Viral Video: ಅಜ್ಜಿಯ ಹಲ್ಲಿನ ಸೆಟ್ ಹುಡುಕಿ ಕೊಟ್ಟ ಶ್ವಾನವನ್ನು ನೋಡಿ ಜನರು ನಕ್ಕಿದ್ದೇಕೆ? ಈ ವಿಡಿಯೊ ನೋಡಿದ್ರೆ ನೀವು ಕೂಡ ನಗ್ತೀರಿ!
ಕುಟುಂಬಸ್ಥರು ಮನೆಯಲ್ಲಿ ಅಜ್ಜಿಯ ಕಳೆದು ಹೋದ ಕೃತಕ ಹಲ್ಲು ಸೆಟ್ ಅನ್ನು ಹುಡುಕುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊನೆಗೆ ಈ ವಿಡಿಯೊದಲ್ಲಿ ಅಜ್ಜಿಯ ಕೃತಕ ಹಲ್ಲು ಸೆಟ್ ಅನ್ನು ಹುಡುಕಿ ಕೊಟ್ಟ ನಾಯಿಯನ್ನು ಕಂಡು ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.


ಕೆಲವೊಮ್ಮೆ ಸಾಕುಪ್ರಾಣಿಗಳು ಮಾಡುವ ಕೀಟಲೆಯು ಮನೆಯ ಸದಸ್ಯರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಇಂತಹ ಎಷ್ಟೋ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ಕಾಣಸಿಗುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕುಟುಂಬ ಸದಸ್ಯರು ತಮ್ಮ ಮನೆಯಲ್ಲಿ ಕಳೆದುಹೋದ ಅಜ್ಜಿಯ ಕೃತಕ ಹಲ್ಲು ಸೆಟ್ ಹುಡುಕುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ಆದರೆ ಈ ವಿಡಿಯೊದಲ್ಲಿ ಅಜ್ಜಿಯ ಕೃತಕ ಹಲ್ಲು ಸೆಟ್ ಅನ್ನು ಹುಡುಕಿ ಕೊಟ್ಟ ನಾಯಿಯನ್ನು ಕಂಡು ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಯಾಕೆ ಎಂಬುದನ್ನು ತಿಳಿಯಲು ಮುಂದೆ ಓದಿ.
ವೈರಲ್ ಆಗಿರುವ ವಿಡಿಯೊದಲ್ಲಿ ಕುಟುಂಬ ಸದಸ್ಯರು ವೃದ್ಧ ಮಹಿಳೆಯ ಕೃತಕ ಹಲ್ಲುಗಳ ಸೆಟ್ ಅನ್ನು ಹುಡುಕಲು ಮನೆಯ ಮೂಲೆ ಮೂಲೆ ತಡಕಅಡಿದ್ದಾರೆ. ಅಜ್ಜಿ ಕೂಡ ಕುಟುಂಬದವರ ಜತೆ ಸೇರಿ ಹುಡುಕಿದ್ದಾಳೆ. ಅಜ್ಜಿ ಹಾಸಿಗೆ, ಡ್ರಾಯರ್ ಎಲ್ಲ ಕಡೆ ಹುಡುಕಿದರೂ ಆ ಹಲ್ಲು ಸೆಟ್ ಸಿಗಲಿಲ್ಲ. ಆದರೆ ಕೊನೆಗೆ ಈ ಹುಡುಕಾಟಕ್ಕೆ ಹಾಸ್ಯಮಯ ತಿರುವುವೊಂದು ಸಿಕ್ಕಿದೆ. ಅದೇನೆಂದರೆ ಅವರ ಮನೆಯ ಸಾಕು ನಾಯಿ ಅಜ್ಜಿಯ ಹಲ್ಲುಗಳ ಸೆಟ್ ಬಾಯಿಯಲ್ಲಿ ಕಚ್ಚಿಕೊಂಡು ಬಾಗಿಲ ಬಳಿ ಕುಳಿತಿತ್ತು. ಇದನ್ನು ಕಂಡು ಮನೆಯವರು ಬಿದ್ದು ಬಿದ್ದು ನಕ್ಕಿದ್ದಾರೆ. ಹಾಗೇ ಹಲ್ಲು ಸೆಟ್ ಕಾಣೆಯಾಗುವುದರ ಹಿಂದಿನ ಕಾರಣವನ್ನು ತಿಳಿದ ನೆಟ್ಟಿಗರು ಕೂಡ ನಕ್ಕಿದ್ದಾರೆ.
ಅಜ್ಜಿಯ ಹಲ್ಲು ಸೆಟ್ ಹಾಕಿಕೊಂಡು ನಾಯಿಯ ವೈರಲ್ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‍ಗಳಲ್ಲಿ ಜನರ ಗಮನಸೆಳೆದು ಇದನ್ನು ಅನೇಕರು ಹಂಚಿಕೊಂಡಿದ್ದಾರೆ. ಹಾಗೇ ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ನೆಟ್ಟಿಗರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ ಇನ್ನೂ ಕೆಲವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದಿದ್ದಾರೆ. ಆದರೆ ಆಕಸ್ಮಿಕವಾಗಿರಲಿ ಅಥವಾ ಉದ್ದೇಶಪೂರ್ವಕವಾಗಿರಲಿ, ಈ ದೃಶ್ಯ ನಿಸ್ಸಂದೇಹವಾಗಿ ಜನರ ಮುಖದಲ್ಲಿ ನಗುವನ್ನು ಮೂಡಿಸಿ ವೈರಲ್ ಆಗಿದಂತು ಖಂಡಿತ.
ಈ ಸುದ್ದಿಯನ್ನೂ ಓದಿ:Viral Video: ತಮ್ಮ ಮದ್ವೆ ದಿನವೂ ಪ್ರಾಣಿಪ್ರೇಮ ಮೆರೆದ ಆದರ್ಶ ದಂಪತಿ; ವಿಡಿಯೊ ನೋಡಿ
ನಾಯಿಯು ಅಜ್ಜಿಯ ಹಲ್ಲಿನ ಸೆಟ್ ಅನ್ನು ಧರಿಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ ನಾಯಿಯೊಂದು ತನ್ನ ಅಜ್ಜಿಯ ಹಲ್ಲುಗಳ ಸೆಟ್ ಅನ್ನು ಧರಿಸಿ ಮನೆಯಲ್ಲಿ ತಿರುಗಾಡಿದ್ದ ಮುದ್ದಾದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಾಯಿ ಮೈಲೋ ಮತ್ತು ಅದರ ಮಾಲೀಕಳಾದ ಲೋಲಾ ಅಜ್ಜಿಯ ಮನೆಗೆ ಬಂದಿದ್ದರಂತೆ. ಆದರೆ ನಾಯಿ ಮೈಲೋ ಮತ್ತು ಲೋಲಾ ಅಜ್ಜಿಯ ಮನೆಯಲ್ಲಿ ಸುತ್ತಾಡಿ ಮಲಗುವ ಕೋಣೆಗೆ ಬಂದಾಗ ನಾಯಿಯ ಮುಖ ವಿಭಿನ್ನವಾಗಿರುವುದನ್ನು ಗಮನಿಸಿದ್ದಾಳೆ. ಆಮೇಲೆ ಅದು ಅಜ್ಜಿಯ ನಕಲಿ ಹಲ್ಲುಗಳನ್ನು ಕದ್ದ ವಿಷಯ ಬಹಿರಂಗವಾಗಿತ್ತು.