Babydoll Archita Phukan: ಅಡಲ್ಟ್ ಸ್ಟಾರ್ ಕೆಂಡ್ರಾ ಲಸ್ಟ್ ಜತೆ ಫೋಟೊ ಶೇರ್ ಮಾಡಿದ ಬೇಬಿ ಡಾಲ್ ಅರ್ಚಿತಾ ಫೂಕೂನ್
ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಬೇಬಿಡಾಲ್ ಆರ್ಚಿ ಎಂದೇ ಖ್ಯಾತರಾಗಿರುವ ಅರ್ಚಿತಾ ಫುಕನ್ ಸದ್ಯ ಬಹಳಷ್ಟು ಸುದ್ದಿಯಲ್ಲಿದ್ದಾರೆ. ಅವರು ಅಮೆರಿಕದ ಪ್ರಮುಖ ಅಡಲ್ಟ್ ಸ್ಟಾರ್ ಕೆಂಡ್ರಾ ಲಸ್ಟ್ ಜತೆ ಫೋಟೊ ತೆಗೆಸಿಕೊಂಡಿದ್ದು ಬೇಬಿಡಾಲ್ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದರಾ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಉಂಟಾಗಿದೆ.

Assam's Babydoll Archi


ಅಸ್ಸಾಂನ ಮಾಜಿ ಮಾಡೆಲ್ ಹಾಗೂ ಆರ್ಸಿಬಿ ಅಭಿಮಾನಿ ಆರ್ಚಿತಾ ಫೂಕನ್ ಅಮೆರಿಕದ ಅಡಲ್ಟ್ ಸ್ಟಾರ್ ಕೆಂಡ್ರಾ ಜತೆ ಫೋಟೋ ಹಂಚಿಕೊಂಡಿದ್ದಾರೆ. ಹೀಗಾಗಿ ಅವರು ಅಡಲ್ಟ್ ಇಂಡಸ್ಟ್ರಿಗೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.

ಇನ್ಸ್ಟಾಗ್ರಾಮ್ನಲ್ಲಿ ಆಗಾಗ ಬೋಲ್ಡ್ ಫೋಟೊ ಶೇರ್ ಮಾಡುವ ಇವರು ಈ ಬಾರಿ ಖ್ಯಾತ ನೀಲಿಚಿತ್ರಗಳ ತಾರೆ ಕೆಂಡ್ರಾ ಲಸ್ಟ್ ಅವರ ಜತೆ ಫೋಟೊವನ್ನು ಹಂಚಿಕೊಂಡಿರುವುದು ಭಾರೀ ಕುತೂಹಲವನ್ನು ಉಂಟು ಮಾಡಿದೆ.

ಕೆಂಡ್ರಾ ಅವರನ್ನು ಮೊದಲ ಬಾರಿಗೆ ಭೇಟಿಯಾಗುವುದು ನಿಜಕ್ಕೂ ಮರೆಯಲಾಗದ ಅನುಭವ. ಅವರು ಆತ್ಮೀಯವಾಗಿ ಮಾತನಾಡಿಸಿದ ರೀತಿ, ಪ್ರೋತ್ಸಾಹದಾಯಕ ಮಾತುಗಳು ನನಗೆ ಬಹಳಷ್ಟು ಪ್ರೇರಣೆಯಾಗಿದೆ. ಇಂತಹ ಐಕಾನ್ ಜತೆ ಸಂಪರ್ಕ ಹೊಂದಲು ಮತ್ತು ಅವಕಾಶಕ್ಕಾಗಿ ಕೃತಜ್ಞರಾಗಿರುತ್ತೇನೆ ಎಂದು ಆರ್ಚಿತಾ ಫೋಟೊ ಜತೆಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ನೋಡಿದ ನೆಟ್ಟಿಗರು ಅಸ್ಸಾಂ ಮೂಲದ ಬೆಡಗಿ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರ ಬಹುದಾ ಎಂದು ಚರ್ಚೆ ಮಾಡುತ್ತಿದ್ದಾರೆ. ಈ ಕುರಿತು ಅವರು ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇನ್ನೊಂದು ಪೋಸ್ಟ್ನಲ್ಲಿ, ಅವರು ತಾನು ಪ್ಲೆಬಾಯ್ ಮ್ಯಾಗ್ಜಿನ್, ವೆಬ್ಸೈಟ್ಗೆ ಒಳ ಉಡುಪುಗಳ ಮಾಡೆಲ್ ಆಗಿ ಆಯ್ಕೆಯಾಗಿದ್ದೇನೆ ಎಂದು ಕೂಡ ಬರೆದುಕೊಂಡಿದ್ದಾರೆ.

ಆರ್ಸಿಬಿಯ ಅಪ್ಪಟ ಅಭಿಮಾನಿಯಾಗಿರುವ ಆರ್ಚಿತಾ ಅಸ್ಸಾಂ ಮೂಲದವರು. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಬೇಬಿಡಾಲ್ ಆರ್ಚಿ ಎಂದೇ ಕರೆಯಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫಾಲೋವರ್ಸ್ ಹೊಂದಿದ್ದಾರೆ.