Electricity Demand: ಕೋರೊನಾ ನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ವಿದ್ಯುತ್ ಬೇಡಿಕೆ ಭಾರಿ ಕುಸಿತ: ಕಾರಣ ಇಲ್ಲಿದೆ ನೋಡಿ!
ಈ ಬಾರಿಯ ಬೇಸಗೆಯಲ್ಲಿ ತಾಪಮಾನ ಕಡಿಮೆಯಿದ್ದ ಕಾರಣ, ಏರ್ ಕಂಡೀಷನರ್ ಬಳಕೆ ಗಣನೀಯವಾಗಿ ಇಳಿಕೆಯಾಗಿತ್ತು. ಪರಿಣಾಮ ದೇಶದ ವಿದ್ಯುತ್ ಬೇಡಿಕೆ ಶೇ. 1.5ರಷ್ಟು ಕಡಿಮೆಯಾಗಿದೆ. ಇದು ಕೋವಿಡ್ ನಂತರದ ಇದೇ ಮೊದಲ ಕುಸಿತವಾಗಿದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ ತಿಳಿಸಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಈ ಬಾರಿಯ ಬೇಸಗೆಯಲ್ಲಿ ತಾಪಮಾನ ತುಸು ಕಡಿಮೆ ದಾಖಲಾಗಿದ್ದ ಕಾರಣ ದೇಶದಲ್ಲಿ, ಏರ್ ಕಂಡೀಷನರ್ (AC) ಬಳಕೆ ಗಣನೀಯವಾಗಿ ಇಳಿಕೆಯಾಗಿತ್ತು. ಇದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿನ ವಿದ್ಯುತ್ ಬೇಡಿಕೆ ಶೇ. 1.5ರಷ್ಟು ಕುಸಿದಿದೆ (Electricity Demand). ಇದು ಕೋವಿಡ್ ನಂತರ ದಾಖಲಿಸಿದ ಮೊದಲ ಕುಸಿತ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
2025ರ ಏಪ್ರಿಲ್-ಜೂನ್ ಅವಧಿಯಲ್ಲಿ ವಿದ್ಯುತ್ ಬಳಕೆ ಒಂದು ಗಂಟೆಗೆ 445.8 ಬಿಲಿಯನ್ ಕಿಲೋವಾಟ್ ಇಳಿಯಿತು. 2020ರ ಕೊರೊನಾ ಲಾಕ್‌ಡೌನ್ ನಂತರ ಇದೇ ಮೊದಲ ಬಾರಿಗೆ ಈ ರೀತಿ ವಿದ್ಯುತ್ ಬೇಡಿಕೆ ಇಳಿದಿರುವುದಾಗಿ ಬ್ಲೂಂಬರ್ಗ್ ವರದಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Kanwar Yatra: ಹಿಂದೂಗಳ ಕನ್ವರ್ ಯಾತ್ರೆ ವೇಳೆ ಗಲಾಟೆ; ಪವಿತ್ರ ಕಲಶದ ಮೇಲೆ 'ಉಗುಳಿದ' ಮುಸ್ಲಿಂ
ಹವಾಮಾನ ವೈಪರಿತ್ಯದ ಪರಿಣಾಮದಿಂದ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರ ಮತ್ತು ಕೈಗಾರಿಕೆಗಳು ಮುಂದಿನ ತಯಾರಿಕೆ ಹಾಗೂ ಹೂಡಿಕೆ ಯೋಜನೆಗಳನ್ನು ರೂಪಿಸಲು ಸಾವಾಲುಗಳನ್ನು ಎದುರಿಸುತ್ತಿವೆ. ಈ ವರ್ಷ ತಾಪಮಾನ ಇಳಿಕೆಯಾಗಿ, ಏರ್ ಕಂಡಿಷನರ್‌ಗಳ ಬಳಕೆ ಕಡಿಮೆಯಾದ ಪರಿಣಾಮ, ದೇಶದ ವಿದ್ಯುತ್ ಉತ್ಪಾದನೆಯ ಬಹುಪಾಲು ಹೊರೆ ಹೊತ್ತಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ಕೊಂಚ ರಿಲೀಫ್ ಸಿಕ್ಕಿದೆ. ಈ ಸ್ಥಾವರಗಳ ಉತ್ಪಾದನೆ ಶೇ. 76.6ರಿಂದ 69.6ಕ್ಕೆ ಇಳಿದಿದೆ. ಈ ಮೂಲಕ ಕೋಲ್ಫೈಡ್ ಉತ್ಪಾದನೆ ಶೇ. 7 ಇಳಿಕೆಯಾಗಿದೆ. ಇದಕ್ಕೆ ವಿರುದ್ಧವಾಗಿ, ನವೀಕರಣೀಯ ಶಕ್ತಿ ಉತ್ಪಾದನೆ ಹೆಚ್ಚಾಗಿ ಸೂರ್ಯ ಮತ್ತು ಗಾಳಿ ಮೂಲದ ವಿದ್ಯುತ್ ಉತ್ಪಾದನೆ ಶೇ. 23ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಜಲಶಕ್ತಿ ಮತ್ತು ಅಣುಶಕ್ತಿ ಉತ್ಪಾದನೆಯಲ್ಲೂ ಏರಿಕೆಯಾಗಿದೆ.
ಸಾಮಾನ್ಯವಾಗಿ ದೇಶದಲ್ಲಿ ಏಪ್ರಿಲ್-ಜೂನ್ ತಿಂಗಳಲ್ಲಿ ವಿದ್ಯುತ್‌ಗೆ ಅಪಾರ ಬೇಡಿಕೆ ಕಂಡು ಬರುತ್ತದೆ. ಆದರೆ ಈ ವರ್ಷ ಬಿಸಿಲು ಕಡಿಮೆಯಿರುವ ಕಾರಣ, ವಿದ್ಯುತ್ ಬೇಡಿಕೆ ಇಳಿಕೆಯಾಗಿರುವುದು ಸ್ಪಷ್ಟವಾಗಿದೆ.