ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ʻಸೋತರೂ ಪರವಾಗಿಲ್ಲʼ-ಗೌತಮ್‌ ಗಂಭೀರ್‌ಗೆ ಯೋಗರಾಜ್‌ ಸಿಂಗ್‌ ಸಾಥ್‌!

Yograj Singh on Gautam Gambhir: ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಭಾರತ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಸೋತರೂ ಅವರ ಧೈರ್ಯಗೆಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ಭಾರತ ತಂಡ ಗೆಲ್ಲುವ ಬಗ್ಗೆ ನಂಬಿಕೆಯಿದೆ: ಯೋಗರಾಜ್‌ ಸಿಂಗ್‌!

ಗೌತಮ್‌ ಗಂಭೀರ್‌ಗೆ ಬೆಂಬಲ ವ್ಯಕ್ತಪಡಿಸಿದ ಯೋಗರಾಜ್‌ ಸಿಂಗ್.

Profile Ramesh Kote Jul 8, 2025 9:34 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ ಭಾರತ ತಂಡವನ್ನು ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ (Yogarj Singh) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ವಿಶೇಷವಾಗಿ ನಾಯಕ ಶುಭಮನ್‌ ಗಿಲ್‌ (Shubman Gill) ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ವಿಶೇಷವಾಗಿ ಹೊಗಳಿದ್ದಾರೆ. ಗಿಲ್‌ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಟೆಸ್ಟ್‌ ಸರಣಿಯನ್ನು ಗೆಲ್ಲಲಿದೆ. ಒಂದು ಗೆದ್ದಿಲ್ಲವಾದರೆ, ಗೌತಮ್‌ ಗಂಭೀರ್‌ ಸೇರಿದಂತೆ ಟೀಮ್‌ ಮ್ಯಾನೇಜ್‌ಮೆಂಟ್‌ ಧೈರ್ಯಗೆಡಬಾರದು ಎಂದು ಟೀಮ್‌ ಇಂಡಿಯಾ ಮಾಜಿ ವೇಗಿ ಸಲಹೆ ನೀಡಿದ್ದಾರೆ.

ಭಾರತ ತಂಡ ಐದು ಶತಕಗಳ ಹೊರತಾಗಿಯೂ ಭಾರತ ತಂಡ ಲೀಡ್ಸ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆದರೆ, ಎಜ್‌ಬಾಸ್ಟನ್‌ನಲ್ಲಿ ಬಲವಾಗಿ ಕಮ್‌ಬ್ಯಾಕ್‌ ಮಾಡಿದ್ದ ಟೀಮ್‌ ಇಂಡಿಯಾ, ಶುಭಮನ್‌ ಗಿಲ್‌ ಬ್ಯಾಟಿಂಗ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಮತ್ತು ಆಕಾಶ್‌ ದೀಪ್‌ ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ 336 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿದೆ.

IND vs ENG: ʻನಿಮ್ಮ ನಾಯಕತ್ವಕ್ಕೆ ಕಠಿಣ ಸವಾಲುʼ-ಬೆನ್‌ ಸ್ಟೋಕ್ಸ್‌ಗೆ ಮೈಕಲ್‌ ಅಥರ್ಟನ್‌ ವಾರ್ನಿಂಗ್!

ಎಜ್‌ಬಾಸ್ಟನ್‌ ಟೆಸ್ಟ್‌ ಗೆಲುವಿನ ಬಳಿಕ ಮಾತನಾಡಿದ ಯೋಗರಾಜ್‌ ಸಿಂಗ್‌, ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ ಬೆಂಬಲ ನೀಡಿದ್ದಾರೆ ಹಾಗೂ ಅವರು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು, ಅವರ ಬಗ್ಗೆ ಜನರು ಮಾತನಾಡಬಾರದು ಎಂದು ಆಗ್ರಹಿಸಿದ್ದಾರೆ.

"ಭಾರತೀಯ ಕ್ರಿಕೆಟಿಗರು ನಿಯಮಿತವಾಗಿ ಬೆಳೆಯುತ್ತಿದ್ದಾರೆ ಹಾಗೂ ಆಟದಲ್ಲಿ ಸುಧಾರಣೆಯನ್ನು ಕಂಡುಕೊಳ್ಳುತ್ತಿದ್ದಾರೆ. ನಾವು ಯಾವಾಗಲೂ ಅವರಿಗೆ ಬೆಂಬಲವನ್ನು ಸೂಚಿಸುತ್ತೇವೆ. ಗೌತಮ್‌ ಗಂಭೀರ್‌ ಬಗ್ಗೆ ನಾವು ಮಾತನಾಡಬಾರದು, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೌತಮ್‌ ಗಂಭೀರ್‌, ಯುವರಾಜ್‌ ಸಿಂಗ್‌ ಹಾಗೂ ರಾಹುಲ್‌ ಅವರು ಕ್ರಿಕೆಟ್‌ಗೆ ತಮ್ಮ ಕೊಡುಗೆಯನ್ನು ಹಿಂತಿರುಗಿಸಿದ್ದಾರೆ, ಏಕೆಂದರೆ ಅವರು ಕಿಕೆಟ್‌ನಿಂದ ಸಾಕಷ್ಟು ಪಡೆದುಕೊಂಡಿದ್ದಾರೆ," ಎಂದು ಯೋಗರಾಜ್‌ ಸಿಂಗ್‌ ಎಎನ್‌ಐಗೆ ತಿಳಿಸಿದ್ದಾರೆ.

IND vs ENG: ಸತತ ವೈಫಲ್ಯ ಅನುಭವಿಸಿದ ಝ್ಯಾಕ್‌ ಕ್ರಾವ್ಲಿ, ಕ್ರಿಸ್‌ ವೋಕ್ಸ್‌ ವಿರುದ್ಧ ಜೆಫ್ರಿ ಬಾಯ್ಕಟ್‌ ಆಕ್ರೋಶ!

"ಒಂದು ವೇಳೆ ನಮ್ಮ ತಂಡ ಈ ಸರಣಿಯನ್ನು ಸೋತರೂ, ನಾವು ಅವರನ್ನು ಧೈರ್ಯಗೆಡುವಂತೆ ಮಾಡಬಾರದು. ಒಂದು ವೇಳೆ ಸೋತರೆ, ನೀವು ಅವರಿಂದ ವಿವರಣೆ ಕೇಳಬಾರದು ಹಾಗೂ ಒಂದು ವೇಳೆ ಗೆದ್ದರೂ ಅಷ್ಟೇ ನೀವು ವಿವರಣೆ ನೀಡಬಾರದು. ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್‌ ಸರಣಿಯನ್ನು ಗೆಲ್ಲಲಿದೆ ಎಂದು ಭಾವಿಸುತ್ತೇನೆ," ಎಂದು ಯುವರಾಜ್‌ ಸಿಂಗ್‌ ತಂದೆ ಹೇಳಿದ್ದಾರೆ.

ಗೌತಮ್‌ ಗಂಭೀರ್‌ ಕೋಚ್‌ ಆದ ಬಳಿಕ ಭಾರತ ತಂಡ ಕೇವಲ ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಮಾತ್ರ ಗೆದ್ದಿದೆ. ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 2-0 ಅಂತರದಲ್ಲಿ ಗೆದ್ದಿತ್ತು. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಒಂದು ಪಂದ್ಯವನ್ನು ಗೆದ್ದಿತ್ತು.