಲಿ ಸರ್ಪ್ರೈಸ್ ನೀಡುತ್ತಿದ್ದಾರೆ.
ಇದೀಗ ಸೀಸನ್ 11ರ ಶೋವನ್ನ ವಾರಗಳ ಕಾಲ ಮುಂದುವರೆಸುವುದಕ್ಕೆ ಭರ್ಜರಿ ಪ್ಲ್ಯಾನ್ ನಡೆಯುತ್ತಿದೆಯಂತೆ. ಈ ಬಾರಿಯ ಸೀಸನ್ 11 ಗ್ರ್ಯಾಂಡ್ ಫಿನಾಲೆಯನ್ನು ಎರಡು ವಾರಗಳ ಕಾಲ ಮುಂದಕ್ಕೆ ಹಾಕುವ ಪ್ಲಾನ್ನಲ್ಲಿದ್ದಾರಂತೆ ಬಿಗ್ ಬಾಸ್ ಟೀಮ್. ಏಕೆಂದರೆ ಈ ಬಾರಿಯ ಬಿಗ್ ಬಾಸ್ ಹೊಸ ಅಧ್ಯಾಯ ಟೈಟಲ್ನೊಂದಿಗೆ ಶುರುವಾಗಿತ್ತು. ಹೀಗಾಗಿ ಈ ಬಾರಿಯ ಬಿಗ್ಬಾಸ್ ಸೀಸನ್ 11, 125 ದಿನಗಳ ನಡೆಸಬೇಕು ಅಂತ ಪ್ಲಾನ್ನಲ್ಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಭರ್ಜರಿ ಟಿಆರ್‌ಪಿ ಬರುತ್ತಿದೆ. ವೀಕ್ಷಕರ ಮನ ಗೆಲ್ಲುವಲ್ಲಿ ಈ ಬಾರಿಯ ಸೀಸನ್ ಯಶಸ್ಸಾಗಿದೆ. ಹೀಗಾಗಿ ಆಯೋಜಕರು ವೀಕ್ಷಕರಿಗಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ಇನ್ನೆರಡು ವಾರಕಾಲ ವಿಸ್ತರಣೆ ಮಾಡಲು ಪ್ಲ್ಯಾನ್ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ವಾಹಿನಿ ಆಗಲಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
BBK 11: ರಾಧಕೃಷ್ಣನ ಥರ ಇದೀರಿ: ತ್ರಿವಿಕ್ರಮ್ ತಾಯಿಯ ಮಾತಿಗೆ ನಾಚಿ ನೀರಾದ ಭವ್ಯಾ ಗೌಡ