ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Trivikram: ಮೇಘಾ ಶೆಟ್ಟಿ ಪ್ರೊಡಕ್ಷನ್‌ನ ಧಾರಾವಾಹಿಯಲ್ಲಿ ತ್ರಿವಿಕ್ರಮ್ ನಾಯಕ?

ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗುತ್ತಿದೆಯಂತೆ. ಈ ಸೀರಿಯಲ್ಗೆ ತ್ರಿವಿಕ್ರಮ್ ನಾಯಕನಾಗಿ ಆಯ್ಕೆ ಆಗಿದ್ದಾರೆ. ಇದಕ್ಕೆ ತಕ್ಕಂತೆ ಕಲರ್ಸ್ ಕನ್ನಡದಲ್ಲಿ ಬರಲಿರುವ ಹೊಸ ಧಾರಾವಾಹಿ ಬಗ್ಗೆ ಮೇಘಾ ಶೆಟ್ಟಿ ದೊಡ್ಡ ಅಪ್ಡೇಟ್ ಕೊಟ್ಟಿದ್ದಾರೆ.

ಮೇಘಾ ಶೆಟ್ಟಿ ಪ್ರೊಡಕ್ಷನ್‌ನ ಧಾರಾವಾಹಿಯಲ್ಲಿ ತ್ರಿವಿಕ್ರಮ್ ನಾಯಕ?

Muddu Sose Serial Trivikram

Profile Vinay Bhat Feb 21, 2025 6:54 AM

ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಎಂದೇ ಜನಪ್ರಿಯತೆ ಪಡೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಫಸ್ಟ್‌ ರನ್ನರ್‌ ರಪ್ ನಟ ತ್ರಿವಿಕ್ರಮ್​ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇವರು ಎಲ್ಲೇ ಕಂಡರು ಅಭಿಮಾನಿಗಳು ಸೆಲ್ಫಿಗೋಸ್ಕರ ಮುಗಿಬೀಳುತ್ತಿದ್ದಾರೆ. ಇವರು ಜೀವನದಲ್ಲಿ ನಡೆದುಕೊಂಡು ಬಂದ ದಾರಿ, ಇವರ ಕ್ರಿಕೆಟ್ ಪ್ರೇಮ, ಇನ್ನೂ ಏನಾದರು ಮಾಡಬೇಕು ಎಂಬ ಛಲ ಕಂಡು ಅನೇಕ ಫ್ಯಾನ್ಸ್ ಇವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯ ಇವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಬ್ಯುಸಿಯಾಗಿರುವಾಗಲೇ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ.

ಸಿಸಿಎಲ್ ಮಧ್ಯೆಯೆ ತ್ರಿವಿಕ್ರಮ್ ಕಡೆಯಿಂದ ಅಭಿಮಾನಿಗಳು ಬಂಪರ್ ಸುದ್ದಿಯೊಂದು ಬಂದಿದೆ. ಬಿಗ್ ಬಾಸ್ ಮುಗಿದ ಬಳಿಕ ತ್ರಿವಿಕ್ರಮ್ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, ತ್ರಿವಿಕ್ರಮ್ ಇದರಲ್ಲೂ ಪಾಲ್ಗೊಂಡಿಲ್ಲ. ಇದರ ಮಧ್ಯೆ ಈಗ ತ್ರಿವಿಕ್ರಮ್ ಬಗ್ಗೆ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ. ಹೊಸ ಧಾರಾವಾಹಿ ಮೂಲಕ ತ್ರಿವಿಕ್ರಮ್​ ಪುನಃ ವೀಕ್ಷಕರ ಮುಂದೆ ಬರಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಕಲರ್ಸ್​ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗುತ್ತಿದೆಯಂತೆ. ಈ ಸೀರಿಯಲ್​ಗೆ ತ್ರಿವಿಕ್ರಮ್​ ನಾಯಕನಾಗಿ ಆಯ್ಕೆ ಆಗಿದ್ದಾರೆ.

ಇದಕ್ಕೆ ತಕ್ಕಂತೆ ಕಲರ್ಸ್ ಕನ್ನಡದಲ್ಲಿ ಬರಲಿರುವ ಹೊಸ ಧಾರಾವಾಹಿ ಬಗ್ಗೆ ಮೇಘಾ ಶೆಟ್ಟಿ ದೊಡ್ಡ ಅಪ್ಡೇಟ್ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಸೀರಿಯಲ್​ಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದು. ಜೊತೆ ಜೊತೆಯಲ್ಲಿ ಖ್ಯಾತಿಯ ಮೇಘಾ ಶೆಟ್ಟಿ ಈಗ ಸ್ಯಾಂಡಲ್​ವುಡ್​ ಸ್ಟಾರ್​ ನಟಿಯಾಗಿ ಮಿಂಚುತ್ತಿದ್ದಾರೆ. ಇದರ ಜೊತೆಗೆ ಧಾರಾವಾಹಿ ನಿರ್ಮಾಣವೂ ಮಾಡುತ್ತಿದ್ದಾರೆ. ಇವರು ಗೌರಿಶಂಕರ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ. ಈ ಸೀರಿಯಲ್‌ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿದೆ. ಇನ್ನೊಂದು ಕಡೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮುದ್ದು ಸೊಸೆ ಎನ್ನುವ ಧಾರಾವಾಹಿಗೆ ಹಣ ಹೂಡುತ್ತಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಮೇಘಾ ಶೆಟ್ಟಿ ಅವರು, ಇದು ‘ನಮ್ಮ ಪ್ರೊಡಕ್ಷನ್‌ನ ಧಾರಾವಾಹಿ’ ಎಂದು ಹೇಳಿಕೊಂಡಿದ್ದಾರೆ. ಇದರ ಪ್ರೋಮೋ ಕೂಡ ರಿಲೀಸ್​ ಆಗಿದೆ. ಮುದ್ದು ಸೊಸೆ ಧಾರಾವಾಹಿಯಲ್ಲಿ ನಾಯಕಿಯಾಗಿ ಅಂತರಪಟ ಧಾರಾವಾಹಿ ಖ್ಯಾತಿಯ ಸಿರಿ ಪಾತ್ರದ ಮೂಲಕ ಫೇಮಸ್​ ಆಗಿದ್ದ ಪ್ರತಿಮಾ ಆಯ್ಕೆಯಾಗಿದ್ದಾರೆ. ಆದರೆ, ನಾಯಕ ಯಾರು ಎಂಬುದನ್ನ ಇನ್ನೂ ರಿವೀಲ್ ಮಾಡಲಾಗಿಲ್ಲ. ಹೀಗಾಗಿ ಕೆಲವರು ತ್ರಿವಿಕ್ರಮ್ ಈ ಧಾರಾವಾಹಿಯ ನಾಯಕ ಎಂದು ಹೇಳುತ್ತಿದ್ದಾರೆ. ಈ ಮೂಲಕ ಪದ್ಮಾವತಿ ನಂತರ ತ್ರಿವಿಕ್ರಮ್​ ಧಾರಾವಾಹಿಗೆ ಮರಳುತ್ತಿರೋದು ಬಹುತೇಕ ಕನ್ಫರ್ಮ್​ ಆಗಿದೆ ಎನ್ನಲಾಗಿದೆ.

Anusha Rai: ಮಹಾ ಕುಂಭಮೇಳದಲ್ಲಿ ಅನುಷಾ ರೈ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಬಿಗ್ ಬಾಸ್ ಸ್ಪರ್ಧಿ