ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

LPG Price Hike: ಗ್ರಾಹಕರಿಗೆ ಶಾಕ್‌ ಮೇಲೆ ಶಾಕ್‌; ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​ ದರ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ದೇಶದಾದ್ಯಂತ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ 6 ರೂ.ಗಳ ಹೆಚ್ಚಳವನ್ನು ಘೋಷಿಸಿದ್ದು, ಇದು ಮಾರ್ಚ್ 1 ರ ಶನಿವಾರದಿಂದ ಜಾರಿಗೆ ಬರುತ್ತದೆ. ಇಂಡಿಯನ್ ಆಯಿಲ್ ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 6 ರೂ. ಹೆಚ್ಚಿಸಿದ್ದು, ಈ ಹಿಂದೆ 1797 ರೂ. ಇದ್ದ ಸಿಲಿಂಡರ್‌ ಇದೀಗ 1803 ರೂ.ಗೆ ಏರಿಕೆಯಾಗಿದೆ.

ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​ ದರ ಏರಿಕೆ

ಸಿಲೆಂಡರ್‌ ಬೆಲೆ ಏರಿಕೆ

Profile Vishakha Bhat Mar 1, 2025 12:43 PM

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ದೇಶದಾದ್ಯಂತ ವಾಣಿಜ್ಯ LPG ಸಿಲಿಂಡರ್‌ಗಳ (LPG Price Hike) ಬೆಲೆಯಲ್ಲಿ 6 ರೂ.ಗಳ ಹೆಚ್ಚಳವನ್ನು ಘೋಷಿಸಿದ್ದು, ಇದು ಮಾರ್ಚ್ 1 ರ ಶನಿವಾರದಿಂದ ಜಾರಿಗೆ ಬರುತ್ತದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ನ ಬೆಲೆ 1,797 ರೂ.ಗಳಿಂದ 1,803 ರೂ.ಗಳಿಗೆ ಏರಿಕೆಯಾಗಿದೆ. ಸಿಲಿಂಡರ್​ನ ಬೆಲೆ ಏರಿಕೆ ಮಾಡಿರುವುದು ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ. ಇಂಡಿಯನ್ ಆಯಿಲ್ ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 6 ರೂ. ಹೆಚ್ಚಿಸಿದ್ದು, ಈ ಹಿಂದೆ 1797 ರೂ. ಇದ್ದ ಸಿಲಿಂಡರ್‌ ಇದೀಗ 1803 ರೂ.ಗೆ ಏರಿಕೆಯಾಗಿದೆ.

ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪರಿಶೀಲಿಸುತ್ತವೆ. ಇಂದಿನಿಂದ ಹೊಸ ತಿಂಗಳು ಪ್ರಾರಂಭವಾಗುತ್ತಿದೆ. ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆಯನ್ನು 1797 ರೂ.ಗಳಿಂದ 1803 ರೂ.ಗಳಿಗೆ ಹೆಚ್ಚಿಸಲಾಗಿದೆ. ಕೋಲ್ಕತ್ತಾದಲ್ಲಿ ಹೊಸ ಬೆಲೆ 1907 ರೂ.ಗಳಿಂದ 1913 ರೂ.ಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1749.50 ರೂ.ಗಳಿಂದ 1755.50 ರೂ.ಗಳಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಈಗ 1959 ರೂ.ಗಳಿಂದ 1965 ರೂ.ಗಳಿಗೆ ಲಭ್ಯವಿರುತ್ತದೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದರೂ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಾರ್ಚ್ 1, 2025 ರಿಂದ, ಪ್ರಮುಖ ನಗರಗಳಲ್ಲಿ 14.2-ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಹೀಗಿದ್ದು, ದೆಹಲಿ, ದೆಹಲಿ – 803 ರೂ. ಕೋಲ್ಕತ್ತಾ – 829 ರೂ. ಮುಂಬೈ – 802.50 ರೂ ಚೆನ್ನೈ – 818.50 ರೂ. ಲಕ್ನೋ – 840.50 ರೂ. ಇದೆ.

ಈ ಸುದ್ದಿಯನ್ನೂ ಓದಿLPG Cylinder: ಬಜೆಟ್‌ಗೂ ಮುನ್ನವೇ ಗ್ರಾಹಕರಿಗೆ ಸಿಹಿ ಸುದ್ದಿ; ಸಿಲಿಂಡರ್‌ ಬೆಲೆ ಇಳಿಕೆ

ವಾಣಿಜ್ಯ ಸಿಲೆಂಡರ್‌ಗಳನ್ನು ಹೆಚ್ಚಾಗಿ ಹೊಟೆಲ್‌ ಹಾಗೂ ರೆಸ್ಟರೊಂಟ್‌ಗಳಲ್ಲಿ ಬಳಸಲಾಗುತ್ತದೆ. ಇದರಿಂದ ರೆಸ್ಟೋರೆಂಟ್‌ಗಳು ತಮ್ಮ ಆಹಾರ ಬೆಲೆಯನ್ನು ಏರಿಕೆ ಮಾಡಬಹುದು. ಕೇಂದ್ರ ಬಜೆಟ್‌ಗೂ ಮುನ್ನ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿತ್ತು. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 7 ರೂ. ಇಳಿಕೆ ಕಂಡಿತ್ತು.