ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Maja Talkies: ಕಲರ್ಸ್ ಕನ್ನಡದಲ್ಲಿ ಆರು ಗಂಟೆಗಳ ಮಹಾ ಮಿಲನ: ಮಜಾ ಟಾಕೀಸ್- ಬಾಯ್ಸ್ Vs ಗರ್ಲ್ಸ್​ನಿಂದ ಭರ್ಜರಿ ಮನರಂಜನೆ

ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ ಮಹಾ ಮಿಲನದಲ್ಲಿ ಅನೇಕ ವಿಶೇಷಗಳಿವೆ. ಯೋಗರಾಜ್ ಭಟ್ ಮತ್ತು ಸೃಜನ್ ಕಾರ್ಯಕ್ರಮದ ಜಡ್ಜ್ ಆಗಿ ಹೊಸ ಬಗೆಯ ತೀರ್ಪು ಬರೆಯಲಿದ್ದಾರೆ.

ಮಹಾ ಮಿಲನ: ಮಜಾ ಟಾಕೀಸ್- ಬಾಯ್ಸ್ Vs ಗರ್ಲ್ಸ್​ನಿಂದ ಭರ್ಜರಿ ಮನರಂಜನೆ

Mahamilana

Profile Vinay Bhat Feb 22, 2025 6:49 AM

ಕರ್ನಾಟಕದ ಎರಡು ಅತಿ ದೊಡ್ಡ ಷೋಗಳು ಮಜಾ ಟಾಕೀಸ್ ಮತ್ತು ಬಾಯ್ಸ್ Vs ಗರ್ಲ್ಸ್. ಈ ಎರಡು ಷೋಗಳ ಮಹಾ ಮಿಲನ ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ (ಫೆಬ್ರವರಿ 22, 23) ರಾತ್ರಿ 7:30 ಕ್ಕೆ ಪ್ರಸಾರಾವಾಗಲಿದ್ದು, ವೀಕ್ಷಕರಿಗೆ ಭರ್ಜರಿ ಮಜಾ ಮತ್ತು ನಾನ್ ಸ್ಟಾಪ್ ಎಂಟರ್​ಟೈನ್ಮೆಂಟ್ ಕೊಡಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ ಮಹಾ ಮಿಲನದಲ್ಲಿ ಅನೇಕ ವಿಶೇಷಗಳಿವೆ.

ಯೋಗರಾಜ್ ಭಟ್ ಮತ್ತು ಸೃಜನ್ ಕಾರ್ಯಕ್ರಮದ ಜಡ್ಜ್ ಆಗಿ ಹೊಸ ಬಗೆಯ ತೀರ್ಪು ಬರೆಯಲಿದ್ದಾರೆ. ಅಚ್ಚಕನ್ನಡದ ಕೂಸು ಅನುಪಮಾ ನಿರೂಪಣೆಯಲ್ಲಿ ಅರಳು ಹುರಿದಂತೆ ಕನ್ನಡ ನುಡಿಮುತ್ತುಗಳು ಉರುಳಿದರೆ, ಎರಡೂ ಷೋಗಳ ದೈತ್ಯ ಪ್ರತಿಭೆಗಳು ತಮ್ಮ ಸ್ಕಿಟ್ಸ್, ಗಿಮಿಕ್, ಡಾನ್ಸ್ ಮೂಲಕ ಜನರ ಮನ ಕದಿಯಲಿದ್ದಾರೆ.

ಮಹಾ ಶಿವರಾತ್ರಿ ವಿಶೇಷವಾಗಿ ಚಂದನಾ, ಐಶ್ವರ್ಯಾ ಸಿಂಧೋಗಿ ಮತ್ತು ಪ್ರಿಯಾಂಕಾ ಕಾಮತ್ ಇವರು ಕ್ರಮವಾಗಿ ಸತಿ, ಪಾರ್ವತಿ, ಕಾಳಿಯಾಗಿ ನರ್ತಿಸಲಿದ್ದಾರೆ. ಅಣ್ಣಯ್ಯ ಸಿನಿಮಾದ ಕಾಮಿಡಿ ಅಣಕವನ್ನು ಹಾಲಿವುಡ್ನ ಅವತಾರ್ ಚಿತ್ರದ ಮಾದರಿಯಲ್ಲಿ ತೋರಿಸಿ ಮನರಂಜಿಸಲಿದ್ದಾರೆ ಚಂದ್ರಪ್ರಭ, ಪ್ರಶಾಂತ್, ವಿವೇಕ್, ಮಿಮಿಕ್ರಿ ಗೋಪಿ. ಇನ್ನೊಂದು ವಿಶೇಷವೆಂದರೆ, ನೊಂದ ಗಂಡಂದಿರ ಸಂಘ ಸ್ಕಿಟ್. ಇದರಲ್ಲಿ ತುಕಾಲಿ - ಪತ್ನಿ ಮಾನಸ, ಪಾವಗಡ ಮಂಜು -ಪತ್ನಿ ನಂದಿನಿ ಮತ್ತು ಕುರಿ ಪ್ರತಾಪ್ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲಿದ್ದಾರೆ.

ಜೊತೆಗೆ ಹಲವಾರು ಸ್ಕಿಟ್​ಗಳು, ಡಾನ್ಸ್ ಮತ್ತು ಗೇಮ್ಸ್ ಗಳಿಂದ ಆರು ಗಂಟೆಗಳ ಈ ಮಹಾಮಿಲನ ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ಅಪರೂಪದ ವಿಶೇಷ ಆನಂದದ ಹಬ್ಬವಾಗಲಿದೆ. ಇದರ ಪ್ರೊಮೋ ಕೂಡ ಬಿಡುಗಡೆ ಆಗಿದೆ. ಜೊತೆಗೆ ಕಳೆದ ಎರಡು ವಾರಗಳಿಂದ ಬಾಯ್ಸ್ Vs ಗರ್ಲ್ಸ್ ಶೋನಲ್ಲಿ ಭಾಗವಹಿಸಿದ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ ಕೂಡ ಈ ವಾರ ಕಾಣಿಸಿಕೊಂಡಿದ್ದಾರೆ. ಇವರ ಕಾಮಿಡಿ ಸಖತ್ ಕಿಕ್ ಕೊಡುವಂತಿದೆ.

Hanumantha Lamani: ವೈರಲ್ ಆಗ್ತಿದೆ ಹನುಮಂತನ ಬಗ್ಗೆ ಕಾರ್ತಿಕ್ ಮಹೇಶ್ ಆಡಿದ ಮಾತು: ಏನಂದ್ರು ನೋಡಿ