ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Miracle of Mind: ಮಾನಸಿಕ ಆರೋಗ್ಯಕ್ಕಾಗಿ ಬಂತು ಸದ್ಗುರು ಅವರ 'ಮಿರಾಕಲ್ ಆಫ್ ಮೈಂಡ್ ಆ್ಯಪ್‌ ; 15 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಜನರಿಂದ ಡೌನ್‌ಲೋಡ್‌

ಇಶಾ ಯೋಗ ಕೇಂದ್ರದಿಂದ 'ಮಿರಾಕಲ್‌ ಆಫ್‌ ಮೈಂಡ್‌' ಎಂಬ ಆ್ಯಪ್‌ ಅಭಿವೃದ್ಧಿಸಿದೆ. ಇದು ಧ್ಯಾನಕ್ಕೆ ಸಂಬಂಧಿಸಿದ ಆ್ಯಪ್‌ ಇದಾಗಿದ್ದು, ಪ್ರಾರಂಭಿಸಿ ಕೇವಲ 15 ಗಂಟೆಗಳಲ್ಲಿ 1 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದೆ. 24 ಗಂಟೆಗಳ ಅವಧಿಯಲ್ಲಿ, ಮಿರಾಕಲ್ ಆಫ್ ಮೈಂಡ್ ಭಾರತ, ಯುಎಸ್ಎ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಸಿಂಗಾಪುರ್, ಮಲೇಷ್ಯಾ, ಹಾಂಗ್ ಕಾಂಗ್, ಜರ್ಮನಿ, ಕೀನ್ಯಾ ಮತ್ತು ಯುಎಇ ಸೇರಿದಂತೆ 20 ದೇಶಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ.

ChatGPT ಮೀರಿಸಿದ  ಮಿರಾಕಲ್ ಆಫ್ ಮೈಂಡ್ ಆ್ಯಪ್‌ !

Miracle of Mind

Profile Vishakha Bhat Mar 1, 2025 10:11 AM

ನವದೆಹಲಿ: ಇತ್ತೀಚೆಗೆ ಜನರಲ್ಲಿ ಮಾನಸಿಕ ಮಾನಸಿಕ ಅನಾರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಮಾನಸಿಕ ಸಮತೋಲನವನ್ನು ಕಾಪಾಡುವ ಸಲುವಾಗಿ ಇಶಾ ಯೋಗ ಕೇಂದ್ರದಿಂದ (Isha foundation) 'ಮಿರಾಕಲ್‌ ಆಫ್‌ ಮೈಂಡ್‌' (Miracle of Mind) ಎಂಬ ಆ್ಯಪ್‌ ಅಭಿವೃದ್ಧಿಸಿದೆ. ಧ್ಯಾನಕ್ಕೆ ಸಂಬಂಧಿಸಿದ ಆ್ಯಪ್‌ ಇದಾಗಿದ್ದು, ಪ್ರಾರಂಭಿಸಿ ಕೇವಲ 15 ಗಂಟೆಗಳಲ್ಲಿ 1 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದೆ. ಇದು ಚಾಟ್‌ಜಿಪಿಯ ಆರಂಭಿಕ ದಿನಗಳನ್ನೇ ಮೀರಿಸಿದೆ ಎಂದು ತಿಳಿದು ಬಂದಿದೆ. 24 ಗಂಟೆಗಳ ಅವಧಿಯಲ್ಲಿ, ಮಿರಾಕಲ್ ಆಫ್ ಮೈಂಡ್ ಭಾರತ, ಯುಎಸ್ಎ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಸಿಂಗಾಪುರ್, ಮಲೇಷ್ಯಾ, ಹಾಂಗ್ ಕಾಂಗ್, ಜರ್ಮನಿ, ಕೀನ್ಯಾ ಮತ್ತು ಯುಎಇ ಸೇರಿದಂತೆ 20 ದೇಶಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಇಂಗ್ಲಿಷ್, ಹಿಂದಿ, ತಮಿಳು, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಲಭ್ಯವಿರುವ ಮಿರಾಕಲ್ ಆಫ್ ಮೈಂಡ್, ಏಳು ನಿಮಿಷಗಳ ಮಾರ್ಗದರ್ಶಿ ಧ್ಯಾನವನ್ನು ಒಳಗೊಂಡಿದೆ. ಧ್ಯಾನದ ಹೊರತಾಗಿ, ಅಪ್ಲಿಕೇಶನ್ AI- ಚಾಲಿತ ವೈಶಿಷ್ಟ್ಯವನ್ನು ನೀಡುತ್ತದೆ, ಅಷ್ಟೇ ಅಲ್ಲದೆ ಇದು ವಿವಿಧ ವಿಷಯಗಳ ಕುರಿತು ಸದ್ಗುರು ಅವರ ವಿಚಾರಗಳನೊಳಗೊಂಡ ಬೋಧನೆಯನ್ನು ಸಹ ಒದಗಿಸುತ್ತದೆ.



ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸದ್ಗುರು ಅವರು "2050 ರ ವೇಳೆಗೆ, ವಿಶ್ವದ ಜನಸಂಖ್ಯೆಯ ಸುಮಾರು 30-33% ಜನರು ಮಾನಸಿಕ ಅಸ್ವಸ್ಥರಾಗುವ ನಿರೀಕ್ಷೆಯಿದೆ. ಏಕೆಂದರೆ ನಾವು ಯಾವಾಗಲೂ ನಮ್ಮ ಸವಾಲುಗಳಿಗೆ ಪರಿಹಾರವನ್ನು ಹೊರಗಡೆ ಹುಡುಕುತ್ತೇವೆ. ಪರಿಹಾರಗಳು ನಮ್ಮೊಳಗೇ ಇವೆ, ಆದರೆ ನಮಗೆ ನಮಗೆ ಅದರ ಅರಿವಿರುವುದಿಲ್ಲ. ಮಿರಾಕಲ್ ಆಫ್ ಮೈಂಡ್ ಅಪ್ಲಿಕೇಶನ್ ನಿಮ್ಮನ್ನು ನೀವು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ನಿಮಗಾಗಿ ಮತ್ತು ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ನೀವು ದಿನನಿತ್ಯ 7 ನಿಮಿಷ ಹೂಡಿಕೆ ಮಾಡಬೇಕು. ಅದನ್ನು ಸಾಧ್ಯವಾಗಿಸೋಣ ಎಂದು ಅವರು ಬರೆದಿದ್ದಾರೆ.



ಈ ಸುದ್ದಿಯನ್ನೂ ಓದಿ: DK Shivakumar: ಡಿಕೆಶಿಗೆ ʼಶಿವಕುಮಾರʼ ಎಂಬ ಹೆಸರೇಕೆ? ಸದ್ಗುರು ಕಾರ್ಯಕ್ರಮದ ಬಳಿಕ ರಹಸ್ಯ ಬಿಚ್ಚಿಟ್ಟ ಡಿಸಿಎಂ

ಮಾನಸಿಕ ಆರೋಗ್ಯದ ಸವಾಲುಗಳು ಹೆಚ್ಚುತ್ತಿರುವ ನಿರ್ಣಾಯಕ ಸಮಯದಲ್ಲಿ ' ಮಿರಾಕಲ್ ಆಫ್ ಮೈಂಡ್' ಅಪ್ಲಿಕೇಶನ್ ಬಿಡುಗಡೆಯಾಗಿದೆ. ಭಾರತದಲ್ಲಿ ಸುಮಾರು 60 ರಿಂದ 70 ಮಿಲಿಯನ್ ಜನರು ಸಾಮಾನ್ಯ ಮತ್ತು ತೀವ್ರ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವ ದೇಶ ಭಾರತ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ವರದಿಯ ಪ್ರಕಾರ, 2022 ರಲ್ಲಿ ಭಾರತದಲ್ಲಿ 1.71 ಲಕ್ಷ ಜನರು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ.