IPL 2025: ಬಾಲ್ ಗರ್ಲ್ ಎದೆಗೆ ಬಡಿದ ಸೂರ್ಯಕುಮಾರ್ ಸಿಕ್ಸರ್; ಅಪಾಯದಿಂದ ಪಾರು
Suryakumar Yadav: ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ 43 ಎಸೆತಗಳಿಂದ 67 ರನ್ ಬಾರಿಸಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್ ಪ್ರದರ್ಶನ ವ್ಯರ್ಥವಾಯಿತು. ಈ ಬ್ಯಾಟಿಂಗ್ ಇನಿಂಗ್ಸ್ ವೇಳೆ 9 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಿತು.


ಮುಂಬಯಿ: ಶುಕ್ರವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಮುಂಬೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಾರಿಸಿದ ಸಿಕ್ಸರ್ ಚೆಂಡು ಬಾಲ್ ಗರ್ಲ್ ಎದೆಗೆ ಬಡಿದು ಅದೃಷ್ಟವಶಾತ್ ಆಕೆ ಗಾಯದಿಂದ ಪಾರಾಗಿದ್ದಾಳೆ. ಮುಂಬೈ ತಂಡದ ಚೇಸಿಂಗ್‌ನ ಐದನೇ ಓವರ್‌ನಲ್ಲಿಈ ಘಟನೆ ಸಂಭವಿಸಿತ್ತು. ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆವೇಶ್ ಖಾನ್ ಎಸೆದ ಈ ಓವರ್‌ನ ಅಂತಿಮ ಎಸೆತವನ್ನು ಸೂರ್ಯಕುಮಾರ್ ಅವರು ಡೀಪ್ ಸ್ಕ್ವೇರ್ ಲೆಗ್‌ನತ್ತ ಬಾರಿಸಿದರು. ಸಿಕ್ಸರ್ ಗೆರೆ ದಾಟಿದ ಚೆಂಡು ನೇರವಾಗಿ ಬಾಲ್ ಗರ್ಲ್ ಎದೆಗೆ ಬಡಿದಿದೆ. ಚೆಂಡು ಬಡಿದ ರಭಸಕ್ಕೆ ಒಂದು ಕ್ಷಣ ಬೆಚ್ಚಿಬಿದ್ದ ಈಗೆ ಬಳಿಕ ಗಾಯದಿಂದ ಪಾರಾದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕಿರು ನಗೆ ಬೀರಿ ಚೆಂಡನ್ನು ಲಕ್ನೋ ಫೀಲ್ಡರ್‌ಗೆ ಹಿಂತಿರುಗಿಸಿದಳು.
ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ 43 ಎಸೆತಗಳಿಂದ 67 ರನ್ ಬಾರಿಸಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್ ಪ್ರದರ್ಶನ ವ್ಯರ್ಥವಾಯಿತು. ಈ ಬ್ಯಾಟಿಂಗ್ ಇನಿಂಗ್ಸ್ ವೇಳೆ 9 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಿತು. ಪಂದ್ಯದಲ್ಲಿ ಲಕ್ನೋ ತಂಡವು ಸ್ಲೋ ಓವರ್ ರೇಟ್ ಕಾಯ್ದುಕೊಂಡ ಕಾರಣದಿಂದ ನಾಯಕ ಪಂತ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಸೀಸನ್ ನಲ್ಲಿ ಲಕ್ನೋ ತಂಡದ ನಾಯಕನ ಮೊದಲ ತಪ್ಪು ಇದಾಗಿದೆ.
ಇದನ್ನೂ ಓದಿ IPL 2025: ನಿರ್ಣಾಯಕ ಘಟ್ಟದಲ್ಲೇ ಮೈದಾನ ತೊರೆದು ಟೀಕೆಗೆ ಗುರಿಯಾದ ತಿಲಕ್ ವರ್ಮಾ
ಕಳೆದ ಮಂಗಳವಾರ ನಡೆದಿದ್ದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡದ ಮಾರ್ಕಸ್ ಸ್ಟೋಯಿನಿಸ್ (Marcus Stoinis) ಸಿಕ್ಸರ್ಗಟ್ಟಿದ ಚೆಂಡೊಂದು ನೇರವಾಗಿ ಹೋಗಿ ಮಹಿಳಾ ಪೊಲೀಸ್ ಸಿಬ್ಬಂದಿಯ ತೊಡೆಗೆ ಬಡಿದು ಗಾಯಗೊಂಡಿದ್ದರು. ಮೊಹಮ್ಮದ್ ಸಿರಾಜ್ ಅವರ ಬ್ಯಾಕ್-ಆಫ್-ಎ-ಲೆಂಗ್ತ್ ಎಸೆತವನ್ನು ಸ್ಟೋಯಿನಿಸ್ ಡೀಪ್ ಮಿಡ್-ವಿಕೆಟ್ ಮೇಲೆ ಬಾರಿಸಿದರು. ಸಿಕ್ಸರ್ ಗೆರೆ ದಾಟಿದ ಚೆಂಡು ಬೌಂಡರಿ ಲೈನ್ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಭದ್ರತಾ ಅಧಿಕಾರಿಯೊಬ್ಬರಿಗೆ ತಗುಲಿತ್ತು.