ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

PM Kisan Scheme: ರೈತರ ಖಾತೆಗೆ ಫೆ.24ರಂದು ಪಿಎಂ ಕಿಸಾನ್ ಹಣ; ಪ್ರಧಾನಿ ಮೋದಿಯಿಂದ ಬಿಡುಗಡೆ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಪಿಎಂ ಕಿಸಾನ್‌ ಯೋಜನೆಯ 19 ನೇ ಕಂತು ಸೋಮವಾರ ಬಿಡುಗಡೆಯಾಗಲಿದೆ. ಭಾಗಲ್ಪುರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಿಎಂ ಕಿಸಾನ್ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ.

ರೈತರ ಖಾತೆಗೆ ಫೆ.24ರಂದು ಪಿಎಂ ಕಿಸಾನ್ ಹಣ

ನರೇಂದ್ರ ಮೋದಿ

Profile Vishakha Bhat Feb 23, 2025 9:04 AM

ನವದೆಹಲಿ: ಪಿಎಂ ಕಿಸಾನ್ ಯೋಜನೆಯ (PM Kisan Scheme) 19ನೇ ಕಂತಿನ ಹಣವು ಸೋಮವಾರ (ಫೆ.24) ಬಿಡುಗಡೆ ಆಗಲಿದೆ. ಬಿಹಾರದ ಭಾಗಲ್ಪುರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಿಎಂ ಕಿಸಾನ್ ಹಣವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಬಿಡುಗಡೆ ಮಾಡಲಿದ್ದಾರೆ. 9.8 ಕೋಟಿ ರೈತರ ಖಾತೆಗಳಿಗೆ 22,000 ಕೋಟಿ ರೂ. ಜಮೆಯಾಗಲಿದೆ. ಫೆ.24 ರಂದು ಬಿಹಾರದಲ್ಲಿ (Bihar) ಪ್ರಧಾನಿ ಮೋದಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಹಣ ಬಿಡುಗಡೆಯ ಕುರಿತು ಕೇಂದ್ರ ಕೃಷಿ ಸಚಿವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಮ್ಮದು ರೈತರ ಕಲ್ಯಾಣಕ್ಕೆ ಮೀಸಲಾದ ಸರ್ಕಾರ. ಆ ಮನೋಭಾವವನ್ನು ಮುಂದಕ್ಕೆ ತೆಗೆದುಕೊಂಡು, ಭಾಗಲ್ಪುರದಲ್ಲಿ ನಡೆಯುವ ಕಾರ್ಯಕ್ರಮದಿಂದ ಕೋಟ್ಯಂತರ ರೈತರಿಗೆ ಪಿಎಂ-ಕಿಸಾನ್ ಯೋಜನೆಯ 19 ನೇ ಕಂತನ್ನು ವಿತರಿಸಲಾಗುವುದು ಎಂದು ಮೋದಿ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.



ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿ ಪ್ರದೇಶದಲ್ಲಿ ಸ್ಥಳೀಯ ತಳಿಗಳ ಶ್ರೇಷ್ಠತಾ ಕೇಂದ್ರವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಮತ್ತು ಬೇಗುಸರಾಯ್ ಜಿಲ್ಲೆಯ ಬರೌನಿ ಪ್ರದೇಶದಲ್ಲಿ ಹಾಲು ಸಂಸ್ಕರಣಾ ಘಟಕವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಇತರ ಪ್ರಮುಖ ಯೋಜನೆಗಳಾದ, ಇಸ್ಮಾಯಿಲ್‌ಪುರ್-ರಫಿಗಂಜ್ ರಸ್ತೆ ಮೇಲ್ಸೇತುವೆ ಮತ್ತು ವಾರಿಸಲಿಗಂಜ್-ನವಾಡ-ತಿಲೈಯಾ ರೈಲು ವಿಭಾಗದ ದ್ವಿಗುಣಗೊಳಿಸುವಿಕೆಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: PM Kisan Scheme: ತಿಂಗಳಾಂತ್ಯದಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ 19ನೇ ಕಂತು ಬಿಡುಗಡೆ? ಅರ್ಜಿ ಸಲ್ಲಿಕೆ ಹೇಗೆ?

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2019ರ ಫೆಬ್ರವರಿ 24ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM Kisan Scheme) ನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಅರ್ಹ ರೈತರು ವಾರ್ಷಿಕವಾಗಿ 6,000 ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ 2 ಸಾವಿರ ರೂ. ಗಳಂತೆ ನೀಡಲಾಗುತ್ತದೆ. ಈ ವರೆಗೆ 18 ಕಂತು ಜಾರಿಯಾಗಿದ್ದು, ಸರ್ಕಾರವು 2024ರ ಅಕ್ಟೋಬರ್ 5ರಂದು ಬಿಡುಗಡೆಯಾಗಿತ್ತು. ದೇಶಾದ್ಯಂತ 94 ದಶಲಕ್ಷಕ್ಕೂ ಹೆಚ್ಚು ರೈತರು ನೇರ ಆರ್ಥಿಕ ಪ್ರಯೋಜನಗಳನ್ನು ಪಡೆದುಕೊಂಡಿದ್ದರು.