Trisha Krishnan: ನಟಿ ತ್ರಿಶಾ ಕೃಷ್ಣನ್ ಎಕ್ಸ್ ಖಾತೆ ಹ್ಯಾಕ್; ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ನಟಿ!
ಈಗಾಗಲೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತ್ರಿಶಾ ಅಭಿಮಾನಿ ಗಳನ್ನು ಎಚ್ಚರಿಸಿದ್ದಾರೆ. ನಟಿ ತನ್ನ ಟ್ವಿಟರ್ ಎಕ್ಸ್ ಅಕೌಂಟ್ ಹ್ಯಾಕ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಇದುವರೆಗೆ ಪ್ರಕಟವಾದ ಪೋಸ್ಟ್‌ಗಳಿಗೂ, ತನಗೂ ಯಾವುದೇ ಸಂಬಂಧವಿಲ್ಲ ಅದು ಸರಿ ಹೊಂದುವ ತನಕ ಏನೇ ಪೋಸ್ಟ್ ಆದರೂ ಅದು ನನ್ನಿಂದ ಅಲ್ಲ ಎಂದು ತ್ರಿಶಾ ಅವರು ಇನ್ಸ್ಟಾಗ್ರಾಮ್ನಲ್ಲಿ ಖಾತೆ ಹ್ಯಾಕ್ ಆಗಿರುವ ವಿಚಾರ ಹಂಚಿಕೊಂಡಿದ್ದಾರೆ.
![ನಟಿ ತ್ರಿಶಾ ಎಕ್ಸ್ ಅಕೌಂಟ್ ಹ್ಯಾಕ್! ಪೋಸ್ಟ್ ಹಂಚಿಕೊಂಡ ನಟಿ](https://cdn-vishwavani-prod.hindverse.com/media/original_images/Trisha.jpg)
ತ್ರಿಶಾ ಕೃಷ್ಣನ್
![Profile](https://vishwavani.news/static/img/user.png)
ನವದೆಹಲಿ: ನಟಿ ತ್ರಿಶಾ ಕೃಷ್ಣನ್ (Trisha Krishnan) ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತನ್ನ ಫೋಟೋ, ವಿಡಿಯೊ ಮೂಲಕ ಅಪ್ಡೇಟ್ ಹಂಚಿಕೊಳ್ಳುವ ತ್ರಿಶಾ ಸೌತ್ ಇಂಡಸ್ಟ್ರಿ ಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಇಂದಿಗೂ ಅಭಿಮಾನಿಗಳ ಎವರ್ ಗ್ರೀನ್ ನಟಿಯಾಗಿದ್ದು ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ನಟಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿ ಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇನ್ ಸ್ಟಾಗ್ರಾಂ ಅಕೌಂಟ್ ತೆರೆದ ನಟಿ, ತ್ರಿಶಾ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದ್ದು ಸೈಬರ್ ಕಿಡಿಗೇಡಿಗಳಿಂದ ಸಮಸ್ಯೆ ಆಗಿದೆ ಎಂದು ಈ ಬಗ್ಗೆ ತ್ರಿಶಾ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತ್ರಿಶಾ ಅಭಿಮಾನಿಗಳನ್ನು ಎಚ್ಚರಿಸಿದ್ದಾರೆ. ನಟಿ ತನ್ನ ಟ್ವಿಟರ್ ಎಕ್ಸ್ ಅಕೌಂಟ್ ಹ್ಯಾಕ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಇದುವರೆಗೆ ಪ್ರಕಟವಾದ ಪೋಸ್ಟ್‌ಗೂ, ತಮಗೂ ಯಾವುದೇ ಸಂಬಂಧವಿಲ್ಲ ಅದು ಸರಿ ಹೊಂದುವ ತನಕ ಏನೇ ಪೋಸ್ಟ್ ಆದರೂ ಅದು ನನ್ನಿಂದ ಅಲ್ಲ ಎಂದು ತ್ರಿಶಾ ಅವರು ಇನ್ಸ್ಟಾಗ್ರಾಮ್ನಲ್ಲಿ ಖಾತೆ ಹ್ಯಾಕ್ ಆಗಿರುವ ವಿಚಾರ ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಫೇಸ್ಬುಕ್ ಹ್ಯಾಕ್, ಹಣ ಹಾಕದಿರಲು ಮನವಿ
ಅಂದಹಾಗೆ, ತ್ರಿಶಾ ಅವರು ಹ್ಯಾಕರ್ಗಳ ಕೃತ್ಯಕ್ಕೆ ಗುರಿ ಆಗಿದ್ದು, ಇದೇ ಮೊದಲು ಅಲ್ಲ, ಈ ಹಿಂದೆ ಕೂಡ ಸೋಷಿಯಲ್ ಮೀಡಿಯಾ ಹ್ಯಾಕ್ ಆಗಿತ್ತು. ಈಗ ಮತ್ತೆ ಅವರನ್ನೇ ಹ್ಯಾಕರ್ಗಳು ಟಾರ್ಗೆಟ್ ಮಾಡಿದ್ದು, ಈ ಖಾತೆಗೆ 60 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ತ್ರಿಶಾ ಟ್ವಿಟ್ಟರ್ ಖಾತೆಯಲ್ಲಿ ಕ್ರಿಪ್ಟೋಕರೆನ್ಸಿ ಜಾಹೀರಾತುಗಳು ಕಾಣಿಸಿಕೊಂಡು ಆ ಪೋಸ್ಟ್ ಕೆಲವೇ ನಿಮಿಷಗಳಲ್ಲಿ ಡಿಲೀಟ್ ಆಗಿದ್ದು ತ್ರಿಶಾ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ನಟಿಯೇ ಸ್ಪಷ್ಟ ಪಡಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಪೊನ್ನಿಯನ್ ಸೆಲ್ವಂ ಚಿತ್ರದ ಮೂಲಕ ನಟಿ ತ್ರಿಶಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದ್ದು ಸದ್ಯ ಸಾಲು ಸಾಲು ಸಿನಿಮಾ ದಲ್ಲಿ ನಟಿ ಬ್ಯುಸಿ ಇದ್ದಾರೆ. ತ್ರಿಷಾ ಇದೀಗ ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಚಿತ್ರದಲ್ಲಿ ನಟಿಸುತ್ತಿದ್ದು ತೆಲುಗಿನಲ್ಲಿ ಚಿರಂಜೀವಿ ಜೊತೆ 'ವಿಶ್ವಂಭರ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಹಾಗೇ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ನಟಿಸುತ್ತಿರುವ 'ರಾಮ್' ಸಿನಿಮಾಗೂ ಇವರೇ ನಾಯಕಿಯಾಗಿದ್ದಾರೆ.