ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kundai Matigimu: ಅಪಾಯಕಾರಿ ಥ್ರೋ ಎಸೆತ ಕಾರಣ ಜಿಂಬಾಬ್ವೆ ವೇಗಿಗೆ ದಂಡ, ಒಂದು ಡಿಮೆರಿಟ್‌ ಅಂಕ!

ಬುಲವಾಯೊದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಅನುಚಿತ ಮತ್ತು ಅಪಾಯಕಾರಿ ವರ್ತನೆ ತೋರಿದ ಜಿಂಬಾಬ್ವೆ ವೇಗಿ ಕುಂಡೈ ಮತಿಗಿಮು ಅವರಿಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಅಪಾಯಕಾರಿ ಥ್ರೋ ಎಸೆತ: ಜಿಂಬಾಬ್ವೆ ವೇಗಿಗೆ ದಂಡ, ಒಂದು ಡಿಮೆರಿಟ್‌ ಅಂಕ!

ಕುಂಡೈ ಮತಿಗಿಮುಗೆ ದಂಡ ಹಾಗೂ ಒಂದು ಡಿಮೆರಿಟ್‌ ಅಂಕ ನೀಡಲಾಗಿದೆ.

Profile Ramesh Kote Jul 8, 2025 10:23 PM

ಹರಾರೆ:‌ ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಟೆಸ್ಟ್ ಪಂದ್ಯದ (SA vs ZIM) ವೇಳೆ ಅನುಚಿತ ಮತ್ತು ಅಪಾಯಕಾರಿ ವರ್ತನೆ ತೋರಿದ ಜಿಂಬಾಬ್ವೆ ವೇಗಿ ಜಿಂಬಾಬ್ವೆ (Zimbabwe) ವೇಗಿ ಕುಂಡೈ ಮತಿಗಿಮುಗೆ (Kundai Matigimu) ಪಂದ್ಯದ ಸಂಭಾವನೆಯನ್ನು ಶೇ 15 ರಷ್ಟು ದಂಡ ಹಾಗೂ ಒಂದು ಡಿಮೆರಿಟ್‌ ಅಂಕವನ್ನು ನೀಡಲಾಗಿದೆ. ಇಲ್ಲಿನ ಬುಲವಾಯೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಆರಂಭಿಕ ದಿನ ಬ್ಯಾಟ್‌ ಮಾಡುತ್ತಿದ್ದ ಲುವಾನ್ ಡ್ರೆ ಪ್ರೆಟೋರಿಯಸ್ ಕಡೆಗೆ ಅಪಾಯಕಾರಿಯಾಗಿ ಚೆಂಡನ್ನು ಎಸೆದಿದ್ದರು. ಈ ಎಸೆತದಿಂದ ಪ್ರೆಟೋರಿಯಸ್‌ಗೆ ಕೈಗೆ ಚೆಂಡು ತಗುಲಿತ್ತು ಹಾಗೂ ಈ ಕಾರಣದಿಂದ ಅವರು ದಕ್ಷಿಣ ಆಫ್ರಿಕಾ ಇನಿಂಗ್ಸ್‌ ನಂತರವೂ ಅವರು ಕೆಲ ಕಾಲ ಮೈದಾನದಿಂದ ಹೊರಗೆ ಉಳಿದಿದ್ದರು.

ಈ ಬಗ್ಗೆ ಐಸಿಸಿ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ, ಲುವಾನ್-ಡ್ರೆ ಪ್ರೆಟೋರಿಯಸ್ ಬ್ಯಾಟ್‌ ಮಾಡುತ್ತಿದ್ದ ವೇಳೆ ಕುಂಡೈ ಮತಿಗಿಮುಗೆ ಚೆಂಡನ್ನು ಅಪಾಯಕಾರಿಯಾಗಿ ಬ್ಯಾಟ್ಸ್‌ಮನ್‌ ಕಡೆಗೆ ಎಸೆದಿದ್ದರು. ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅನುಚಿತ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು (ಯಾವುದೇ ಇತರ ಕ್ರಿಕೆಟ್‌ ಉಪಕರಣಗಳು) ಆಟಗಾರನ ಮೇಲೆ ಅಥವಾ ಹತ್ತಿರಕ್ಕೆ ಎಸೆಯುವುದಕ್ಕೆ ಸಂಬಂಧಿಸಿದೆ. ಈಗಾಗಲೇ ಕುಂಡೈ ಮತಿಗಿಮುಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಹಾಗೂ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಹಾಗಾಗಿ ಯಾವುದೇ ವಿಚಾರಣೆ ಇರುವುದಿಲ್ಲ," ಎಂದು ತಿಳಿಸಿದೆ.

ZIM vs SA: ಜಿಂಬಾಬ್ವೆ ವಿರುದ್ಧ 328 ರನ್‌ ಅಂತರದ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ತಂಡಕ್ಕೆ ಇನಿಂಗ್ಸ್‌ ಜಯ

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇನಿಂಗ್ಸ್‌ ಹಾಗೂ 236 ರನ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಆ ಮೂಲಕ ಒಂದೂ ಪಂದ್ಯವನ್ನು ಗೆಲ್ಲದೆ ಆತಿಥೇಯ ಜಿಂಬಾಬ್ವೆ ತಂಡ ಭಾರಿ ನಿರಾಶೆಯನ್ನು ಅನುಭವಿಸಿತು.

ಈ ಪಂದ್ಯದಲ್ಲಿ ನಾಯಕ ವಿಯಾನ್ ಮುಲ್ಡರ್ ಅವರ 367 ರನ್‌ಗಳ ಇನಿಂಗ್ಸ್ ಎಲ್ಲರ ಗಮನ ಸೆಳೆದಿದೆ. 400 ರೆನ್‌ಗಳ ದಾಖಲೆಯನ್ನು ಮುರಿಯುವ ಅವಕಾಶವಿದ್ದರೂ, ವೆಸ್ಟ್ ಇಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾ ಅವರ ಐತಿಹಾಸಿಕ ದಾಖಲೆ ಮುರಿಯದೆ ನಾಯಕ ಮುಲ್ಡರ್ ಡಿಕ್ಲೇರ್ ಮಾಡಿಕೊಂಡಿದ್ದರು. ಗಾಯದ ಕಾರಣದಿಂದ ಕೇಶವ್ ಮಹಾರಾಜ್ ಪಂದ್ಯದಿಂದ ಹೊರಗುಳಿದ ಕಾರಣ ಮೊದಲ ಬಾರಿ ಮುಲ್ಡರ್ ಅವರು ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು.



ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 626 ರನ್‌ಗಳಿಗೆ ಡಿಕ್ಲೆರ್‌ ಮಾಡಿಕೊಂಡಿತ್ತು. ಜಿಂಬಾಬ್ವೆ ಪರ ಟಣಕ ಚಿವಾಂಗ ಹಾಗೂ ಕುಂಡೈ ಮತಿಗಿಮುಗೆ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು. ಬಳಿಕ ಪ್ರಥಮ ಇನಿಂಗ್ಸ್‌ ನಡೆಸಿದ್ದ ಜಿಂಬಾಬ್ವೆ 170 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿಯೂ 220 ರನ್‌ಗಳಿಗೆ ಆಲ್‌ಔಟ್‌ ಆಯಿತು.