ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಕರ್ಣ ಧಾರಾವಾಹಿಗೆ ಖ್ಯಾತ ಹಾಸ್ಯ ನಟ ಎಂಟ್ರಿ: ಯಾರು ನೋಡಿ

Chidanand in Karna Kannada Serial: ಎಲ್ಲ ಅಡೆತಡೆಗಳನ್ನು ದಾಟಿ ಕರ್ಣ ಈಗ ಅದ್ಧೂರಿ ಪ್ರಸಾರ ಕಾಣುತ್ತಿದೆ. ಜನರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕರ್ಣ ಧಾರಾವಾಹಿಗೆ ಹೊಸ ಪಾತ್ರದ ಎಂಟ್ರಿ ಆಗಿದೆ.

ಕರ್ಣ ಧಾರಾವಾಹಿಗೆ ಖ್ಯಾತ ಹಾಸ್ಯ ನಟ ಎಂಟ್ರಿ: ಯಾರು ನೋಡಿ

Karna Serial

Profile Vinay Bhat Jul 9, 2025 7:15 AM

ಝೀ ಕನ್ನಡ ವಾಹಿನಿಯಲ್ಲಿ ವಿವಾದಗಳ ಮೂಲಕ ಸುದ್ದಿಯಾಗಿದ್ದ ಹೊಸ ಕರ್ಣ ಧಾರಾವಾಹಿ (Karna Kannada Serial) ಕೊನೆಗೂ ಕಳೆದ ವಾರದಿಂದ ಪ್ರಸಾರ ಆರಂಭಿಸಿದೆ. ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ಜೂನ್ 16 ಸೋಮವಾರದಿಂದ ರಾತ್ರಿ 8 ಗಂಟೆಯಿಂದ ಪ್ರಸಾರ ಕಾಣಬೇಕಿತ್ತು. ಆದರೆ, ಕೆಲ ವಿವಾದದಿಂದ ಈ ಧಾರಾವಾಹಿಯ ಪ್ರಸಾರಕ್ಕೆ ತಡೆಹಿಡಿಯಲಾಗಿತ್ತು. ಆದರೆ ಎಲ್ಲ ಅಡೆತಡೆಗಳನ್ನು ದಾಟಿ ಕರ್ಣ ಈಗ ಅದ್ಧೂರಿ ಪ್ರಸಾರ ಕಾಣುತ್ತಿದೆ. ಜನರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕರ್ಣ ಧಾರಾವಾಹಿಗೆ ಹೊಸ ಪಾತ್ರದ ಎಂಟ್ರಿ ಆಗಿದೆ.

ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಯಲ್ಲಿ ಈಗಾಗಲೇ ದೊಡ್ಡ ತಾರೆಯರ ದಂಡೇ ಇದೆ. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್‌ ನಟಿಸುತ್ತಿದ್ದಾರೆ.

ಹೀಗಿರುವಾಗ ಈ ಧಾರಾವಾಹಿಗೆ ನಗುವಿನ ಕಚಗುಳಿ ಇಡಲು ಹಾಸ್ಯ ಕಲಾವಿದ, ಪಾಪಾ ಪಾಂಡು ಸೀರಿಯಲ್ ಖ್ಯಾತಿಯ ಚಿದಾನಂದ್ ಎಂಟ್ರಿಯಾಗಿದ್ದಾರೆ. ಈಗಾಗಲೇ ಕಾಮಿಡಿ ಕಿಲಾಡಿ ಖ್ಯಾತಿಯ ಸದಾ ಸಹ ಈ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ಹಾಸ್ಯ ನಟನ ಎಂಟ್ರಿ ಕುತೂಹಲ ಕೆರಳಿಸಿದೆ. ಮುಂದಿನ ಸಂಚಿಕೆಯಲ್ಲಿ ಚಿದಾನಂದ್ ಪಾತ್ರ ಅನಾವರಣವಾಗಲಿದೆ ಎಂದು ಹೇಳಲಾಗಿದೆ.

Drone Prathap: ಊರಲ್ಲಿ ಓಡಾಡಲು ಅಮ್ಮನಿಗೆ ಹೊಸ ಕಾರು ತೆಗೆದುಕೊಟ್ಟ ಡ್ರೋನ್ ಪ್ರತಾಪ್

ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಅವರು ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೈನಕಾಲಜಿಸ್ಟ್‌ ಆಗಿ ಕಿರಣ್‌ ರಾಜ್‌ ನಟಿಸುತ್ತಿದ್ದಾರೆ. ಭವ್ಯಾ ನಿಧಿ ಪಾತ್ರ ಮಾಡುತ್ತಿದ್ದಾರೆ. ಇವರ ಜೊತೆಗೆ ನಮ್ರತಾ ಗೌಡ ನಿತ್ಯಾ ಅನ್ನೋ ಪಾತ್ರ ಮಾಡ್ತಿದ್ದಾರೆ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡ್ತಾ ಇರುತ್ತಾರೆ.

ಸದ್ಯ ಕಥೆಯಲ್ಲಿ ಕರ್ಣನ ಮದುವೆ ಮಾತುಕಥೆ ನಡೆಯುತ್ತಿದೆ ಕರ್ಣನ ಅಜ್ಜಿಗೆ ಮೊಮ್ಮಗನಿಗೆ ಮದುವೆ ಮಾಡುವ ಆಸೆ ಇದೆ. ಆದರೆ ಜೀವನದಲ್ಲಿಯೇ ಮದುವೆ ಆಗಲ್ಲ ಎಂದು ಕರ್ಣ ಅಗ್ರಿಮೆಂಟ್‌ಗೆ ಸಹಿ ಹಾಕಿ ತಂದೆಗೆ ನೀಡಿದ್ದಾನೆ. ಆದರೆ, ಅತ್ತ ನಿಧಿಗೆ ಕರ್ಣನ ಮೇಲೆ ಲವ್ ಆಗಿದ್ದು, ಪ್ರಪೋಸ್ ಮಾಡಲು ಕಾದು ಕುಳಿತಿದ್ದಾಳೆ. ಅತ್ತ ನಿಧಿ ಅಕ್ಕ ನಿತ್ಯಾಗೆ ಮದುವೆ ಮಾಡಿಸಲು ಅಜ್ಜಿ ಶಾಂತಿ ಪ್ರಯತ್ನಿಸುತ್ತಿದ್ದಾಳೆ. ಸದ್ಯ ಶುರುವಾದ ಮೊದಲ ವಾರದಲ್ಲೇ ಕರ್ಣ ಧಾರಾವಾಹಿ ಕುತೂಹಲ ಮೂಡಿಸುತ್ತಿದೆ.