IPL 2025: ತಲೆಬುಡ ಇಲ್ಲದ ಪಾಂಡ್ಯ ನಿರ್ಧಾರಕ್ಕೆ ರೊಚ್ಚಿಗೆದ್ದ ಆಕಾಶ್ ಅಂಬಾನಿ
MI vs LSG: ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ವಿಫಲವಾದರೂ ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ತೋರುವ ಮೂಲಕ 5 ವಿಕೆಟ್ ಕಿತ್ತು ಮಿಂಚಿದರು. ಇದೇ ವೇಳೆ ಐಪಿಎಲ್‌ನ ಇತಿಹಾಸದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ನಾಯಕ ಎಂಬ ಹಿರಿಮೆಗೂ ಪಾತ್ರರಾದರು.


ಮುಂಬಯಿ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(MI vs LSG) ತಂಡ 12 ರನ್ ಅಂತರದ ಸೋಲಿಗೆ ತುತ್ತಾಗಿತ್ತು. ಈ ಪಂದ್ಯದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರ ಕೆಲ ಹುಚ್ಚು ನಿರ್ಧಾರ ತಂಡದ ಮಾಲಕ ಆಕಾಶ್ ಅಂಬಾನಿ(Akash Ambani)ಗೆ ಅಸಮಾಧಾನ ತಂದಿದೆ. ಮೈದಾನದಲ್ಲೇ ಅವರು ಬೇಸರ ಹೊರಹಾಕಿದ ಫೋಟೊ ಮತ್ತು ವಿಡಿಯೊಗಳು ವೈರಲ್ ಆಗಿದೆ.
ಆವೇಶ್ ಖಾನ್ ಎಸೆದ ಕೊನೆಯ ಓವರ್‌ನಲ್ಲಿ, ಹಾರ್ದಿಕ್ ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ರನ್ ಓಡುವ ಅವಕಾಶವಿದ್ದರೂ ಪಾಂಡ್ಯ ಇದನ್ನು ನಿರಾಕರಿಸಿದರು. ಆದರೆ ಐದನೇ ಎಸೆತದಲ್ಲಿ ಸಿಂಗಲ್ ತೆಗೆದು ಸ್ಯಾಂಟ್ನರ್‌ಗೆ ಸ್ಟ್ರೈಕ್ ನೀಡಿದರು. ಹಾರ್ದಿಕ್ ಅವರ ಈ ನಿರ್ಧಾರದಿಂದ ಆಕಾಶ್ ಅಂಬಾನಿ ತೀವ್ರವಾಗಿ ಅಸಮಾಧಾನಗೊಂಡರು. ಎರಡು ಬಾಲ್ ತಿಂದಿಯಲ್ಲಾ ಎಂದು ಕೈಸನ್ನೆಯ ಮೂಲಕ ತಮ್ಮ ಕೋಪವನ್ನು ತೋರ್ಪಡಿಸಿದರು. ಒಂದೊಮ್ಮೆ ಪಾಂಡ್ಯ ಸಿಂಗಲ್ ತೆಗೆಯುತ್ತಿದ್ದರೆ ಸ್ಯಾಂಟ್ನರ್ ದೊಡ್ಡ ಹೊಡೆತದ ಮೂಲಕ ರನ್ ಗಳಿಸುವ ಸಾಧ್ಯತೆಯೂ ಇತ್ತು. ಏಕೆಂದರೆ ಅವರು ಅನುಭವಿ ಆಲ್‌ರೌಂಡರ್ ಕೂಡ ಆಗಿದ್ದರು.
ಇನ್ನೊಂದೆಡೆ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ್ದ ತಿಲಕ್ ವರ್ಮಾ ಅವರನ್ನು ಕೂಡ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲುಸುವಂತೆ ಹೇಳಿ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಸ್ಯಾಂಟ್ನರ್ ಅವರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಆದರೆ ಸ್ಯಾಂಟ್ನರ್‌ಗೆ ಸ್ಟ್ರೈಕ್ ಮಾತ್ರ ನೀಡಲಿಲ್ಲ. ತಲೆಬುಡ ಇಲ್ಲದ ಈ ನಿರ್ಧಾರಕ್ಕೆ ಆಕಾಶ್ ಅಂಬಾನಿ ತೀವ್ರ ಅಸಮಾಧಾನ ಹೊರಹಾಕಿದರು.
Let's laugh at akash ambani and mumbai indians management pic.twitter.com/ZiJWSSskbW
— V. (@UniquePullShot) April 4, 2025
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ವಿಫಲವಾದರೂ ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ತೋರುವ ಮೂಲಕ 5 ವಿಕೆಟ್ ಕಿತ್ತು ಮಿಂಚಿದರು. ಇದೇ ವೇಳೆ ಐಪಿಎಲ್‌ನ ಇತಿಹಾಸದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ನಾಯಕ ಎಂಬ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು. ಕುಂಬ್ಳೆ 16ಕ್ಕೆ 4 ವಿಕೆಟ್ ಪಡೆದಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ.
ಶುಕ್ರವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜಯಂಟ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 203 ರನ್‌ಗಳನ್ನು ಕಲೆ ಹಾಕಿತು. ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಿಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.