Viral Video: ಮಲ್ಲಿಕಾರ್ಜುನ ಖರ್ಗೆಗೆ ಪ್ರತ್ಯೇಕ ಕುರ್ಚಿ ಇಟ್ಟು ಟೀಕೆಗೆ ಗುರಿಯಾದ ಕಾಂಗ್ರೆಸ್
ಪಕ್ಷದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು 'ದಲಿತ ವಿರೋಧಿ' ಎಂದು ಕರೆದಿದೆ.


ಗಾಂಧಿನಗರ: ಪಕ್ಷದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ (Congress) ಅಧ್ಯಕ್ಷ (Congress president) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಪ್ರತ್ಯೇಕ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯು ಕಾಂಗ್ರೆಸ್ ಅನ್ನು 'ದಲಿತ ವಿರೋಧಿ' ಎಂದು ಕರೆದಿದೆ. ಮಾತ್ರವಲ್ಲ ಕಾಂಗ್ರೆಸ್ ಖರ್ಗೆ ಅವರನ್ನು ಅಗೌರವಿಸಿದೆ ಎಂದು ಆರೋಪಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೊಕ್ಕೆ ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. ಈ ವಿಡಿಯೊ ಬಿಜೆಪಿಯ ಗಮನ ಸೆಳೆದಿದ್ದು, ಇದನ್ನು ಕಾಂಗ್ರೆಸ್ ಮೇಲೆ ಟೀಕಾಸ್ತ್ರವನ್ನು ಪ್ರಯೋಗಿಸಲು ಬಳಸಿಕೊಂಡಿದೆ.
ವಿಡಿಯೊದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತ್ಯೇಕ ಕುರ್ಚಿಯ ಮೇಲೆ ಕುಳಿತಿದ್ದರೆ, ಪಕ್ಷದ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಮತ್ತು ಅಂಬಿಕಾ ಸೋನಿ ಅವರು ಸೋಫಾದ ಮೇಲೆ ಕುಳಿತಿರುವುದು ಕಾಣಬಹುದು.
ರಾಹುಲ್ ಮತ್ತು ಸೋನಿಯಾ ಗಾಂಧಿ ಮುಂದಿನ ಸಾಲಿನಲ್ಲಿದ್ದು, ಖರ್ಗೆ ಅವರ ಪಕ್ಕದಲ್ಲೇ ಕುರ್ಚಿಯಲ್ಲಿ ಕುಳಿತಿದ್ದರು. ಅನಂತರ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿ ಜತೆಗೆ ಸೋನಿ ಅವರನ್ನು ಮುಂದಿನ ಸಾಲಿಗೆ ಆಹ್ವಾನಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
पहले खड़गे जी का सम्मान करना सीखो। वह कांग्रेस के राष्ट्रीय अध्यक्ष हैं। उनकी कुर्सी किनारे पर लगाने का क्या मतलब था? यह साफ़ दर्शाता है कि कांग्रेस दलित विरोधी है। https://t.co/cPtZUJXUFB pic.twitter.com/6u4kZYxcsN
— Amit Malviya (@amitmalviya) April 9, 2025
ಈ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಕಾಂಗ್ರೆಸ್ ಖರ್ಗೆಯವರನ್ನು ಗೌರವಿಸಲು ಕಲಿಯಬೇಕು. ಪಕ್ಷದ ಮುಖ್ಯಸ್ಥರು ದಲಿತರಾಗಿರುವುದರಿಂದ ಅವರ ವಿರುದ್ಧ ಪಕ್ಷವು ತಾರತಮ್ಯ ಮಾಡಿದೆ ಎಂದು ಆರೋಪಿಸಿದರು.
ಖರ್ಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು. ಅವರ ಕುರ್ಚಿಯನ್ನು ಪಕ್ಕಕ್ಕೆ ಇಡುವುದರ ಅರ್ಥವೇನು? ಇದು ಕಾಂಗ್ರೆಸ್ ದಲಿತ ವಿರೋಧಿ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಮಾಳವೀಯ ಹೇಳಿದ್ದಾರೆ.
ಇದನ್ನೂ ಓದಿ: Viral Video: ಸ್ಪೀಡಾಗಿ ಬಂದು ಮಹಿಳೆ ಸೇರಿ 5 ಮಕ್ಕಳ ಮೇಲೆ ಹರಿದ ಕಾರು; ಡೆಡ್ಲಿ ಅಪಘಾತದ ವಿಡಿಯೊ ವೈರಲ್
ತೆಲಂಗಾಣದ ಬಿಜೆಪಿ ವಕ್ತಾರ ತೂಳ್ಳ ವೀರೇಂದ್ರ ಗೌಡ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿ, ನಿಮ್ಮ ನಕಲಿ ನೈತಿಕತೆ ಸಾಕು ರಾಹುಲ್ ಗಾಂಧಿ! ಸಮಾನತೆಯನ್ನು ಬೋಧಿಸುವ ಮೊದಲು, ನಿಮ್ಮ ಸ್ವಂತ ಪಕ್ಷದ ದಲಿತ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತ್ಯೇಕ ಕುರ್ಚಿಯನ್ನು ಏಕೆ ಇರಿಸಲಾಯಿತು ಎಂಬುದನ್ನು ವಿವರಿಸಿ ಎಂದು ಹೇಳಿದ್ದಾರೆ.
ಇದು ಕಾಂಗ್ರೆಸ್‌ನ ನಿಜವಾದ ಮುಖ. ದಲಿತ ನಾಯಕರನ್ನು ಸಾರ್ವಜನಿಕವಾಗಿ ಅವಮಾನಿಸಿ ಅನಂತರ ಮೊಸಳೆ ಕಣ್ಣೀರು ಸುರಿಸುತ್ತಾರೆ. ನಿಮ್ಮ ಪಕ್ಷವು ನಿಮ್ಮ ಮತ ಬ್ಯಾಂಕ್ ಅನ್ನು ಸಮಾಧಾನಪಡಿಸಲು ದಶಕಗಳಿಂದ ಸಂವಿಧಾನವನ್ನು ಬಳಸುತ್ತಿರುವಾಗ ಮತ್ತು ದುರುಪಯೋಗಪಡಿಸಿಕೊಂಡಾಗ ನಮಗೆ ಸಂವಿಧಾನದ ಬಗ್ಗೆ ಉಪನ್ಯಾಸ ನೀಡಲು ಬರಬೇಡಿ ಎಂದು ಅವರು ಹೇಳಿದ್ದಾರೆ.