ಕಾಂಗ್ರೆಸ್ ಶಾಸಕನ ಬೆನ್ನು ಬಿದ್ದ ಕಳ್ಳರು; ಒಂದು ತಿಂಗಳಲ್ಲಿ ಮೂರನೇ ಬಾರಿ ಕಳವು
ರಾಜಸ್ಥಾನದ ದೌಸಾದ ಕಾಂಗ್ರೆಸ್ ಶಾಸಕ ದೀನ್ ದಯಾಳ್ ಬೈರ್ವಾ ಅವರ ಮನೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಮೂರು ಬಾರಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಜೂನ್ 11ರಂದು ಕೇಂದ್ರ ಮಾಜಿ ಸಚಿವ ರಾಜೇಶ್ ಪೈಲಟ್ ಅವರ ನಿಧನದ 25ನೇ ವರ್ಷದ ಪ್ರಾರ್ಥನಾ ಸಭೆಯಲ್ಲಿ ಶಾಸಕರ ಮೊಬೈಲ್ ಫೋನ್ ಕಳ್ಳತನವಾಗಿತ್ತು. ಇದಾದ ಬಳಿಕ, ಅವರ ನಿವಾಸದಿಂದ ಬೈಕ್ ಕಳ್ಳತನ ಮಾಡಲಾಗಿತ್ತು. ಈಗ ಅವರ ಮನೆಯಿಂದ ಟ್ರ್ಯಾಕ್ಟರ್-ಟ್ರಾಲಿಯನ್ನು ಕದಿಯಲಾಗಿದೆ.

ಕಾಂಗ್ರೆಸ್ ಶಾಸಕ ದೀನ್ ದಯಾಳ್ ಬೈರ್ವಾ.

ಜೈಪುರ: ರಾಜಸ್ಥಾನದ (Rajasthan) ದೌಸಾದ (Dausa) ಕಾಂಗ್ರೆಸ್ ಶಾಸಕ ದೀನ್ ದಯಾಳ್ ಬೈರ್ವಾ (Dayal Bairwa) ಅವರ ಮನೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಮೂರು ಬಾರಿ ಕಳ್ಳತನ (Stolen) ನಡೆದಿರುವ ಘಟನೆ ನಡೆದಿದೆ. ಜೂನ್ 11ರಂದು ಕೇಂದ್ರ ಮಾಜಿ ಸಚಿವ ರಾಜೇಶ್ ಪೈಲಟ್ ಅವರ ನಿಧನದ 25ನೇ ವರ್ಷದ ಪ್ರಾರ್ಥನಾ ಸಭೆಯಲ್ಲಿ ಶಾಸಕರ ಮೊಬೈಲ್ ಫೋನ್ ಕಳ್ಳತನವಾಗಿತ್ತು. ಇದಾದ ಬಳಿಕ ಅವರ ನಿವಾಸದಿಂದ ಬೈಕ್ ಕಳ್ಳತನ ಮಾಡಲಾಗಿತ್ತು. ಈಗ ಅವರ ಮನೆಯಿಂದ ಟ್ರ್ಯಾಕ್ಟರ್-ಟ್ರಾಲಿಯನ್ನು ಕದಿಯಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಬೈರ್ವಾ, ಶಾಸಕರ ಮನೆಯಲ್ಲೇ ಈ ರೀತಿ ಕಳ್ಳತನವಾದರೆ, ಸಾಮಾನ್ಯ ಜನರ ಸುರಕ್ಷತೆ ಕಥೆ ಏನು? ಈ ಘಟನೆಗಳು ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಡಿಮೆ ಮಾಡುತ್ತಿವೆ ಎಂದು ಹೇಳಿದ್ದಾರೆ. "ಈ ಹಿಂದೆ ಒಂದು ಮೊಳೆಯೂ ಕಳುವಾಗಿರಲಿಲ್ಲ, ಆದರೆ ಈಗ ಮೂರು ಬಾರಿ ಕಳ್ಳತನವಾಗಿದೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬೈಕ್ ಕಳ್ಳತನದ ವೇಳೆ ಮನೆಯ ಮುಂಭಾಗದ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ. ಈಗಾಗಿ ದೃಶ್ಯ ಸೆರೆಯಾಗಿರಲಿಲ್ಲ. ಟ್ರ್ಯಾಕ್ಟರ್ ಕಳ್ಳತನದ ಸಂದರ್ಭದಲ್ಲಿ, ನಿರ್ಮಾಣ ಕಾರ್ಯಕ್ಕಾಗಿ ಕ್ಯಾಮೆರಾವನ್ನು ತೆಗೆದಿಡಲಾಗಿತ್ತು. ಕ್ಯಾಮೆರಾ ಇದ್ದರೂ ಕಳ್ಳರು ಮುಖವನ್ನು ಮುಚ್ಚಿಕೊಳ್ಳುವುದರಿಂದ ಅವರನ್ನು ತಡೆಯಲು ಸಾಧ್ಯವಾಗಲ್ಲ ಎಂದು ಬೈರ್ವಾ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ರೀಲ್ಸ್‌ಗಾಗಿ ಮಗಳನ್ನು ಅಪಾಯಕ್ಕೆ ತಳ್ಳಿದ ಪೋಷಕರು; ಶಾಕಿಂಗ್ ವಿಡಿಯೊ ವೈರಲ್!
ದೌಸಾ ಪೊಲೀಸ್ ಅಧೀಕ್ಷಕ ಸಾಗರ್, "ಟ್ರ್ಯಾಕ್ಟರ್-ಟ್ರಾಲಿ ಕಳ್ಳತನದ ಬಗ್ಗೆ ಇನ್ನೂ ದೂರು ಬಂದಿಲ್ಲ. ಮೊಬೈಲ್ ಕಳ್ಳತನದ ಬಗ್ಗೆ ದೂರು ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ. ಬೈರ್ವಾ ಮಂಗಳವಾರ ಬೆಳಗ್ಗೆ ಎಸ್‌ಪಿಯೊಂದಿಗೆ ಮಾತನಾಡಿದ್ದು, ಅವರು ಕಾನೂನು ಕ್ರಮದ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ರಾಜಸ್ಥಾನದ ಬಿಜೆಪಿ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಟೀಕಿಸಿದೆ. ವಿರೋಧ ಪಕ್ಷದ ನಾಯಕ ಟಿಕಾ ರಾಮ್ ಜುಲಿ, "ಶಾಸಕರೇ ಸುರಕ್ಷಿತರಲ್ಲದಿರುವಾಗ ರಾಜ್ಯದ ಕಾನೂನು ಸ್ಥಿತಿ ಗಂಭೀರವಾಗಿದೆ. ಕಳ್ಳರು, ದರೋಡೆಕೋರರು ಮತ್ತು ಮಾಫಿಯಾಗಳಿಗೆ ಭಯವಿಲ್ಲ, ಪೊಲೀಸ್ ಆಡಳಿತ ಮೌನವಾಗಿದೆ” ಎಂದು ಆರೋಪಿಸಿದ್ದಾರೆ. ಗೃಹ ಇಲಾಖೆಯನ್ನು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ವಹಿಸಿಕೊಂಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ದೌಸಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೈರ್ವಾ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ