ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Boat Capsizes: ಮಧ್ಯ ಪ್ರದೇಶದ ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ದೋಣಿ ಮಗುಚಿ 7 ಮಂದಿ ನಾಪತ್ತೆ

ಮಧ್ಯ ಪ್ರದೇಶದ ಶಿವಪುರಿಯ ಮಾತಟಿಲಾ ಅಣೆಕಟ್ಟೆಯಲ್ಲಿ ಮಂಗಳವಾರ (ಮಾ. 18) ಸಂಜೆ ಭಕ್ತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 7 ಮಂದಿ ನಾಪತ್ತೆಯಾಗಿದ್ದು, ಈ ಪೈಕಿ ಕೆಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ನೆರವಿನಿಂದ ಸುಮಾರು 8 ಮಂದಿಯನ್ನು ರಕ್ಷಿಸಲಾಗಿದೆ.

ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ದೋಣಿ ಮಗುಚಿ 7 ಮಂದಿ ನಾಪತ್ತೆ

Profile Ramesh B Mar 18, 2025 11:26 PM

ಭೋಪಾಲ್‌: ಮಧ್ಯ ಪ್ರದೇಶದ ಶಿವಪುರಿಯ ಮಾತಟಿಲಾ ಅಣೆಕಟ್ಟೆಯಲ್ಲಿ(Matatila Dam in Shivpuri) ಮಂಗಳವಾರ (ಮಾ. 18) ಸಂಜೆ ಭಕ್ತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ (Boat Capsizes) 7 ಮಂದಿ ನಾಪತ್ತೆಯಾಗಿದ್ದು, ಈ ಪೈಕಿ ಕೆಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದವರ ಪೈಕಿ ಮೂವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಸ್ಥಳೀಯರ ನೆರವಿನಿಂದ ಸುಮಾರು 8 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೋಣಿಯಲ್ಲಿ ರಾಜವನ್ ಗ್ರಾಮದ 15 ನಿವಾಸಿಗಳನ್ನು ಅಣೆಕಟ್ಟೆಯ ಮಧ್ಯದಲ್ಲಿರುವ ದ್ವೀಪದ ಸಿದ್ಧ್ ಬಾಬಾ ದೇವಸ್ಥಾನಕ್ಕೆ ಕರೆದೊಯ್ಯುವಾಗ ಅವಘಡ ಸಂಭವಿಸಿದೆ.

ಪಿಛೋರೆ ಸಬ್‌ಡಿವಿಶನಲ್‌ ಆಫೀಸರ್‌ ಆಫ್‌ ಪೊಲೀಸ್‌ (Sub Divisional Officer of Police) ಪ್ರಶಾಂತ್‌ ಶರ್ಮಾ ಈ ಬಗ್ಗೆ ಮಾತನಾಡಿ, ʼʼಮಾತಟಿಲಾ ಅಣೆಕಟ್ಟೆಯ ದ್ವೀಪದಲ್ಲಿರುವ ದೇವಸ್ಥಾನಕ್ಕೆ 15 ಮಂದಿ ತೆರಳುತ್ತಿದ್ದಾಗ ದೋಣಿ ಮಗುಚಿ ಅನಾಹುತ ಸಂಭವಿಸಿದೆ. ಸದ್ಯ ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ.



ʼʼಸ್ಥಳೀಯರ ನೆರವಿನಿಂದ ನೀರಿನಲ್ಲಿ ಮುಳುಗುತ್ತಿದ್ದ 8 ಮಂದಿಯನ್ನು ಕಾಪಾಡಲಾಗಿದೆ. ನಾಪತ್ತೆಯಾದ 7 ಮಂದಿಯ ಪೈಕಿ 35ರಿಂದ 55 ವರ್ಷದೊಳಗಿನ 3 ಮಹಿಳೆಯರು ಮತ್ತು 7ರಿಂದ 15 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದ್ದಾರೆʼʼ ಎಂದು ವಿವರಿಸಿದ್ದಾರೆ. ಮುಳುಗು ತಜ್ಞರು ಸ್ಥಳದಲ್ಲಿ ನೆರೆದಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Submarine: ನೌಕಾಪಡೆಯ ಜಲಾಂತರ್ಗಾಮಿಗೆ ಮೀನುಗಾರಿಕಾ ದೋಣಿ ಡಿಕ್ಕಿ; ಇಬ್ಬರು ದಾರುಣ ಸಾವು

ದೋಣಿಯೊಳಗೆ ನೀರು ನುಗ್ಗುತ್ತಿರುವುದನ್ನು ಗಮನಿಸಿದ ಮಹಿಳೆಯೊಬ್ಬರು ಇತರರಿಗೆ ವಿಷಯ ತಿಳಿಸುವಷ್ಟರಲ್ಲಿ ಸಂಪೂರ್ಣ ಮುಳುಗಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸ್ಥಳದಲ್ಲಿ ಅದಿಕಾರಿಗಳು ಬೀಡುಬಿಟ್ಟಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಲಾಗುತ್ತಿದೆ.