ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪತ್ನಿಯ ಅಕ್ರಮ ಸಂಬಂಧ ತಿಳಿದು ಪ್ರಿಯಕರನೊಂದಿಗೇ ಮದ್ವೆ ಮಾಡಿಸಿದ ಪತಿ !

ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ, ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಸಂತಕಬೀರ್​​ನಗರ ಜಿಲ್ಲೆಯಲ್ಲಿ ನಡೆದಿದೆ. ಪತಿಯೇ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಕಾನೂನಾತ್ಮಕವಾಗಿ ವಿವಾಹ ಮಾಡಿಸಿದ್ದಾನೆ. ಕೋರ್ಟ್​ನಲ್ಲಿ ಆತನೇ ನೋಟರಿ ಮಾಡಿಸಿ, ದೇವಸ್ಥಾನದಲ್ಲಿ ತಾನೇ ಖುದ್ದಾಗಿ ನಿಂತು ತಾಳಿ ಕಟ್ಟಿಸಿದ್ದಾನೆ.

ಪ್ರಿಯಕರನ ಜೊತೆ ಪತ್ನಿಗೆ ಮದುವೆ ಮಾಡಿಸಿದ ಪತಿ

Profile Vishakha Bhat Mar 28, 2025 8:57 AM

ಲಖನೌ: ಉತ್ತರ ಪ್ರದೇಶದಲ್ಲಿ ಮಹಿಳೆಯರೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡುತ್ತಿರುವ ಘಟನೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಮೀರತ್‌ನಲ್ಲಿ ಮಹಿಳೆ ಮತ್ತು ಆಕೆಯ ಪ್ರೇಮಿ ತನ್ನ ಗಂಡನನ್ನು ಕೊಂದು, ಆತನ ದೇಹವನ್ನು ಕತ್ತರಿಸಿ ಸಿಮೆಂಟ್ ಡ್ರಮ್‌ನಲ್ಲಿ ಎಸೆದ ನಂತರ ಮತ್ತು ಅಂತಹುದೇ ಮತ್ತೊಂದು ಘಟನೆ ಔರೈಯಾದಲ್ಲಿ ಬೆಳಕಿಗೆ ಬಂದಿತ್ತು. ಇಂತಹ ಘಟನೆಗಳು ರಾಜ್ಯದಲ್ಲಿ ಭೀತಿ ಹುಟ್ಟಿಸಿದೆ. ಇಲ್ಲೊಬ್ಬ ಪತಿ ಅದೇ ಭಯದಿಂದ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಸದ್ಯ ಮದುವೆಯ ವಿಡಿಯೋ ಎಲ್ಲೆಡೆ ವೈರಲ್‌ (Viral Video) ಆಗಿದೆ.

ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ, ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಸಂತಕಬೀರ್​​ನಗರ ಜಿಲ್ಲೆಯಲ್ಲಿ ನಡೆದಿದೆ. ಪತಿಯೇ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಕಾನೂನಾತ್ಮಕವಾಗಿ ವಿವಾಹ ಮಾಡಿಸಿದ್ದಾನೆ. ಕೋರ್ಟ್​ನಲ್ಲಿ ಆತನೇ ನೋಟರಿ ಮಾಡಿಸಿ, ದೇವಸ್ಥಾನದಲ್ಲಿ ತಾನೇ ಖುದ್ದಾಗಿ ನಿಂತು ತಾಳಿ ಕಟ್ಟಿಸಿದ್ದಾನೆ. ಕತಾರ್ ಜೋತ್ ಗ್ರಾಮದ ಬಬ್ಲು, 2017 ರಲ್ಲಿ ಗೋರಖ್‌ಪುರ ಜಿಲ್ಲೆಯ ರಾಧಿಕಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬಬ್ಲು ಬೇರೆ ರಾಜ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ, ಅವರ ಪತ್ನಿ ಸುಮಾರು ಒಂದೂವರೆ ವರ್ಷಗಳಿಂದ ತಮ್ಮ ಗ್ರಾಮದ ವಿಕಾಸ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಆತನಿಗೆ ತಿಳಿದು ಬಂದಿದೆ.

ಈ ಬಗ್ಗೆ ತಿಳಿದ ವ್ಯಕ್ತಿಯು ಅವರಿಬ್ಬರಿಗೆ ವಿವಾಹ ಮಾಡಿಸುವ ಅಚ್ಚರಿಯ ನಿರ್ಧಾರಕ್ಕೆ ಬಂದಿದ್ದಾನೆ. ಇತ್ತೀಚೆಗೆ ಪತ್ನಿ ಮತ್ತು ಆಕೆಯ ಪ್ರಿಯಕರನ ಸಮೇತ ಸ್ಥಳೀಯ ನ್ಯಾಯಾಲಯಕ್ಕೆ ತೆರಳಿ ಅವರಿಬ್ಬರ ವಿವಾಹದ ಅಫಿಡವಿಟ್​ ಮಾಡಿಸಿದ್ದಾನೆ. ಬಳಿಕ ದೇವಸ್ಥಾನಕ್ಕೆ ಕರೆದುಕೊಂಡು ಬಂದು ತನ್ನ ಎದುರಿನಲ್ಲೇ ಪತ್ನಿಗೆ ಪ್ರಿಯಕರನಿಂದ ತಾಳಿ ಕಟ್ಟಿಸಿದ್ದಾನೆ. ಇನ್ನು ಮುಂದೆ ಆಕೆಯು ತನ್ನ ಪ್ರಿಯಕರನ ಜೊತೆಗೆ ಇರಲಿ. ಇಬ್ಬರು ಮಕ್ಕಳ ಜೊತೆ ತಾನು ಇರುವುದಾಗಿ ತಿಳಿಸಿದ್ದಾನೆ.

ಈ ಸುದ್ದಿಯನ್ನೂ ಓದಿ: Haryana Horror: ಮೀರತ್‌ ಘಟನೆ ಬೆನ್ನಲ್ಲೇ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ! ಪತ್ನಿಯ ಪ್ರಿಯಕರನನ್ನು ಜೀವಂತ ಸಮಾಧಿ ಮಾಡಿದ ಪತಿರಾಯ

ಪತ್ನಿಗೆ ವಿವಾಹ ಮಾಡಸಲು ಕಾರಣವೇನೆಂದು ಆತನ ಬಳಿ ಕೇಳಿದಾಗ ನನಗೆ ಆಗಬಹುದಾದ ಹಾನಿಯನ್ನು ತಪ್ಪಿಸಲು ನಾನು ಅವರ ಮದುವೆಯನ್ನು ಏರ್ಪಡಿಸಲು ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ, ಗಂಡಂದಿರು ತಮ್ಮ ಹೆಂಡತಿಯರಿಂದ ಕೊಲ್ಲಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ. ಮೀರತ್‌ನಲ್ಲಿ ಏನಾಯಿತು ಎಂಬುದನ್ನು ನೋಡಿದ ನಂತರ, ನನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಲು ನಿರ್ಧರಿಸಿದೆ ಎಂದು ಬಬ್ಲು ಹೇಳಿದ್ದಾನೆ.