ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Objectionable Reels: ಹೆಂಡತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್ ವೈರಲ್‌;‌ ಯೂಟ್ಯೂಬರ್‌ ವಿರುದ್ಧ ಕ್ರಮಕ್ಕೆ ಆಗ್ರಹ

Objectionable Reels: ವೈರಲ್‌ ಆಗಿರುವ ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಹೆಂಡತಿಯನ್ನು ಅಡ ಇಟ್ಟು ಜೂಜಾಡುವುದನ್ನು ನೋಡಬಹುದಾಗಿದೆ. ಈ ರೀಲ್ಸ್‌ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. Why_K_ ಎಂಬ ಇನ್​ಸ್ಟಾಗ್ರಾಮ್​ ಅಕೌಂಟ್​ನಿಂದ ಈ ವಿಡಿಯೊ ಅಪ್ಲೋಡ್ ಆಗಿದೆ.

ಹೆಂಡತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್‌ ವೈರಲ್

Profile Prabhakara R Apr 4, 2025 5:27 PM

ಬೆಂಗಳೂರು: ಮಚ್ಚು ಹಿಡಿದು ರೀಲ್ಸ್​ ಮಾಡಿದ್ದಕ್ಕೆ ಇತ್ತೀಚೆಗೆ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಬಂಧನವಾಗಿದ್ದರು. ಮಾರಕಾಸ್ತ್ರ ಹಿಡಿದು ವಿಡಿಯೊ ಮಾಡಿದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿತ್ತು. ಇದೀಗ ಕನ್ನಡದ ಯೂಟ್ಯೂಬರ್‌ ಒಬ್ಬರ ಆಕ್ಷೇಪಾರ್ಹ ವಿಡಿಯೊ ವೈರಲ್‌ ಆಗಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಜೂಜಾಟದಲ್ಲಿ ಹೆಂಡತಿಯನ್ನೇ ಅಡವಿಟ್ಟು ರೀಲ್ಸ್ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. Why_K_ ಎಂಬ ಇನ್​ಸ್ಟಾಗ್ರಾಮ್​ ಅಕೌಂಟ್​ನಿಂದ ಈ ವಿಡಿಯೊ ಅಪ್ಲೋಡ್ ಆಗಿದೆ.

ಈ ವಿಡಿಯೊದಲ್ಲಿ ಯೂಟ್ಯೂಬರ್ ದಿವಾಕರ್ ಎಸ್ (Diwakar. s) ಕೂಡ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಹೆಂಡತಿಯನ್ನು ಅಡ ಇಟ್ಟು ಜೂಜಾಡುವುದನ್ನು ನೋಡಬಹುದಾಗಿದೆ. ಈ ರೀಲ್ಸ್‌ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸನಾತನ ಎಂಬ ಎಕ್ಸ್ ಬಳಕೆದಾರರು, ಸ್ವಾಸ್ಥ್ಯ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ? ಜೂಜಾಡುವುದು ಅಪರಾಧ. ಅದರಲ್ಲೂ ಹೆಂಡತಿಯನ್ನು ಅಡ ಇಟ್ಟು ಜೂಜಾಡುವುದು ಯಾವ ಸಮಾಜದಲ್ಲಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಈ ರೀತಿಯ ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.



ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ಇಂತಹ ವಿಡಿಯೋಗಳನ್ನು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದು ಕೇವಲ ರೀಲ್ಸ್‌ಗಾಗಿ ಮಾಡಿದ ತಮಾಷೆಯಲ್ಲ, ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ" ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಇಂತಹ ವಿಷಯಗಳ ಬಗ್ಗೆ ವಿಡಿಯೊ ಮಾಡುವ ಯೂಡ್ಯೂಬರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಮೆಟ್ರೋದಲ್ಲಿ ಸಖತ್ ಸ್ಟೆಪ್ ಹಾಕಿದ ಯುವಕ! ವಿಡಿಯೊ ಫುಲ್ ವೈರಲ್

Delhi Metro

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಡಾನ್ಸ್‌ ಮಾಡುವುದು ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ, ಬಸ್ ಸ್ಟ್ಯಾಂಡ್ ನಲ್ಲಿ ಡಾನ್ಸ್‌ ಮಾಡಿ ಬಳಿಕ ಅದನ್ನು ಸೋಷಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಿ ಫೇಮಸ್ ಆಗುವ ಅನೇಕರನ್ನು ನಾವು ದಿನನಿತ್ಯ ನೋಡುತ್ತೇವೆ. ಇದೀಗ ಪ್ರಯಾಣಿಕನೊಬ್ಬ ಜನಸಂದಣಿ ನಡುವೆಯೇ ರೈಲ್ವೇ ಬೋಗಿಯ ಬಾಗಿಲಿನ ಬಳಿ ನಿಂತು ಹಾಡುತ್ತಾ ನೃತ್ಯ ಮಾಡುತ್ತಿರುವ ವಿಡಿಯೊ‌ ಸಾಮಾಜಿಕ ಜಾಲತಾಣದಲ್ಲಿ (Viral Video) ತುಂಬಾನೇ ಸದ್ದು ಮಾಡುತ್ತಿದೆ. ಈ ಮೂಲಕ‌ ಬೋಗಿಯಲ್ಲಿದ್ದ ಪ್ರಯಾಣಿಕನ ಟ್ಯಾಲೆಂಟ್ ಅನೇಕ ಜನರ ಗಮನ ಸೆಳೆಯುವಂತೆ ಮಾಡಿದೆ.

ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಲೇ ಇದೆ‌. ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕರ ನಡುವೆ ಜಗಳ, ವಾಗ್ವಾದಗಳ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಆದರೆ ಪ್ರಯಾಣದ ವೇಳೆ ನಿತ್ಯ ಜಂಜಾಟವನ್ನು ಸ್ವಲ್ಪ ಪಕ್ಕಕ್ಕೆ ಇಟ್ಟು ಯುವಕನೊಬ್ಬನು ಹಾಡು ಹೇಳಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನು ರಂಜಿಸಿ ಮೆಚ್ಚುಗೆ ಪಡೆದಿದ್ದಾರೆ. ಪ್ರಯಾಣಿಕ ರೈಲು ನಿಲ್ದಾಣದ ಬೋಗಿ ಒಳಗೆ ಡಾನ್ಸ್‌ ಮಾಡುವ ದೃಶ್ಯವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಈ ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಮೆಟ್ರೋದಲ್ಲಿ ಡಾನ್ಸ್‌ ವಿಡಿಯೊ ಇಲ್ಲಿದೆ

ಮೆಟ್ರೋ ಪ್ರಯಾಣಿಕನೊಬ್ಬನು ಬೋಗಿಯೊಳಗೆ ನಿಂತು ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾನೆ. ಇದ್ದಕ್ಕಿದ್ದಂತೆಯೇ ಪ್ರಯಾಣಿಕ ಹಾಡು ಹಾಡುತ್ತ ಡ್ಯಾನ್ಸ್‌ ಮಾಡುತ್ತಿರುವುದನ್ನು ರೈಲೆ ‌ಬೋಗಿಯಲ್ಲಿದ್ದ  ಇತರ ಪ್ರಯಾಣಿಕರು ಬಹಳ ಕುತೂಹಲದಿಂದ ನೋಡುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ಅಲ್ಲೇ ಇದ್ದ ಪ್ರಯಾಣಿಕರು ಈ ಡಾನ್ಸ್ ದೃಶ್ಯವನ್ನು ವಿಡಿಯೊದಲ್ಲಿ  ಸೆರೆ ಹಿಡಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

ಇದನ್ನು ಓದಿ: Virat-Anushka : ಪ್ರೇಮಾನಂದ್‌ ಮಹಾರಾಜರ ಆಶ್ರಮಕ್ಕೆ ತೆರಳಿದ ವಿರುಷ್ಕಾ ದಂಪತಿ!

ಈ ವಿಡಿಯೊಗೆ ನೆಟ್ಟಿಗರು ನಾನಾ ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದು ದೆಹಲಿಯ ಮೆಟ್ರೋ ಹೀಗೆ ಮುಂದುವರಿಯುತ್ತಾ ಹೋದರೆ ವಿದೇಶದ ನ್ಯೂಯಾರ್ಕ್ ಮೆಟ್ರೋದಂತೆ ಕಾಣಬಹುದು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಈ ರೀತಿಯ ಸಹ ಪ್ರಯಾಣಿಕರು ಜೊತೆಗಿದ್ದರೆ ಯಾವುದೇ ಪ್ರಯಾಣ ಬೋರ್ ಅನಿಸಲಾರದು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಹಿಂದೆಯು ಮೆಟ್ರೋದಲ್ಲಿ ಯುವತಿ ಒಬ್ಬಳು ಬಾಲಿವುಡ್ ಹಾಡಿಗೆ ನೃತ್ಯ ಮಾಡಿರುವ ವಿಡಿಯೊ‌ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು.