ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಆರ್‌ಸಿಬಿ ಕಪ್‌ ಗೆಲ್ಲಬೇಕೆಂದು ಅಗ್ನಿಕೊಂಡ ಹಾಯ್ದ ಅಭಿಮಾನಿ!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 22 ರಂದು ಐಪಿಎಲ್ ಟೂರ್ನಿಯ ಮೊದಲ ಪಂದ್ಯ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರ ನಡುವೆ ಆರ್‌ಸಿಬಿ ಅಭಿಮಾನಿಯೊಬ್ಬರ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಈ ಅಭಿಮಾನಿ ಅಗ್ನೊಹೊಂಡದಲ್ಲಿ ನಡೆಯುತ್ತಿರುವುದು ಕಂಡು ಬಂದಿದೆ.

IPL 2025: ಆರ್‌ಸಿಬಿ ಕಪ್‌ ಗೆಲ್ಲಬೇಕೆಂದು ಅಗ್ನಿಕೊಂಡ ಹಾಯ್ದ ಅಭಿಮಾನಿ!

ಆರ್‌ಸಿಬಿ ಅಭಿಮಾನಿ

Profile Ramesh Kote Mar 18, 2025 10:17 PM

ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೂ (IPL 2025) ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಅಭಿಮಾನಿಗಳ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಅಭಿಮಾನಿಗಳು ಆರ್‌ಸಿಬಿ ಹೆಸರು ಹೇಳುತ್ತಾ ಅಗ್ನಿಕೊಂಡದಲ್ಲಿ ನಡೆಯುತ್ತಿದ್ದಾರೆ. ವರ್ಷಾನುಗಟ್ಟಲೆ ಆರ್‌ಸಿಬಿಗೆ ಬೆಂಬಲ ನೀಡುತ್ತಿರುವ ಇಂತಹ ಅಭಿಮಾನಿಗಳು ತಂಡದ ಗೆಲುವನ್ನು ತುಂಬಾನೇ ಸಂಭ್ರಮಿಸುತ್ತಾರೆ. ಸೋಲಿನಲ್ಲೂ ಆಟಗಾರರನ್ನು ಬೆಂಬಲಿಸುತ್ತಾರೆ. ಈ ಅಭಿಮಾನಿಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಇದನ್ನು ವೀಕ್ಷಿಸಿದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಅಭಿಮಾನಿಗಳು ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಇವರು ಬೆಂಕಿಯ ಕೆನ್ನಾಲಿಗೆಯ ಮೇಲೆ ನಡೆದು ಆರ್‌ಸಿಬಿ ಹೆಸರನ್ನು ಕೂಗುತ್ತಿದ್ದರು. ಇವರ ಪೈಕಿ ಒಬ್ಬ ಅಭಿಮಾನಿ ಆರ್‌ಸಿಬಿ ಜೆರ್ಸಿ ಧರಿಸಿದ್ದು, ಬೆಂಕಿಯ ಕೆನ್ನಾಲಿಗೆಯ ಮೇಲೆ ನಡೆಯು ಹೋಗುವ ಮೂಲಕ ಆರ್‌ಸಿಬಿ...ಆರ್‌ಸಿಬಿ ಎಂದು ಕೂಗಿದ್ದನು. ಅಕ್ಕಪಕ್ಕದಲ್ಲಿ ನಿಂತಿದ್ದವರು ಇದನ್ನು ನೋಡಿ ನಕ್ಕರು. ಇಲ್ಲಿಯವರೆಗೆ ಐಪಿಎಲ್ ಪ್ರಶಸ್ತಿ ಗೆಲ್ಲದ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದು. ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಆರ್‌ಸಿಬಿ ಅನೇಕ ನಾಯಕರು ಮತ್ತು ತರಬೇತುದಾರರನ್ನು ಬದಲಾಯಿಸಿದೆ. ಆದರೆ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ತಂಡದ ನಾಯಕತ್ವವನ್ನು ರಜತ್ ಪಾಟಿದಾರ್ ಅವರಿಗೆ ನೀಡಲಾಗಿದೆ. ಹೊಸ ಭರವಸೆಯೊಂದಿಗೆ ತಂಡವು ಮೈದಾನಕ್ಕಿಳಿಯಲಿದೆ.

IPL 2025: ʻಸ್ಟ್ರೈಕ್‌ ರೇಟ್‌ ಕಡೆಗೆ ಗಮನ ಕೊಡಬೇಡಿʼ-ಕುಚುಕು ಗೆಳೆಯ ವಿರಾಟ್‌ ಕೊಹ್ಲಿಗೆ ಎಬಿಡಿ ಮಹತ್ವದ ಸಲಹೆ!

ಅಂದಹಾಗೆ ಆರ್‌ಸಿಬಿ ಪ್ರತಿ ಋತುವಿನಲ್ಲಿ ಸಾಕಷ್ಟು ಟ್ರೋಲ್‌ಗಳಿಗೆ ಒಳಗಾಗುತ್ತದೆ. ಆರ್‌ಸಿಬಿ ಕೇವಲ ಹೃದಯಗಳನ್ನು ಗೆಲ್ಲಲು ಬರುತ್ತದೆಯೇ ಹೊರತು ಟ್ರೋಫಿಗಳನ್ನು ಗೆಲ್ಲಲು ಅಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂಡವನ್ನು ಸಮರ್ಥಿಸಿಕೊಳ್ಳುತ್ತಾರೆ. ಅಂದಹಾಗೆ, ಬೆಂಗಳೂರು ತಂಡ, ತನ್ನ ಮೊದಲ ಪಂದ್ಯವನ್ನು ಮಾರ್ಚ್ 22 ರಂದು ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಕಾದಾಟ ನಡೆಸಲಿದೆ. ಇದರ ನಡುವೆ ಆರ್‌ಸಿಬಿ ಅಭಿಮಾನಿಗಳ ಅಬ್ಬರ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸುತ್ತಿದೆ. ಅದರಂತೆ ಅಭಿಮಾನಿಯೊಬ್ಬ ಬೆಂಕಿಯ ಕೆನ್ನಾಲಿಗೆಯ ಮೇಲೆ ನಡೆದು ತಮ್ಮ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲಬೇಕೆಂದು ಪ್ರಾರ್ಥಿಸಿಕೊಂಡಿದ್ದಾನೆ.

ಅಗ್ನಿಕೊಂಡ ತುಳಿದ ಆರ್‌ಸಿಬಿ ಅಭಿಮಾನಿಯ ವಿಡಿಯೊ ಇಲ್ಲಿದೆ

ಆರ್‌ಸಿಬಿ ಅಭಿಮಾನಿಗಳು ತಮ್ಮ ಬೆಂಗಳೂರು ತಂಡದ ಬಗ್ಗೆ ತುಂಬಾ ಭಾವೋದ್ರಿಕ್ತರಾಗಿದ್ದಾರೆ. ಆರ್‌ಸಿಬಿ ಗೆಲ್ಲಲಿ ಅಥವಾ ಸೋಲಲಿ 17 ವರ್ಷಗಳಿಂದ ತಂಡವನ್ನು ಬೆಂಬಲಿಸುತ್ತಿದ್ದಾರೆ. ಅವರು ತಂಡದ ಗೆಲುವನ್ನು ಸಂಭ್ರಮಿಸುತ್ತಾರೆ ಮತ್ತು ಸೋಲಿನಲ್ಲೂ ಆಟಗಾರರನ್ನು ಬೆಂಬಲಿಸುತ್ತಾರೆ. ಆರ್‌ಸಿಬಿ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಂಡದ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ ಮತ್ತು ತಂಡವನ್ನು ಬೆಂಬಲಿಸುತ್ತಾರೆ.