ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Shardul Thakur: ಅನ್‌ಸೋಲ್ಡ್‌ ಶಾರ್ದೂಲ್‌ ಇಂದು ಲೀಡಿಂಗ್‌ ವಿಕೆಟ್‌ ಟೇಕರ್‌

IPL 2025: ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 2 ಓವರ್‌ಗಳಲ್ಲಿ 19 ರನ್‌ ನೀಡಿ 2 ವಿಕೆಟ್‌ ಉರುಳಿಸಿದ್ದ ಶಾರ್ದೂಲ್‌, ಗುರುವಾರ ನಡೆದಿದ್ದ ಬಲಿಷ್ಠ ಬ್ಯಾಟರ್‌ಗಳನ್ನು ಹೊಂದಿದ ಹೈದರಾಬಾದ್‌(SRH Vs LSG) ವಿರುದ್ಧ 34 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅನ್‌ಸೋಲ್ಡ್‌ ಶಾರ್ದೂಲ್ ಇಂದು ಲೀಡಿಂಗ್‌ ವಿಕೆಟ್‌ ಟೇಕರ್‌

Profile Abhilash BC Mar 28, 2025 12:50 PM

ಹೈದರಾಬಾದ್‌: ಐಪಿಎಲ್‌(IPL) 2024ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಶಾರ್ದೂಲ್‌ ಠಾಕೂರ್‌(Shardul Thakur) ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಹೀಗಾಗಿ ಅನ್‌ಸೋಲ್ಡ್‌ ಆಗಿದ್ದ ಅವರು ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಆಡಲು ಮುಂದಾಗಿದ್ದರು. ಆದರೆ, ಲಕ್ನೋ(Lucknow Super Giants) ತಂಡದ ಪ್ರಮುಖ ವೇಗಿ ಮೊಹ್ಸಿನ್‌ ಖಾನ್‌ ಗಾಯಾಳಾಗಿದ್ದರಿಂದ, ಕೊನೇ ಕ್ಷಣದಲ್ಲಿ ಶಾರ್ದೂಲ್‌ ಬದಲಿ ಆಟಗಾರನಾಗಿ ಅವಕಾಶ ಗಿಟ್ಟಿಸಿಕೊಂಡರು. ಇದೀಗ ಅವರು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನದ ಮೂಲಕ ತಮ್ಮನ್ನು ಖರೀದಿಸದ ಫ್ರಾಂಚೈಸಿಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 2 ಓವರ್‌ಗಳಲ್ಲಿ 19 ರನ್‌ ನೀಡಿ 2 ವಿಕೆಟ್‌ ಉರುಳಿಸಿದ್ದ ಶಾರ್ದೂಲ್‌, ಗುರುವಾರ ನಡೆದಿದ್ದ ಬಲಿಷ್ಠ ಬ್ಯಾಟರ್‌ಗಳನ್ನು ಹೊಂದಿದ ಹೈದರಾಬಾದ್‌(SRH Vs LSG) ವಿರುದ್ಧ 34 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜತೆಗೆ ಗರಿಷ್ಠ ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಪರ್ಪಲ್‌ ಕ್ಯಾಪ್‌ ಕೂಡ ತನ್ನದಾಗಿಸಿಕೊಂಡಿದ್ದಾರೆ. ಸದ್ಯ ಅವರು 6 ವಿಕೆಟ್‌ ಪಡೆದಿದ್ದಾರೆ.

ಇದನ್ನೂ ಓದಿ IPL 2025: ತಂಡದ ಸಿಬ್ಬಂದಿಯನ್ನು ಸ್ವಿಮ್ಮಿಂಗ್‌ ಪೂಲ್‌ಗೆ ಎತ್ತಿ ಬಿಸಾಕಿದ ರೋಹಿತ್‌ ಟೀಮ್‌

ಪಂದ್ಯದ ಬಳಿಕ ಮಾತನಾಡಿದ ಅವರು, 'ಏರಿಳಿತಗಳು ಬದುಕಿನ ಭಾಗ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಐಪಿಎಲ್‌ನಲ್ಲಿ ಆಡಲಾಗದಿದ್ದರೆ, ಕೌಂಟಿಯಲ್ಲಿ ಆಡಲು ಯೋಜಿಸಿದ್ದೆ. ರಣಜಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾಗ ಜಹೀರ್‌ ಖಾನ್‌ (ಲಖನೌ ತಂಡದ ಮೆಂಟರ್‌) ಕರೆ ಮಾಡಿದ್ದರು. ಬದಲಿ ಆಟಗಾರನಾಗಿ ನಿಮಗೆ ಅವಕಾಶ ಸಿಗಬಹುದು ಎಂದು ತಿಳಿಸಿದ್ದರು' ಎಂದರು.

ಶಾರ್ದೂಲ್‌ ಅವರನ್ನು ಲಕ್ನೋ ತಂಡ 2 ಕೋಟಿ ರೂ. ಮೀಸಲು ಬೆಲೆಗೆ ಖರೀದಿಸಿತ್ತು. ಇದುವರೆಗೆ ಅವರು 6 ತಂಡಗಳ ಪರ 97 ಪಂದ್ಯಗಳನ್ನಾಡಿ ಭರ್ತಿ 100 ವಿಕೆಟ್‌ ಕಲೆಹಾಕಿದ್ದಾರೆ.



ಗೆಲುವಿನ ಖಾತೆ ತೆರೆದ ಲಕ್ನೋ

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 200 ಪ್ಲಸ್‌ ಮೊತ್ತ ಪೇರಿಸಿಯೂ ಪಂದ್ಯದಲ್ಲಿ ಸೋಲು ಕಂಡಿದ್ದ ಲಕ್ನೋ ತಂಡ ಹೈದರಾಬಾದ್‌ ವಿರುದ್ಧ 5 ವಿಕೆಟ್‌ ಗೆಲುವಿನೊಂದಿಗೆ ಪುಡಿದೆದ್ದಿದೆ. ಗುರುವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಸೋಲು ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 9 ವಿಕೆಟಿಗೆ 190 ರನ್‌ ಗಳಿಸಿದ್ದರೆ, ಜವಾಬಿತ್ತ ಲಕ್ನೋ ತಂಡವು 16.1 ಓವರ್‌ಗಳಲ್ಲಿ 5 ವಿಕೆಟಿಗೆ 193 ರನ್‌ ಗಳಿಸಿ ಜಯ ಸಾಧಿಸಿತು.

ಚೇಸಿಂಗ್‌ ವೇಳೆ ಲಕ್ನೋ ತಂಡ ಆರಂಭದಿಂದಲೇ ಬಿರುಸಿನ ಆಟಕ್ಕೆ ಇಳಿಯಿತು. ಮಿಚೆಲ್‌ ಮಾರ್ಷ್‌ ಮತ್ತು ನಿಕೋಲಸ್‌ ಪೂರಣ್‌ ಅವರ ಭರ್ಜರಿ ಆಟದಿಂದಾಗಿ ತಂಡ ಮೇಲುಗೈ ಸಾಧಿಸಿತು. ಈ ಜೋಡಿ ದ್ವಿತೀಯ ವಿಕೆಟಿಗೆ 116 ರನ್‌ ಪೇರಿಸಿದರು. ಮಾರ್ಷ್‌ 52 ರನ್ನಿಗೆ ಔಟಾದರೆ ಪೂರಣ್‌ ಕೇವಲ 26 ಎಸೆತದಲ್ಲಿ 70 ರನ್‌ ಗಳಿಸಿ ಔಟಾದರು.