Kamal Haasan: ಹೊಟೇಲ್ ರೂಮ್‌ನಲ್ಲಿ ಖ್ಯಾತ ನಟಿ ಜತೆ ಇದ್ದಾಗಲೇ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರಾ ಕಮಲ್ ಹಾಸನ್?
ಕಮಲ್ ಹಾಸನ್ ಮತ್ತು ನಟಿ ರೇಖಾ ನಡುವಿನ ಸಂಬಂಧ ಈಗಲೂ ಹೆಚ್ಚು ಚರ್ಚೆಯಲ್ಲಿದೆ. ಕಮಲ್ ಮತ್ತು ರೇಖಾ ಜೋಡಿಯಾಗಿ ನಟಿಸಿದ್ದ ʼಸಿಲ್ಸಿಲಾʼ ಹಿಂದಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಇವರಿಬ್ಬರು ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಇನ್ನು ಕಮಲ್ ಚೆನ್ನೈಯ ಹೊಟೇಲ್‌ವೊಂದರಲ್ಲಿ ರೇಖಾ ಜತೆ ಇದ್ದಾಗಲೇ ಅವರ ಪತ್ನಿಯ ಕೈಗೆ ಸಿಕ್ಕಿ ಹಾಕಿ ಕೊಂಡಿದ್ದರಂತೆ ಎನ್ನುವ ವಿಚಾರ ಇದೀಗ ವೈರಲ್ ಆಗುತ್ತಿದೆ.

Kamal Haasan

ಚೆನ್ನೈ: ನಟ ಕಮಲ್ ಹಾಸನ್ (Kamal Haasan) ಇತ್ತೀಚೆಗಷ್ಟೇ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದರು. ಇದರ ಜತೆಗೆ ಆಗಾಗ ಇವರ ವೈಯಕ್ತಿಕ ಜೀವನವು ಚರ್ಚೆಗೆ ಗ್ರಾಸವಾಗುತ್ತದೆ. ಅದರಲ್ಲೂ ಅತ್ಯಂತ ಕುತೂಹಲಕಾರಿ ವಿಚಾರಗಳಲ್ಲಿ ಒಂದಾದ ಕಮಲ್ ಮತ್ತು ಖ್ಯಾತ ಬಾಲಿವುಡ್ ನಟಿ ರೇಖಾ ಅವರ ನಡುವಿನ ಸಂಬಂಧ ಈಗಲೂ ಹೆಚ್ಚು ಪ್ರಚಲಿತದಲ್ಲಿದೆ. ಕಮಲ್ ಮತ್ತು ರೇಖಾ ಜೋಡಿಯಾಗಿ ನಟಿಸಿದ್ದ ʼಸಿಲ್ಸಿಲಾʼ ಹಿಂದಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಇವರಿಬ್ಬರು ನಿಕಟ ಸಂಬಂಧವನ್ನು ಬೆಳೆಸಿ ಕೊಂಡಿದ್ದರು ಎನ್ನಲಾಗಿದೆ. ರೇಖಾ ಮತ್ತು ಕಮಲ್ ಚೆನ್ನೈಯ ಹೊಟೇಲ್ ಒಂದರಲ್ಲಿ ಜತೆಯಲ್ಲಿ ಇದ್ದಾಗ ಕಮಲ್ ಪತ್ನಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಹಾಕಿಕೊಂಡಿದ್ದರು ಎನ್ನಲಾಗಿದೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯಶ್ ಚೋಪ್ರಾ ಅವರ 'ಸಿಲ್ಸಿಲಾ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಕಮಲ್ ಮತ್ತು ರೇಖಾ ಜೋಡಿ ಮೋಡಿ ಮಾಡಿತ್ತು. ಆ ಬಳಿಕ ಈ ಜೋಡಿ 1981ರಲ್ಲಿ ಶ್ರೀದೇವಿ ಅವರೊಂದಿಗೆ ʼಮೀಂಡುಮ್ ಕೋಕಿಲಾʼ ಎಂಬ ತಮಿಳು ಚಿತ್ರಕ್ಕೂ ಸಹಿ ಹಾಕಿತ್ತು. ಈ ಸಂದರ್ಭದಲ್ಲಿ ಕಮಲ್ ಹಾಗೂ ರೇಖಾ ಬಹಳಷ್ಟು ಆತ್ಮೀಯತೆಯಿಂದ ಇದ್ದರು ಎನ್ನಲಾಗುತ್ತಿದೆ. 1979ರ ಸಂದರ್ಭದಲ್ಲಿ ಚೆನ್ನೈನ ಹೊಟೇಲ್ ಒಂದರಲ್ಲಿ ಕಮಲ್ ಮತ್ತು ರೇಖಾ ಒಂದೇ ರೂಮ್‌ನಲ್ಲಿ ಇದ್ದಾಗ ಕಮಲ್ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಂತೆ. ಕಮಲ್ ಹಾಸನ್ ಅವರ ಮಾಜಿ ಪತ್ನಿ ವಾಣಿ ಅವರಿಬ್ಬರನ್ನು ಒಟ್ಟಿಗೆ ನೋಡಿ ಕಮಲ್ ಹಾಸನ್ ಅವರನ್ನು ಎಲ್ಲರ ಮುಂದೆ ತರಾಟೆಗೆ ತಗೆದುಕೊಂಡಿದ್ದರಂತೆ. ಈ ವಿಚಾರವನ್ನು ಹೋಟೆಲ್ ಉದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಬಳಿಕ ದಿಢೀರ್ ಅಂತ ಯಾವುದೇ ಕಾರಣ ಇಲ್ಲದೇ ರೇಖಾ ಅವರನ್ನು ʼಮೀಂಡುಮ್ ಕೋಕಿಲಾʼ ಚಿತ್ರದಿಂದ ಕೈ ಬಿಡಲಾಯ್ತು. ಇವರ ಬದಲಾಗಿ ಮಲಯಾಳಂ ನಟಿ ದೀಪಾ (ಉನ್ನಿ ಮೇರಿ) ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈ ಘಟನೆ ರೇಖಾ ಮತ್ತು ಕಮಲ್ ಹಾಸನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಕೊನೆ ಕ್ಷಣದಲ್ಲಿ ರೇಖಾ ಅವರನ್ನು ಸಿನಿಮಾದಿಂದ ಕೈ ಬಿಟ್ಟಿದ್ಯಾಕೆ ಎಂಬುದರ ಬಗ್ಗೆ ತೀವ್ರ ಚರ್ಚೆಗೆ ನಡೆದಿತ್ತು. ಇಂದಿಗೂ ಕಮಲ್ ಹಾಸನ್ ರೇಖಾ ಸಂಬಂಧದ ಬಗ್ಗೆ ಅಂತೆ-ಕಂತೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನು ಓದಿ:Kamal Hassan: ಕಮಲ ಹಾಸನ್‌ಗೆ ಇನ್ನೊಂದು ಶಾಕ್, ಕನ್ನಡದ ಬಗ್ಗೆ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧ
1960ರಲ್ಲಿ ತೆರೆಕಂಡ 'ಕಲತ್ತೂರ್ ಕಣ್ಣಮ್ಮ' ತಮಿಳು ಸಿನಿಮಾದಲ್ಲಿ ಬಾಲಕಲಾವಿದನಾಗಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಬಂದ ಕಮಲ್ ಹಾಸನ್ ಬಳಿಕ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಕಮಲ್ ಹಾಸನ್ 1978ರಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ವಿವಾಹವಾದರು. ಆದರೆ 10 ವರ್ಷಗಳ ನಂತರ 1988ರಲ್ಲಿ ಇಬ್ಬರು ವಿಚ್ಚೇದನ ಪಡೆದರು. ನಂತರ ಕಮಲ್ 1988ರಲ್ಲಿ ನಟಿ ಸಾರಿಕಾ ಠಾಕೂರ್ ಅವರನ್ನು ಮದುವೆಯಾದರು. ಈ ಸಂಬಂಧವು ಸಹ 2004ರಲ್ಲಿ ವಿಚ್ಛೇದನದ ಮೂಲಕ ಕೊನೆಗೊಂಡಿತ್ತು.