ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 11: ಮನುಷ್ಯತ್ವ ಮರೆತ ಸ್ಪರ್ಧಿಗಳು: ಮಂಜುಗೆ ಥೂ.. ಹೊಗಲ್ಲೇ.. ಎಂದು ಬೈದ ತ್ರಿವಿಕ್ರಮ್​

ಬಿಗ್‌ ಬಾಸ್‌ ಮನೆಯಲ್ಲಿ ಟಿಕೆಟ್‌ ಟು ಫಿನಾಲೆ ಟಾಸ್ಕ್ಗಳು ಶುರುವಾಗಿದೆ. ಟಾಸ್ಕ್ ಒಂದು ಮುಗಿದ ಬಳಿಕ ಮಂಜು-ತ್ರಿವಿಕ್ರಮ್ ಮಧ್ಯೆ ದೊಡ್ಡ ಜಗಳ ಆಗಿದೆ. ಏಕವಚನದಲ್ಲಿ ಮಾತಾಡೋಕೆ ಶುರು ಮಾಡಿಕೊಂಡಿದ್ದಾರೆ.

BBK 11: ಮನುಷ್ಯತ್ವ ಮರೆತ ಸ್ಪರ್ಧಿಗಳು: ಮಂಜುಗೆ ಥೂ.. ಹೊಗಲ್ಲೇ.. ಎಂದು ಬೈದ ತ್ರಿವಿಕ್ರಮ್​

Profile Vinay Bhat Jan 6, 2025 9:44 PM
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಯಶಸ್ವಿಯಾಗಿ 100ನೇ ದಿನ ಪೂರೈಸಿ ಮುನ್ನುತ್ತಿದೆ. ಫಿನಾಲೆ ವೀಕ್ ಹತ್ತಿರವಾಗುತ್ತಿದ್ದು ಸದ್ಯ ಮನೆಯಲ್ಲಿರುವ ಒಂಬತ್ತು ಸ್ಪರ್ಧಿಗಳು ಟಾಪ್ 5ಗೆ ಬರಲು ಮೈ-ಚಳಿ ಬಿಟ್ಟು ಆಡುತ್ತಿದ್ದಾರೆ. ಮುಂದಿನ ವಾರ ನಿಮಗೆಲ್ಲಾ ತುಂಬಾ ಮುಖ್ಯವಾಗಿರೋ ವಾರ ಎಂದು ಭಾನುವಾರ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ. ಯಾಕೆಂದರೆ ಈ ವಾರ ಗೇಮ್​ ಚೇಂಜಿಂಗ್ ವೀಕ್​ ಆಗಿದೆ.
ಈ ವಾರ ನಡೆಯುವ ಗೇಮ್​ಗಳಲ್ಲಿ ಒಬ್ಬ ವ್ಯಕ್ತಿಗೆ ಟಿಕೆಟ್ ಟು ಫಿನಾಲೆ ಸಿಗುತ್ತದೆ. ಟಿಕೆಟ್ ಟು ಫಿನಾಲೆ ಪಾಸ್ ಅಂದರೆ ಗ್ರ್ಯಾಂಡ್​ ಫಿನಾಲೆಗೆ ನೇರವಾಗಿ ಸೆಲೆಕ್ಟ್​ ಆಗುತ್ತಾರೆ. ಹೀಗಾಗಿ ಸದ್ಯ ಬಿಗ್ ಬಾಸ್​ನಲ್ಲಿ ಅಸಲಿ ಆಟ ಶುರುವಾಗಿದೆ. ಇಷ್ಟು ದಿನ ಇದ್ದ ಕಂಫರ್ಟ್ ಝೋನ್, ಫ್ರೆಂಡ್ಶಿಪ್ ಎಲ್ಲವೂ ಕೊಚ್ಚಿ ಹೋಗಿದೆ. ಮುಖ್ಯವಾಗಿ ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು ನಡುವೆ ಜಟಾಪಟಿ ನಡೆದಿದೆ.
ಬಿಗ್‌ ಬಾಸ್‌ ಮನೆಯಲ್ಲಿ ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಗಳು ಶುರುವಾಗಿದೆ. ಇಂದಿನಿಂದ ಹಬ್ಬ, ಮಾರಿಹಬ್ಬ ಶುರುವಾಗಲಿದೆ. ಈ ಮನೆ ಪ್ರತಿ ಕ್ಷಣ ಒಂದೊಂದು ಯುದ್ಧ ನಡೆಯುವ ರಣಾರಂಗವಾಗಲಿದೆ ಎಂದು ಬಿಗ್‌ ಬಾಸ್‌ ಹೇಳಿದ್ದು, ಸ್ಪರ್ಧಿಗಳು ಆಟದಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಟಾಸ್ಕ್ ಒಂದು ಮುಗಿದ ಬಳಿಕ ಮಂಜು-ತ್ರಿವಿಕ್ರಮ್ ಮಧ್ಯೆ ದೊಡ್ಡ ಜಗಳ ಆಗಿದೆ.
ಇಷ್ಟು ದಿನ ಗೆಳಯರಾಗಿದ್ದ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಪರ್ಧಿಗಳು ಏಕವಚನದಲ್ಲಿ ಮಾತಾಡೋಕೆ ಶುರು ಮಾಡಿಕೊಂಡಿದ್ದಾರೆ. ಕುಳಿತುಕೊಂಡು ಮಾತನಾಡುತ್ತಿರುವಾಗ ಮಂಜು ಅವರು, ವ್ಯಕ್ತಿತ್ವದಲ್ಲಿ ಹನುಮಂತು ನಿನಗಿಂತ ಮೇಲೆ ಇದ್ದಾನೆ ಎಂದು ತ್ರಿವಿಕ್ರಮ್​ಗೆ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಹನುಮಂತ, ವ್ಯಕ್ತಿತ್ವದ ವಿಚಾರ ಮಾತನಾಡೋದು ನೀನು ನನ್ನ ಹತ್ರ ಎಂದು ವ್ಯಂಗ್ಯವಾಗಿ ನಕ್ಕಿ ಥೂ.. ಎಂದು ಹೇಳಿದ್ದಾರೆ. ಇದಕ್ಕೆ ಮಂಜು ಥೂ ಅಂಥ ಉಗಿದ್ದೀಯಾ ಎಂದಿದ್ದಾರೆ. ನನ್ನಷ್ಟ ನಾನು ಉಗಿತ್ತೀನಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಇಬ್ಬರ ನಡುವೆ ನಡಿಯೋ, ಹೋಗಲೋ.. ಹೋಗಲ್ಲೇ.. ಎಂದು ಏಕವನದಲ್ಲೇ ಬೈದುಕೊಂಡಿದ್ದಾರೆ.
BBK 11: ಬಿಗ್ ಬಾಸ್ ಮನೆಯಲ್ಲಿ ಖಳನಾಯಕನಾದ ರಜತ್: ಚೈತ್ರಾಗೆ ಶುರುವಾಯಿತು ಟೆನ್ಶನ್