ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Virat Kohli: ಸ್ಮರಣೀಯ ಪಂದ್ಯವನ್ನಾಡಲು ಕಿಂಗ್‌ ಕೊಹ್ಲಿ ಸಜ್ಜು

2008ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವಿರಾಟ್​ ಕೊಹ್ಲಿ ಇದುವರೆಗೆ 299* ಪಂದ್ಯಗಳ 287 ಇನಿಂಗ್ಸ್​ಗಳಲ್ಲಿ 51 ಶತಕ, 73 ಅರ್ಧಶತಕಗಳ ಸಹಿತ 58.20ರ ಸರಾಸರಿಯಲ್ಲಿ 14,085 ರನ್​ ಬಾರಿಸಿದ್ದಾರೆ. ಜತೆಗೆ 158 ಕ್ಯಾಚ್​ ಹಿಡಿದಿದ್ದು, 5 ವಿಕೆಟ್​ ಕೂಡ ಕಬಳಿಸಿದ್ದಾರೆ. 183 ರನ್​ ಅವರ ಗರಿಷ್ಠ ಗಳಿಕೆಯಾಗಿದೆ.

ಕಿವೀಸ್‌ ವಿರುದ್ಧದ ಪಂದ್ಯ ಕೊಹ್ಲಿಗೆ ವಿಶೇಷ ಸಂಭ್ರಮ

Profile Abhilash BC Mar 1, 2025 12:14 PM

ದುಬೈ: ನಾಳೆ(ಭಾನುವಾರ) ನಡೆಯುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಕೊನೆಯ ಲೀಗ್​ ಪಂದ್ಯ ನಡೆಯಲಿದೆ. ಈ ಪಂದ್ಯ ವಿರಾಟ್‌ ಕೊಹ್ಲಿಗೆ ಸ್ಮರಣೀಯ ಪಂದ್ಯವಾಗಿದೆ. ಇದು ಕೊಹ್ಲಿ ಪಾಲಿಗೆ 300ನೇ ಏಕದಿನ ಪಂದ್ಯವೆನಿಸಿದೆ. ಅವರು ಈ ಸಾಧನೆ ಮಾಡಲಿರುವ 22ನೇ ಆಟಗಾರ ಮತ್ತು 7ನೇ ಭಾರತೀಯ ಎನಿಸಲಿದ್ದಾರೆ.

ಭಾರತ ಪರ ಮೊದಲು 300 ಏಕದಿನ ಪಂದ್ಯವನ್ನು ಪೂರ್ತಿಗೊಳಿಸಿದ್ದ ದಾಖಲೆ ಮೊಹಮ್ಮದ್‌​ ಅಜರುದ್ದೀನ್ ಹೆಸರಿನಲ್ಲಿದೆ. ಕಾಕತಾಳಿಯ ಎನ್ನುವಂತೆ ಅವರು ಕೂಡ 1998ರಲ್ಲಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡುವ ಮೂಲಕವೇ ಈ ಸಾಧನೆಗೈದಿದ್ದರು. ಇದೀಗ ಕೊಹ್ಲಿ ಕೂಡ ಚಾಂಪಿಯನ್ಸ್​ ಟ್ರೋಫಿಯಲ್ಲೇ ಈ ಮೈಲಿಗಲ್ಲು ನೆಡಲಿದ್ದಾರೆ. ಒಟ್ಟಾರೆಯಾಗಿ ಭಾರತ ಪರ ಅತ್ಯಧಿಕ ಏಕದಿನ ಪಂದ್ಯವನ್ನಾಡಿದ ದಾಖಲೆ ಸಚಿನ್​ ತೆಂಡುಲ್ಕರ್​ (463), ಹೆಸರಿನಲ್ಲಿದೆ. ಆ ಬಳಿಕ ಎಂಎಸ್​ ಧೋನಿ (350), ರಾಹುಲ್​ ದ್ರಾವಿಡ್​ (344), ಅಜರುದ್ದೀನ್​ (334), ಸೌರವ್​ ಗಂಗೂಲಿ (311) ಮತ್ತು ಯುವರಾಜ್​ ಸಿಂಗ್​ (304) ಕಾಣಿಸಿಕೊಂಡಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವಿರಾಟ್​ ಕೊಹ್ಲಿ ಇದುವರೆಗೆ 299* ಪಂದ್ಯಗಳ 287 ಇನಿಂಗ್ಸ್​ಗಳಲ್ಲಿ 51 ಶತಕ, 73 ಅರ್ಧಶತಕಗಳ ಸಹಿತ 58.20ರ ಸರಾಸರಿಯಲ್ಲಿ 14,085 ರನ್​ ಬಾರಿಸಿದ್ದಾರೆ. ಜತೆಗೆ 158 ಕ್ಯಾಚ್​ ಹಿಡಿದಿದ್ದು, 5 ವಿಕೆಟ್​ ಕೂಡ ಕಬಳಿಸಿದ್ದಾರೆ. 183 ರನ್​ ಅವರ ಗರಿಷ್ಠ ಗಳಿಕೆಯಾಗಿದೆ.

ಕೊಹ್ಲಿ ಕಿವೀಸ್‌ ವಿರುದ್ಧ 50 ಪ್ಲಸ್‌ ಮೊತ್ತ ಪೇರಿಸಿದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 6 ಫಿಫ್ಟಿ ಪ್ಲಸ್ ದಾಖಲಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಂದೊಮ್ಮೆ ಕೊಹ್ಲಿ ನ್ಯೂಜಿಲ್ಯಾಂಡ್‌ ಎದುರು 50 ಪ್ಲಸ್‌ ಮೊತ್ತ ದಾಖಲಿಸಿದರೆ, ಶಿಖರ್‌ ಧವನ್‌(6), ಸೌರವ್‌ ಗಂಗೂಲಿ(6), ರಾಹುಲ್‌ ದ್ರಾವಿಡ್‌(6) ದಾಖಲೆ ಮುರಿಯಲಿದ್ದಾರೆ.

ಕೊಹ್ಲಿ ನ್ಯೂಜಿಲ್ಯಾಂಡ್‌ ಪಂದ್ಯದಲ್ಲಿ 85 ರನ್‌ ಬಾರಿಸಿದರೆ, ನ್ಯೂಜಿಲ್ಯಾಂಡ್‌ ತಂಡದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಸಾವಿರ ರನ್‌ ಪೂರೈಸಿದ ವಿಶ್ವದ 5ನೇ ಹಾಗೂ ಭಾರತದ ಎರಡನೇ ಬ್ಯಾಟರ್‌ ಎನಿಸಿಕೊಳ್ಳಲಿದ್ದಾರೆ. ಇದೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 105 ರನ್‌ ಬಾರಿಸಿದರೆ ಏಕದಿನ ಮಾದರಿಯಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಅತ್ಯಧಿಕ ರನ್‌ ಕಲೆ ಹಾಕಿದ ಭಾರತದ ಮೊದಲ ಬ್ಯಾಟರ್‌ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ಸಚಿನ್‌ ಹೆಸರಿನಲ್ಲಿದೆ. ಸಚಿನ್‌ 42 ಪಂದ್ಯಗಳಿಂದ ಐದು ಶತಕ ಮತ್ತು ಎಂಟು ಅರ್ಧ ಶತಕಗಳೊಂದಿಗೆ 1750 ರನ್ ಗಳಿಸಿ ದಾಖಲೆ ಹೊಂದಿದ್ದಾರೆ.