ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CBSE: 12 ನೇ ತರಗತಿ ಲೆಕ್ಕಶಾಸ್ತ್ರ ಪರೀಕ್ಷೆ; ಬೇಸಿಕ್‌ ಕ್ಯಾಲ್ಕುಲೇಟರ್‌ ಅನುಮತಿಗೆ ಪ್ರಸ್ತಾಪ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಆಡಳಿತ ಮಂಡಳಿಯು 2025-26ನೇ ಶೈಕ್ಷಣಿಕ ಅವಧಿಯಿಂದ 12ನೇ ತರಗತಿಯ ಲೆಕ್ಕಶಾಸ್ತ್ರ ಪರೀಕ್ಷೆಯಲ್ಲಿ ಬೇಸಿಕ್‌ ಕ್ಯಾಲ್ಕುಲೇಟರ್‌ಗಳನ್ನು ಬಳಸಲು ಅನುಮತಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಮತ್ತೊಂದು ಪ್ರಮುಖ ಸುಧಾರಣೆಯಲ್ಲಿ, ಸಿಬಿಎಸ್‌ಇ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನಕ್ಕಾಗಿ ಆನ್-ಸ್ಕ್ರೀನ್ ಮಾರ್ಕಿಂಗ್ ಅನ್ನು ಪರಿಚಯಿಸಲು ನಿರ್ಧರಿಸಿದೆ.

12ನೇ ತರಗತಿ ಲೆಕ್ಕಶಾಸ್ತ್ರ ಎಕ್ಸಾಂ;ಕ್ಯಾಲ್ಕುಲೇಟರ್‌ ಅನುಮತಿಗೆ ಪ್ರಸ್ತಾಪ

ಸಾಂದರ್ಭಿಕ ಚಿತ್ರ

Profile Vishakha Bhat Mar 25, 2025 10:34 AM

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) ಆಡಳಿತ ಮಂಡಳಿಯು 2025-26ನೇ ಶೈಕ್ಷಣಿಕ ಅವಧಿಯಿಂದ 12ನೇ ತರಗತಿಯ ಲೆಕ್ಕಶಾಸ್ತ್ರ ಪರೀಕ್ಷೆಯಲ್ಲಿ ಬೇಸಿಕ್‌ ಕ್ಯಾಲ್ಕುಲೇಟರ್‌ಗಳನ್ನು ಬಳಸಲು ಅನುಮತಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಸಿಬಿಎಸ್‌ಇಯ 140 ನೇ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಗಳನ್ನು ಅನುಮೋದಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರೋಗ್ರಾಮೆಬಲ್ ಅಲ್ಲದ ಕ್ಯಾಲ್ಕುಲೇಟರ್‌ಗಳನ್ನು ಅನುಮತಿಸಲಾಗುವುದು, ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮತ್ತು ಶೇಕಡಾವಾರು ಲೆಕ್ಕಾಚಾರಗಳಂತಹ ಗಣಿತವನ್ನು ಮಾಡಲು ಮಾತ್ರ ಇದು ಸೀಮಿತವಾಗಿರುತ್ತದೆ ಎಂದು ಅನುಮೋದನೆಯಲ್ಲಿ ತಿಳಿಸಲಾಗಿದೆ.

"ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುಧಾರಿತ ಅಥವಾ ಪ್ರೋಗ್ರಾಮೆಬಲ್ ಸಾಧನಗಳ ಬಳಕೆಯನ್ನು ತಡೆಯಲು ಕ್ಯಾಲ್ಕುಲೇಟರ್‌ಗಳ ಮಾದರಿಗಳ ಕುರಿತು ಸ್ವಷ್ಟ ಮಾರ್ಗಸೂಚಿಗಳನ್ನು ನೀಡಲು ಸಮಿತಿ ರಚನೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕ್ರಮದಿಂದ ವಿದ್ಯಾರ್ಥಿಗಳು ವಿಶ್ಲೇಷಣಾತ್ಮಕ ಮತ್ತು ಕೇಸ್‌ ಸ್ಟಡಿಗಳಂತಹ ಪ್ರಶ್ನೆಗಳಿಗೆ ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಡಿಜಿಟಲ್ ಮೌಲ್ಯಮಾಪನ ಮತ್ತು ಹೊಸ ಮರು-ಮೌಲ್ಯಮಾಪನ ಪ್ರಕ್ರಿಯೆ

ಮತ್ತೊಂದು ಪ್ರಮುಖ ಸುಧಾರಣೆಯಲ್ಲಿ, ಸಿಬಿಎಸ್‌ಇ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನಕ್ಕಾಗಿ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಅನ್ನು ಪರಿಚಯಿಸಲು ನಿರ್ಧರಿಸಿದೆ. ಆರಂಭದಲ್ಲಿ ಆಯ್ದ ವಿಷಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಿರುವ ಈ ವ್ಯವಸ್ಥೆಯು ಡಿಜಿಟಲ್ ಮಾರ್ಕಿಂಗ್‌ಗಾಗಿ ಉತ್ತರ ಪತ್ರಿಕೆಗಳನ್ನು ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುತ್ತದೆ, ಇದು ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ. 2024-25 ಶೈಕ್ಷಣಿಕ ಅವಧಿಯಿಂದ ವಿಜ್ಞಾನ ಮತ್ತು ಗಣಿತ ಪೂರಕ ಪರೀಕ್ಷೆಗಳು ಮತ್ತು ಮರುಮೌಲ್ಯಮಾಪನ ಪ್ರಕರಣಗಳನ್ನು ಒಳಗೊಂಡಂತೆ 10 ಮತ್ತು 12 ನೇ ತರಗತಿಗಳಿಗೆ OSM ಅನ್ನು ಕಾರ್ಯಗತಗೊಳಿಸಲು ಮಂಡಳಿಯು ಗುರಿಯನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ: CBSE Syllabus: ರಾಜ್ಯ ಪಠ್ಯಕ್ರಮದ 6-10ನೇ ತರಗತಿಗಳಿಗೆ ಗಣಿತ, ವಿಜ್ಞಾನ ವಿಷಯಗಳಲ್ಲಿ ಸಿಬಿಎಸ್‌ಇ ಸಿಲಬಸ್ ಅಳವಡಿಕೆ

ಹೆಚ್ಚುವರಿಯಾಗಿ, ಸಿಬಿಎಸ್‌ಇ ತಮ್ಮ ಅಂಕಗಳಿಂದ ಅತೃಪ್ತರಾದ ವಿದ್ಯಾರ್ಥಿಗಳಿಗೆ ಹೊಸ ಮರು-ಮೌಲ್ಯಮಾಪನ ಪ್ರಕ್ರಿಯೆಯನ್ನು ಪರಿಚಯಿಸಿದೆ. ನಡೆಯುತ್ತಿರುವ 2025 ರ ಮಂಡಳಿಯ ಪರೀಕ್ಷೆಗಳಿಂದ ಅನ್ವಯವಾಗುವ ಈ ವ್ಯವಸ್ಥೆಯು ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯಯುತ ಮೌಲ್ಯಮಾಪನ ಕಾರ್ಯವಿಧಾನವನ್ನು ಒದಗಿಸಲು ಪ್ರಯತ್ನಿಸುತ್ತದೆ.