#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Acharya Satyendra Das: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ವಿಧಿವಶ

ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್(Acharya Satyendra Das) ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬುಧವಾರ ಬೆಳಿಗ್ಗೆ 7 ಗಂಟೆಗೆ ಲಕ್ನೋದ ಸಂಜಯ್ ಗಾಂಧಿ ಪಿಜಿಐನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ವಿಧಿವಶ

ಆಚಾರ್ಯ ಸತ್ಯೇಂದ್ರ ದಾಸ್

Profile Rakshita Karkera Feb 12, 2025 10:41 AM

ಲಖನೌ: ಅಯೋಧ್ಯೆ ರಾಮ ಮಂದಿರದ(Ayodhya Ram Temple) ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್(Acharya Satyendra Das) ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬುಧವಾರ ಬೆಳಿಗ್ಗೆ 7 ಗಂಟೆಗೆ ಲಕ್ನೋದ ಸಂಜಯ್ ಗಾಂಧಿ ಪಿಜಿಐನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಬಾಬರಿ ಮಸೀದಿ ಧ್ವಂಸದಿಂದ ಹಿಡಿದು ಭವ್ಯವಾದ ರಾಮಮಂದಿರ ನಿರ್ಮಾಣದವರೆಗೆ ಎಲ್ಲದಕ್ಕೂ ಸಾಕ್ಷಿಯಾಗಿದ್ದ ಆಚಾರ್ಯ ಸತ್ಯೇಂದ್ರ ದಾಸ್ ಅವರು 1993 ರಿಂದ ರಾಮಲಾಲಾ ಅವರ ಸೇವೆಯಲ್ಲಿ ನಿರತರಾಗಿದ್ದರು. ಅವರು ಭವ್ಯ ದೇವಾಲಯದಲ್ಲಿ ರಾಮಲಲ್ಲಾಗೆ ಸೇವೆ ಸಲ್ಲಿಸಿದರು. 1992 ರಲ್ಲಿ ಅವರನ್ನು ರಾಮಲಾಲಾ ಅರ್ಚಕರನ್ನಾಗಿ ಮಾಡಿದಾಗ, ಅವರಿಗೆ 100 ರೂ. ವೇತನ ನಿಗದಿ ಮಾಡಲಾಗಿತ್ತು.

ಕಳೆದ 34 ವರ್ಷಗಳಿಂದ ರಾಮಲಾಲಾಗೆ ಸೇವೆ ಸಲ್ಲಿಸುತ್ತಿದ್ದ ಆಚಾರ್ಯ ಸತ್ಯೇಂದ್ರ ದಾಸ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ತೊರೆದು ಅರ್ಚಕರಾಗಿದ್ದರು. ಅವರು 1975 ರಲ್ಲಿ ಸಂಸ್ಕೃತದಲ್ಲಿ ಆಚಾರ್ಯ ಪದವಿ ಪಡೆದಿದ್ದ ಅವರು, ಅಯೋಧ್ಯೆಯ ಸಂಸ್ಕೃತ ಕಾಲೇಜಿನಲ್ಲಿ ಸಹಾಯಕ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇದಾದ ನಂತರ, ಮಾರ್ಚ್ 1992 ರಲ್ಲಿ, ಅವರನ್ನು ಪ್ರಧಾನ ಅರ್ಚಕರನ್ನಾಗಿ ನೇಮಿಸಿದರು.

ಈ ಸುದ್ದಿಯನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮ ಮಂದಿರ: ದರ್ಶನದ ಸಮಯ ವಿಸ್ತರಣೆ

ಆಚಾರ್ಯ ಸತ್ಯೇಂದ್ರ ದಾಸ್ ಅವರು ರಾಮಲಲ್ಲಾ ಗುಡಾರದಿಂದ ಭವ್ಯ ದೇವಾಲಯಕ್ಕೆ ಬರುವುದನ್ನು ವೀಕ್ಷಿಸಿದರು. ರಾಮಲಲ್ಲಾ ಭವ್ಯ ದೇವಾಲಯದಲ್ಲಿ ಸಿಂಹಾಸನಾರೋಹಣ ಮಾಡಿದ ನಂತರ ತನ್ನ ಕರ್ತವ್ಯಗಳಿಂದ ನಿವೃತ್ತಿ ಹೊಂದಬೇಕೆಂದು ಅವರು ವಿನಂತಿಸಿದರೂ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಆಡಳಿತ ಮಂಡಳಿ ನಿರಾಕರಿಸಿ, ತಾವು ಮುಖ್ಯ ಅರ್ಚಕರಾಗಿ ಮುಂದುವರಿಯುವಂತೆ ಕೇಳಿಕೊಂಡಿತ್ತು. ಅಲ್ಲದೆ, ಅವರು ಬಯಸಿದಾಗಲೆಲ್ಲಾ ದೇವಾಲಯದಲ್ಲಿ ರಾಮಲಲ್ಲಾನನ್ನು ಪೂಜಿಸಬಹುದು. ಅವರಿಗೆ ಯಾವುದೇ ಷರತ್ತುಗಳಿಲ್ಲ ಎಂದು ಆಡಳಿತ ಮಂಡಳಿ ಹೇಳಿತ್ತು.

100 ರೂಪಾಯಿ ಸಂಬಳದಿಂದ ವೃತ್ತಿ ಬದುಕು ಶುರು

ಆಚಾರ್ಯ ಸತ್ಯೇಂದ್ರ ದಾಸ್ ಅರ್ಚಕರಾಗಿ ನೇಮಕಗೊಂಡಾಗ, ಅವರಿಗೆ ಮಾಸಿಕ 100 ರೂ. ಸಂಬಳ ಸಿಗುತ್ತಿತ್ತು. ಭವ್ಯ ರಾಮ ಮಂದಿರ ನಿರ್ಮಾಣದ ನಂತರ ಅವರ ಸಂಬಳ 38500 ರೂ.ಗಳಿಗೆ ಏರಿತು. ಆಚಾರ್ಯ ಸತ್ಯೇಂದ್ರ ದಾಸ್ ಅವರ ನಿಧನದ ನಂತರ ಅಯೋಧ್ಯೆಯಲ್ಲಿ ಶೋಕದ ಅಲೆ ಆವರಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಆಚಾರ್ಯ ಸತ್ಯೇಂದ್ರ ದಾಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.