ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sikandar Box Office Collection Day: ಮತ್ತೆ ಎಡವಿದ ಸಲ್ಮಾನ್‌ ಖಾನ್‌; ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡದ 'ಸಿಕಂದರ್‌'

Sikandar Movie: ಭಾರೀ ನಿರೀಕ್ಷೆಯೊಂದಿಗೆ ತೆರೆಕಂಡ ಬಾಲಿವುಡ್‌ನ ʼಸಿಕಂದರ್‌ʼ ಚಿತ್ರ ಬಾಕ್ಸ್‌ ಆಪೀಸ್‌ನಲ್ಲಿ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಿದೆ. ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರ ಮೊದಲ ದಿನ ಗಳಿಸಿದ್ದು 26 ಕೋಟಿ ರೂ. ಮಾತ್ರ.

ಮತ್ತೆ ಎಡವಿದ ಸಲ್ಮಾನ್‌ ಖಾನ್‌; 'ಸಿಕಂದರ್‌' ಬಾಕ್ಸ್‌ ಕಲೆಕ್ಷನ್‌ ಎಷ್ಟು?

ʼಸಿಕಂದರ್‌ʼ ಚಿತ್ರದ ಪೋಸ್ಟರ್‌.

Profile Ramesh B Mar 31, 2025 4:09 PM

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್‌ ಆಳಿದ್ದ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan) ಚಾರ್ಮ್‌ ಕಳೆದುಕೊಂಡಿದ್ದಾರ? ಇಂತಹದ್ದೊಂದು ಅನುಮಾನ ಇತ್ತೀಚೆನ ದಿನಗಳಲ್ಲಿ ಪದೇ ಪದೆ ಕಾಡುತ್ತಿದೆ. ಯಾಕೆಂದರೆ ರಿಲೀಸ್‌ ಆದ ಮೊದಲ ದಿನವೇ ಕೋಟಿ ಕೋಟಿ ರೂ. ದೋಚುತ್ತಿದ್ದ ಅವರ ಚಿತ್ರಗಳು ಇತ್ತೀಚೆಗೆ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಲು ವಿಫಲವಾಗುತ್ತಿವೆ. ಆ ಪಟ್ಟಿಗೆ ಮತ್ತೊಂದು ಸೇರ್ಪಡೆ ʼಸಿಕಂದರ್‌ʼ (Sikandar). ಹೌದು, ಈದ್‌ ಪ್ರಯುಕ್ತ ಭಾರೀ ನಿರೀಕ್ಷೆಯೊಂದಿಗೆ ಮಾ. 30ರಂದು ತೆರೆಗೆ ಬಂದಿರುವ ಈ ಚಿತ್ರ ಮತ್ತೆ ನಿರಾಸೆ ಮೂಡಿಸಿದೆ. ಬ್ಯಾಕ್‌ ಟು ಬ್ಯಾಕ್‌ ಗೆಲುವಿನಿಂದ ಬೀಗುತ್ತಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಸೋಲಿನತ್ತ ಮುಖ ಮಾಡಲಿದ್ದಾರೆ ಎಂದು ಸಿನಿ ಪಂಡಿತರು ಊಹಿಸಿದ್ದಾರೆ.

ಮೂಲಗಳ ಪ್ರಕಾರ ಬಹು ನಿರೀಕ್ಷೆಯೊಂದಿಗೆ ಬಿಡುಗಡೆಯಾದ 'ಸಿಕಂದರ್‌' ಮೊದಲ ದಿನ ಭಾರತದಲ್ಲಿ ಗಳಿಸಿದ್ದು ಕೇವಲ 26 ಕೋಟಿ ರೂ. ಚಿತ್ರ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದು, ಮೊದಲ ದಿನದ ಕಲೆಕ್ಷನ್‌ ನೋಡಿ ಸಲ್ಲು ಫ್ಯಾನ್ಸ್‌ ನಿರಾಸೆಗೊಳಗಾಗಿದ್ದಾರೆ. ಇನ್ನು ಜಾಗತಿಕ ಬಾಕ್ಸ್‌ ಆಫೀಸ್‌ ಲೆಕ್ಕ ಸೇರಿಸಿದರೆ ಕಲೆಕ್ಷನ್‌ 50 ಕೋಟಿ ರೂ. ಆಗುತ್ತದೆ. 1 ದಿನದಲ್ಲೇ 100 ಕೋಟಿ ರೂ. ಕ್ಲಬ್‌ ಸೇರುವ ಚಿತ್ರಗಳಿರುವ ಈ ಕಾಲದಲ್ಲಿ ʼಸಿಕಂದರ್‌ʼ ಸಿನಿಮಾದ ಗಳಿಕೆ ಏನೇನೂ ಅಲ್ಲ. ಅಲ್ಲದೆ ಸಲ್ಮಾನ್‌ ಖಾನ್‌ ಅವರ ಈ ಹಿಂದಿನ ʼಟೈಗರ್‌ 3ʼ ಮತ್ತು ʼಭಜರಂಗಿ ಭಾಯಿಜಾನ್‌ʼ ಸಿನಿಮಾಗಳಿಗಿಂತಲೂ ಕಡಿಮೆ ಕಲೆಕ್ಷನ್‌ ಮಾಡಿದೆ.

ಚಿತ್ರತಂಡದ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Sikandar Movie: 'ಸಿಕಂದರ್‌' ರಿಲೀಸ್‌ ಬೆನ್ನಲ್ಲೇ ಸಲ್ಮಾನ್‌ ಖಾನ್‌ಗೆ ಶಾಕ್‌ ಕೊಟ್ಟ ಹ್ಯಾಕರ್ಸ್‌; ಆನ್‌ಲೈನ್‌ನಲ್ಲಿ ಎಚ್‌ಡಿ ಪ್ರಿಂಟ್‌ ಲೀಕ್‌

ಮೊದಲ ದಿನ 30 ಕೋಟಿ ರೂ. ಗಳಿಸಿದ್ದರೆ ಪರವಾಗಿರಲಿಲ್ಲ. ಆದರೆ ಆ ಗಡಿಯನ್ನೂ ತಲುಪಲು ಸಾಧ್ಯವಾಗಿಲ್ಲ ಎಂದು ಚಿತ್ರ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ ಈದ್‌ ಹಿನ್ನೆಲೆಯಲ್ಲಿ ರಜೆ ಇರುವ ಕಾರಣ ಕಲೆಕ್ಷನ್‌ ಹೆಚ್ಚಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ತನಕ 5.91 ಕೋಟಿ ರೂ. ಗಳಿಸಿದೆ.

ಕೆಲವೊಂದು ಹಿಂದಿ ಬೆಲ್ಟ್‌ಗಳಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ, ಗುಜರಾತ್‌ ಮುಂತಾದ ಕಡೆ ಕಲೆಕ್ಷನ್‌ ಹೇಳುವಷ್ಟಿಲ್ಲ. ಇನ್ನು ದಕ್ಷಿಣ ಭಾರತದಲ್ಲಿಯೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ.

ರಶ್ಮಿಕಾ ಮ್ಯಾಜಿಕ್‌ ಕೂಡ ನಡೆಯಲಿಲ್ಲ

ಸತತ 3 ಹಿಟ್‌ ನೀಡಿದ ರಶ್ಮಿಕಾ ಮಂದಣ್ಣ ʼಸಿಕಂದರ್‌ʼ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಈ ಹಿಂದಿನ ಅವರ ʼಅನಿಮಲ್‌ʼ, ʼಪುಷ್ಪ 2ʼ ಮತ್ತು ʼಛಾವಾʼ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ್ದವು. ಹೀಗಾಗಿ ರಶ್ಮಿಕಾ ಲಕ್‌ ಸಲ್ಮಾನ್‌ ಖಾನ್‌ ಕೈ ಹಿಡಿಯಲಿದೆ, ಸತತ ಸೋಲಿನಿಂದ ಕಂಗೆಟ್ಟಿರುವ ಅವರಿಗೆ ಗೆಲುವು ದಕ್ಕಲಿದೆ ಎಂದೇ ಹೇಳಲಾಗಿತ್ತು. ಆದರೆ ಈ ಬಾರಿ ರಶ್ಮಿಕಾಗೂ ಅದೃಷ್ಟ ಕೈಕೊಟ್ಟಿರುವಂತಿದೆ.

ಕಾಲಿವುಡ್‌ ಸೂಪರ್‌ ಹಿಟ್‌ ಸಿನಿಮಾಗಳ ನಿರ್ದೇಶಕ ಎ.ಆರ್‌.ಮುರುಗದಾಸ್‌ (A.R.Murugadoss) ಆ್ಯಕ್ಷನ್‌ ಕಟ್‌ ಹೇಳಿರುವ ʼಸಿಕಂದರ್‌ʼನಲ್ಲಿ ಕಾಜಲ್ ಅಗರ್ವಾಲ್, ಶರ್ಮನ್ ಜೋಶಿ, ಪ್ರತಿಕ್‌ ಬಬ್ಬರ್‌, ಕಿಶೋರ್‌, ಸತ್ಯರಾಜ್‌ ಮತ್ತಿತರರು ನಟಿಸಿದ್ದಾರೆ. ಚಿತ್ರದ ಎಚ್‌ಡಿ ಪ್ರಿಂಟ್‌ ಲೀಕ್‌ ಆಗಿದ್ದು ಕೂಡ ಕಲೆಕ್ಷನ್‌ ಮೇಲೆ ಪರಿಣಾಮ ಬೀರಿದೆ.