Viral Video: ವಿದೇಶಿ ಪ್ರವಾಸಿಗನನ್ನು ಯಮಾರಿಸಿದ ಶೂ ಪಾಲಿಷರ್; ಮುಂದೇನಾಯ್ತು? ವಿಡಿಯೊ ನೋಡಿ!
ಅಮೆರಿಕದ ಪ್ರವಾಸಿ ಮತ್ತು ವ್ಲಾಗರ್ ಕ್ರಿಸ್ ರೊಡ್ರಿಗಸ್ ದಕ್ಷಿಣ ಮುಂಬೈನ ಫುಡ್‌ಸ್ಟ್ರೀಟ್‍ನಲ್ಲಿ ನಡೆದುಕೊಂಡು ಹೋಗುವಾಗ ಸ್ಥಳೀಯ ಶೂ ಪಾಲಿಷರ್ ಅನ್ನು ಭೇಟಿಯಾಗಿ ಆತನಲ್ಲಿ ಶೂ ಪಾಲಿಷ್ ಮಾಡಿಕೊಂಡು ಆತನಿಗೆ ಶೂ ಬಾಕ್ಸ್ ಖರೀದಿಸಲು 2000ರೂಪಾಯಿ ನೀಡಿದ್ದಾನೆ. ಆದರೆ ಆತ ಕೊನೆಗೆ ಅವನಿಗೆ ಮೋಸ ಮಾಡಿದ್ದಾನೆ. ಈ ವಿಡಿಯೊವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್(Viral Video) ಆಗಿದೆ.


ಮುಂಬೈ: ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಶೂ ಪಾಲಿಷ್ ಮಾಡುವವರು ದಿನಕ್ಕೆ 100-200 ದುಡಿಯುತ್ತಾರೆ. ಅದರಿಂದ ತಮ್ಮ ಜೀವನದ ಬಂಡಿಯನ್ನು ಸಾಗಿಸುತ್ತಾರೆ. ಇಲ್ಲೊಬ್ಬ ವ್ಯಕ್ತಿ ಶೂ ಪಾಲಿಷ್ ನೆಪದಲ್ಲಿ ವಿದೇಶಿ ಪ್ರವಾಸಿಗನಿಗೆ ಯಮಾರಿಸಿದ ಘಟನೆಯೊಂದು ನಡೆದಿದೆ. ಇತ್ತೀಚೆಗೆ ಅಮೆರಿಕದ ಪ್ರವಾಸಿ ಮತ್ತು ವ್ಲಾಗರ್ ಕ್ರಿಸ್ ರೊಡ್ರಿಗಸ್ ದಕ್ಷಿಣ ಮುಂಬೈನ ಫುಡ್ ಸ್ಟ್ರೀಟ್‍ನಲ್ಲಿ ನಡೆದುಕೊಂಡು ಹೋಗುವಾಗ ಸ್ಥಳೀಯ ಶೂ ಪಾಲಿಷರ್ ಅನ್ನು ಭೇಟಿಯಾಗಿ ಆತನಿಂದ ಶೂ ಪಾಲಿಷ್ ಮಾಡಿಕೊಂಡು 2000ರೂಪಾಯಿ ನೀಡಿ ಮೋಸ ಹೋಗಿದ್ದಾನೆ. ಈ ವಿಡಿಯೊವನ್ನು ಕ್ರಿಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಕ್ರಿಸ್, ಬಾಬು ಎಂಬ ಶೂ ಪಾಲಿಷ್ ಮಾಡುವ ವ್ಯಕ್ತಿಯನ್ನು ಭೇಟಿಯಾಗಿದ್ದಾನೆ. ಆತನ ಕೈಯಲ್ಲಿ ಕೆಂಪು ಚೀಲವನ್ನು ಗಮನಿಸಿದ ಕ್ರಿಸ್ ಅದರಲ್ಲಿ ಶೂ ಪಾಲಿಷ್ ಉಪಕರಣಗಳಿರುವ ಬಗ್ಗೆ ಕೇಳಿದ್ದಾನೆ. ಬಾಬು ಆರು ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗ ಹುಡುಕಿಕೊಂಡು ಜೈಪುರದಿಂದ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾನೆ. ತಾನು ಇಲ್ಲಿ ಶೂ ಪಾಲಿಷ್ ಮಾಡುವುದಾಗಿ ಮತ್ತು ಅದರಿಂದ ಪ್ರತಿದಿನ 30-40 ರೂಪಾಯಿಗಳನ್ನು ಗಳಿಸುವುದಾಗಿ ಹೇಳಿದ್ದಾನೆ.
ಶೂ ಪಾಲಿಷ್ ಮಾಡುವವನ ವಿಡಿಯೊ ಇಲ್ಲಿದೆ ನೋಡಿ...
ನಂತರ ಬಾಬು ಕ್ರಿಸ್‍ನ ಬಿಳಿ ಬಣ್ಣದ ಶೂ ಅನ್ನು ಪಾಲಿಷ್ ಮಾಡಿಕೊಟ್ಟಿದ್ದಾನೆ. ಇದನ್ನು ಕಂಡು ಕ್ರಿಸ್ ಖುಷಿಗೊಂಡಿದ್ದಾನೆ. ನಂತರ ಶೂ ಪಾಲಿಷ್ ಮಾಡಿದ್ದಕ್ಕಾಗಿ 10 ರೂ ನೀಡಿದ್ದಾನೆ. ಆದರೆ ಆತ ಕ್ರಿಸ್ ಬಳಿ ಹಿಂಜರಿಕೆಯಿಲ್ಲದೆ ತನ್ನ ವ್ಯವಹಾರಕ್ಕಾಗಿ ಶೂ ಬಾಕ್ಸ್ ಅಗತ್ಯವಿದೆ. ಆದರೆ ಅದನ್ನು ಖರೀದಿಸಲು ಸಾಧ್ಯವಿಲ್ಲ ನೀವು ನನಗೆ ಸಹಾಯ ಮಾಡಬಹುದೇ? ಎಂದು ಕ್ರಿಸ್ ಬಳಿ ಸಹಾಯ ಕೇಳಿದ್ದಾನೆ.ಅವನ ಮಾತುಗಳು ಮತ್ತು ಕೆಲಸದಿಂದ ಪ್ರೇರಿತನಾದ ಕ್ರಿಸ್ ಆತನಿಗೆ 2,000 ರೂಪಾಯಿ ನೀಡಿದ್ದಾನೆ.
ಆತ ನಿಜವಾಗಿಯೂ ಶೂ ಬಾಕ್ಸ್ ನಲ್ಲಿ ಖರೀದಿಸಿದ್ದಾನೆಯೇ? ಅಥವಾ ಇದು ಹಣ ಪಡೆಯುವ ತಂತ್ರವೇ ಎಂಬುದನ್ನು ನೋಡಲು ಮರುದಿನ ಹೋಗಿ ನೋಡಿದಾಗ ಕ್ರಿಸ್ ಶಾಕ್ ಆಗಿದ್ದಾನೆ. ಯಾಕೆಂದರೆ ಬಾಬು ಬಳಿ ಶೂ ಬಾಕ್ಸ್ ಇರಲಿಲ್ಲವಂತೆ. ಅಲ್ಲಿದ್ದ ತೆಂಗಿನಕಾಯಿ ಮಾರಾಟಗಾರನು ಆತ ಎಲ್ಲರಿಗೂ ಇದೇ ರೀತಿ ಯಮಾರಿಸಿದ್ದಾನೆ ಎಂದು ಹೇಳಿದ್ದಾನೆ. ಈ ಬಗ್ಗೆ ಕ್ರಿಸ್ ವಿಡಿಯೊದಲ್ಲಿ ತಿಳಿಸಿದ್ದಾನೆ.