Supreme Court: "ಪಾಕಿಸ್ತಾನಿ" ಎಂದು ಕರೆಯುವುದು ಕಾನೂನಿನ ಪ್ರಕಾರ ಅಪರಾಧವಲ್ಲ; ಸುಪ್ರೀಂ ಕೋರ್ಟ್
ಒಬ್ಬ ವ್ಯಕ್ತಿಯನ್ನು "ಮಿಯಾನ್-ಟಿಯಾನ್" ಅಥವಾ 'ಪಾಕಿಸ್ತಾನಿ' ಎಂದು ಕರೆಯುವುದು ಎಂದು ಕರೆಯುವುದು ಕಾನೂನಿನ ಪ್ರಕಾರ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೂರುದಾರರೊಬ್ಬರ ದೂರನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ಅಭಿಪ್ರಾಯವನ್ನು ನೀಡಿದೆ.

ಸುಪ್ರೀಂ ಕೋರ್ಟ್

ನವದೆಹಲಿ: ಒಬ್ಬ ವ್ಯಕ್ತಿಯನ್ನು "ಮಿಯಾನ್-ಟಿಯಾನ್" ಅಥವಾ 'ಪಾಕಿಸ್ತಾನಿ' ಎಂದು ಕರೆಯುವುದು ಕೆಟ್ಟ ಅಭ್ಯಾಸ. ಆದರೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 298 ರ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ತೀರ್ಪು ನೀಡಿದೆ. ಸರ್ಕಾರಿ ಸೇವಕನನ್ನು 'ಪಾಕಿಸ್ತಾನಿ' ಎಂದು ಕರೆದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧದ ಪ್ರಕರಣದ ತೀರ್ಪಿನ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ಅಭಿಪ್ರಾಯವನ್ನು ನೀಡಿದೆ.
ಸರ್ಕಾರಿ ನೌಕರನೊಬ್ಬ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಹರಿನಂದನ್ ಸಿಂಗ್ ಎಂಬುವವರು ಪಾಕಿಸ್ತಾನಿ' ಎಂಬ ಪದವನ್ನು ಬಳಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಉರ್ದು ಭಾಷಾಂತರಕಾರ ಹಾಗೂ ಸರ್ಕಾರಿ ನೌಕರ ಈ ಬಗ್ಗೆ ದೂರು ನೀಡಿದ್ದರು. ದೂರಿನಲ್ಲಿ, ಆರೋಪಿಯು ತನ್ನ ಧರ್ಮವನ್ನು ಉಲ್ಲೇಖಿಸಿ ನಿಂದನೆ ಮಾಡಿದ್ದಾನೆ, ಹಾಗೂ ತನ್ನ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾನೆ ಎಂದು ದೂರುದಾರ ಹೇಳಿದ್ದರು. ರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ) ಮತ್ತು 353 ರ ಅಡಿಯಲ್ಲಿ ಶಿಕ್ಷೆ ನೀಡಬೇಕು ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Ranveer Allahbadia : ಸಭ್ಯತೆ ಕಾಪಾಡಿಕೊಳ್ಳಿ' ಷರತ್ತು ವಿಧಿಸಿ ರಣವೀರ್ ಅಲಹಬಾದಿಯಾ ಶೋಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್
ಜಾರ್ಖಂಡ್ ಹೈಕೋರ್ಟ್‌ನ ಆದೇಶವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, "ಮೇಲ್ಮನವಿದಾರನನ್ನು 'ಮಿಯಾನ್-ಟಿಯಾನ್' ಮತ್ತು 'ಪಾಕಿಸ್ತಾನಿ' ಎಂದು ಕರೆಯುವ ಮೂಲಕ ಮಾಹಿತಿದಾರರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಆದರೆ ಆದರೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 298 ರ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಪ್ರಕಾರ, ಆರೋಪಿಯು ಶಾಂತಿ ಕದಡುವ ಯಾವುದೇ ಕೃತ್ಯ ಎಸಗಿಲ್ಲ. ಮೇಲ್ಮನವಿದಾರರು ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕ ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ) ಅನ್ವಯಿಸಲು ಯಾವುದೇ ಹಲ್ಲೆ ಅಥವಾ ಬಲಪ್ರಯೋಗ ಮಾಡಿಲ್ಲ" ಎಂದು ಕೋರ್ಟ್ ಹೇಳಿದೆ.