Vijay Deverakonda: ರಶ್ಮಿಕಾ ಜತೆಗಿನ ಸಂಬಂಧದ ಬಗ್ಗೆ ನಟ ವಿಜಯ್ ದೇವರಕೊಂಡ ಹೇಳಿದ್ದಿಷ್ಟು
ವಿಜಯ್ ದೇವಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ʼಗೀತಾ ಗೋವಿಂದಂʼ ತೆಲುಗು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಈ ಚಿತ್ರ ಬಳಿಕ ಇವರಿಬ್ಬರ ನಡುವೆ ಏನೊ ಇದೆ ಎಂಬ ವದಂತಿ ಕೇಳಿ ಬರುತ್ತಲೇ ಇದೆ. ಆದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈ ವಿಚಾರಕ್ಕೆ ಸರಿಯಾಗಿ ಸ್ಪಷ್ಟನೆ ನೀಡಲಿಲ್ಲ. ಇವರಿಬ್ಬರು ಶೀಘ್ರವೇ ವಿವಾಹವಾಗ್ತಾರೆ ಎಂಬ ಮಾತು ಸಹ ಕೇಳಿ ಬರುತ್ತಿದ್ದು ಇದೀಗ ನಟ ವಿಜಯ್ ದೇವರಕೊಂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Vijay Deverakonda

ಹೈದರಾಬಾದ್: ʼಗೀತಾ ಗೋವಿಂದಂʼ, ʼಅರ್ಜುನ್ ರೆಡ್ಡಿʼ ತೆಲುಗು ಚಿತ್ರಗಳ ಖ್ಯಾತಿಯ ನಟ ವಿಜಯ್ ದೇವರ ಕೊಂಡ (Vijay Deverakonda) ಇತ್ತೀಚೆಗೆ ಸಿನಿಮಾ ಹೊರತಾಗಿ ವೈಯಕ್ತಿಕ ವಿಚಾರ ವಾಗಿಯೂ ಹೆಚ್ಚು ಸುದ್ದಿಯಲ್ಲಿದ್ದಾರೆ. ಕನ್ನಡತಿ ರಶ್ಮಿಕಾ ಮಂದಣ್ಣ ಜತೆ ವಿಜಯ್ ದೇವರಕೊಂಡ ತೆರೆ ಹಂಚಿಕೊಂಡಿದ್ದ ʼಗೀತಾ ಗೋವಿಂದಂʼ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಅದಾದ ಬಳಿಕ ಇವರಿಬ್ಬರ ನಡುವೆ ಏನೊ ಇದೆ ಎಂಬ ವದಂತಿ ಕೇಳಿ ಬರುತ್ತಲೇ ಇದೆ. ಆದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈ ವಿಚಾರಕ್ಕೆ ಸರಿಯಾಗಿ ಸ್ಪಷ್ಟನೆ ನೀಡಿಲ್ಲ. ಇವರಿಬ್ಬರು ಶೀಘ್ರವೇ ವಿವಾಹವಾಗ್ತಾರೆ ಎಂಬ ಮಾತು ಸಹ ಕೇಳಿ ಬರುತ್ತಿದ್ದು, ಇದೀಗ ನಟ ವಿಜಯ್ ದೇವರಕೊಂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗಷ್ಟೆ ನಟ ವಿಜಯ್ ದೇವರಕೊಂಡ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು ಅಲ್ಲಿ ತಮ್ಮ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಟನಾಗುವ ಮೊದಲು ನನ್ನನ್ನು ಯಾರು ಕೂಡ ಗುರುತಿಸಿರಲಿಲ್ಲ. ಆಗೆಲ್ಲ ನನ್ನ ವೈಯಕ್ತಿಕ ವಿಚಾರ ನನಗೆ ಮಾತ್ರವೇ ಸೀಮಿತವಾಗಿತ್ತು. ಆದರೆ ಈಗ ನನ್ನ ವಿಚಾರದ ಬಗ್ಗೆ ನನಗಿಂತ ಬೇರೆಯವರಿಗೆ ಕುತೂಹಲ ಹೆಚ್ಚು ಎಂದಿದ್ದಾರೆ. ಸಿನಿಮಾ ನಟನೆಗಾಗಿ ನಾನು ಈಗಾಗಲೇ ಸಾಕಷ್ಟು ಭಾರಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಎಷ್ಟು ಯಶಸ್ವಿಯಾಗಿದ್ದೇನೆ ಎಂಬುದು ನನಗೆ ತಿಳಿದಿಲ್ಲ. ಆದರೆ ಖಂಡಿತವಾಗಿ ನಾನು ಯಶಸ್ಸಿಗಾಗಿ ನಿತ್ಯ ಪ್ರಯತ್ನ ಪಡುತ್ತಲೇ ಇರುತ್ತೇನೆ. ಯಶಸ್ಸಿನಿಂದ ದೊರೆಯುವ ಗೌರವದ ಬಗ್ಗೆ ಖುಷಿ ಇದೆ. ಆದರೆ ನನ್ನ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡನ್ನು ಪ್ರತ್ಯೇಕವಾಗಿ ಕಾಣುತ್ತೇನೆ. ನನ್ನ ವೈಯಕ್ತಿಕ ವಿಚಾರವನ್ನು ಆದಷ್ಟು ಗೌಪ್ಯವಾಗಿ ಇಡಲು ಬಯಸುವುದಾಗಿ ತಿಳಿಸಿದ್ದಾರೆ.
ಬಳಿಕ ಸಂದರ್ಶಕ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಪ್ರಶ್ನೆ ಕೇಳಿದ್ದು ಅದಕ್ಕೂ ವಿಜಯ್ ದೇವರ ಕೊಂಡ ಉತ್ತರಿಸಿದ್ದಾರೆ. ಈ ಬಗ್ಗೆ ಈಗಲೇ ಏನನ್ನು ಹೇಳಿಕೊಳ್ಳಲು ನನಗೆ ಇಷ್ಟ ಇಲ್ಲ. ನನಗೆ ನನ್ನ ಜೀವನದ ಏಳು ಬೀಳು, ನನ್ನ ಸಿನಿಮಾಗಳ ಹಿಟ್ ಫ್ಲಾಪ್ ಎಲ್ಲವೂ ಸ್ವೀಕರಿಸುವುದು ಇಷ್ಟ. ಅವುಗಳೆಲ್ಲವನ್ನೂ ಸಮನಾಗಿ ಕಾಣುವೆ...ನನಗೆ ಗೊತ್ತು ಈಗ ನನ್ನ ವಯಸ್ಸು 35. ಹಾಗೆಂದು ಖಂಡಿತ ನಾನು ಒಂಟಿಯಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ:Elumale Movie: 'ಏಳುಮಲೆʼ ಟೈಟಲ್ ಟೀಸರ್ ರಿಲೀಸ್! ತರುಣ್ ಸುಧೀರ್ ಸಿನಿಮಾಗೆ ಶಿವಣ್ಣ-ಪ್ರೇಮ್ ಸಾಥ್
ಈ ಮೂಲಕ ತಾನು ಡೇಟಿಂಗ್‌ನಲ್ಲಿ ಇರುವುದಾಗಿ ವಿಜಯ್ ದೇವರಕೊಂಡ ಒಪ್ಪಿದ್ದಾರೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅವರಿಬ್ಬರು ಈಗಾಗಲೇ ಫಾರಿನ್ ಟ್ರಿಪ್, ಸಿನಿಮಾ ಈವೆಂಟ್‌ಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಕೂಡ ಹೈದಾರಾಬಾದ್‌ಗೆ ತೆರಳಿದಾಗಲೆಲ್ಲ ವಿಜಯ್ ದೇವರಕೊಂಡ ಮನೆಗೆ ಭೇಟಿ ನೀಡುತ್ತಿರುವುದು ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೆ ಇವರಿಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲೂ ಒಟ್ಟಿಗೆ ಪ್ರಯಾಣಿಸಿದ್ದು ವೈರಲ್ ಆಗಿತ್ತು.