ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭಾರತೀಯ ಮಹಿಳೆಯರು ಲೈಂಗಿಕತೆಯನ್ನು ಆನಂದಿಸಲ್ಲ; ಬೋಲ್ಡ್‌ ನಟಿಯ ಬಿಚ್ಚು ಮಾತು

Neena Gupta: ಬೋಲ್ಡ್‌ ಹೇಳಿಕೆಗಳ ಮೂಲಕ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುವ ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಇತ್ತೀಚೆಗೆ ಲಿಲ್ಲಿ ಸಿಂಗ್ ಅವರೊಂದಿಗಿನ ಚಾಟ್‍ನಲ್ಲಿ ಭಾರತೀಯ ಮಹಿಳೆಯರು ಲೈಂಗಿಕತೆಯ ಬಗ್ಗೆ ಎಂತಹ ಮನೋಭಾವನೆಯನ್ನು ಹೊಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಭಾರತೀಯ ಮಹಿಳೆಯರು ಲೈಂಗಿಕತೆಯನ್ನು ಆನಂದಿಸಲ್ಲ: ನೀನಾ ಗುಪ್ತಾ

ನೀನಾ ಗುಪ್ತಾ.

Profile pavithra Apr 4, 2025 6:38 PM

ಮುಂಬೈ: ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ (Neena Gupta) ಇತ್ತೀಚೆಗೆ ಲಿಲ್ಲಿ ಸಿಂಗ್ ಅವರೊಂದಿಗೆ ಇತ್ತೀಚೆಗೆ ನಡೆಸಿದ ಚಾಟ್‍ನಲ್ಲಿ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಭಾರತದಲ್ಲಿ ಮಹಿಳೆಯರು ಲೈಂಗಿಕತೆಯನ್ನು ಕೆಟ್ಟದ್ದು ಎಂದು ಭಾವಿಸುತ್ತಾರೆ. ಲೈಂಗಿಕತೆಯು ತಮ್ಮ ಸಂತೋಷಕ್ಕಾಗಿ ಇದೆ ಎಂದು ಭಾವಿಸುವುದಿಲ್ಲ. ಬದಲಾಗಿ ಲೈಂಗಿಕತೆಯು ಪುರುಷರ ಸಂತೋಷಕ್ಕಾಗಿ ಮತ್ತು ಮಕ್ಕಳನ್ನು ಪಡೆಯಲು ಮಾತ್ರ ಎಂದು ನಂಬುತ್ತಾರೆ. ಈ ಭಾವನೆ ನನಗೆ ಬೇಸರವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ. ಇದರ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

"ನಾನು ಭಾರತದ ಬಗ್ಗೆ ಮಾತನಾಡುತ್ತಿದ್ದೇನೆ. ಅಲ್ಲಿ ಶೇ. 95 ಅಥವಾ ಶೇ. 99ರಷ್ಟು ಮಹಿಳೆಯರಿಗೆ ಲೈಂಗಿಕತೆಯನ್ನು ಆನಂದಿಸುವ ಹಕ್ಕು ಇದೆ ಎಂದು ತಿಳಿದಿಲ್ಲ. ಇದು ಗಂಡನನ್ನು ಮೆಚ್ಚಿಸಲು ಮತ್ತು ತಾಯಿಯಾಗಲು ಎಂದು ಅವರು ಭಾವಿಸುತ್ತಾರೆ. ನಮ್ಮಂತಹ ಕೆಲವು ಜನರು ಮಾತ್ರ ಅದನ್ನು ಆನಂದಿಸುತ್ತಾರೆ. ಆದರೆ ದೇಶದ ಹೆಚ್ಚಿನ ಮಹಿಳೆಯರಿಗೆ, ಲೈಂಗಿಕತೆಯು ಆನಂದಿಸುವ ವಿಷಯವಲ್ಲ” ಎಂದಿದ್ದಾರೆ.

ನೀನಾ ಗುಪ್ತಾ ವಿಡಿಯೊ ಇಲ್ಲಿದೆ ನೋಡಿ...

ಸೆಕ್ಸ್ ಪದದ ಬಗ್ಗೆ ನೀನಾ ಹೇಳಿದ್ದೇನು?

ಈ ಮಾತುಕತೆಯ ವೇಳೆ 'ಸೆಕ್ಸ್' ಎಂಬ ಪದವನ್ನು ಮೃದುವಾಗಿ ಅಲ್ಲ ಬಹಿರಂಗವಾಗಿ ಹೇಳಿದ್ದಕ್ಕಾಗಿ ಲಿಲ್ಲಿ ಸಿಂಗ್ ನೀನಾ ಗುಪ್ತಾ ಅವರನ್ನು ಹೊಗಳಿದ್ದಾರೆ. ಈ ಹಿಂದೆ ನೀನಾ ಅವರು ಮನೆಯಲ್ಲಿ ಈ ಪದಗಳನ್ನು ಮೃದುವಾಗಿ ಮಾತನಾಡುತ್ತಿದ್ದರಂತೆ. ಆದರೆ ಈಗ ಅವರು ಹಾಗೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಯಾಕೆಂದರೆ ಆ ಪದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ವಿಶ್ವದ ಅತ್ಯಂತ ಹೆಚ್ಚು ಬಳಕೆಯಾಗುವ ಪದವಾಗಿದೆ. ಈಗ ತಾನು ಅದನ್ನು ಮುಕ್ತವಾಗಿ ಮಾತನಾಡುತ್ತೇನೆ, ತನಗೆ ಯಾವುದೇ ಹಿಂಜರಿಕೆ ಇಲ್ಲ ಎಂದಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ ನೀನಾ ಮಾಡಿದ್ದೇನು?

ಚಿತ್ರೀಕರಣದ ಸಮಯದಲ್ಲಿ, ಉಳಿದ ಪಾತ್ರವರ್ಗದವರು ಗ್ರೀನ್‍ ರೂಂಗೆ ಹೋಗಿ ಮೈಕ್ ಅನ್ನು ಇಡುತ್ತಿದ್ದರೆ, ನೀನಾ ಶೂಟಿಂಗ್ ಸೆಟ್‍ನಲ್ಲಿ ಎಲ್ಲರ ಮುಂದೆ ಮೈಕ್ ಇಡುತ್ತಿದ್ದರಂತೆ. ಈ ಬಗ್ಗೆ ಮಾತನಾಡಿದ ನೀನಾ, "ಆರಂಭದಲ್ಲಿ, ನಾನು ಹೊಸಬಳಾಗಿದ್ದಾಗ, ನಾನು ಸಹ ರೂಂಗೆ ಹೋಗಿ ಮೈಕ್ ಇಡುತ್ತಿದ್ದೆ. ಆದರೆ ಈಗ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಇತರರೊಂದಿಗೆ ಮಾತನಾಡುತ್ತಲೇ ಇರುವಾಗಲೇ ಮೈಕ್ ಹಾಕಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ವೆಡ್ಡಿಂಗ್‌ ಆನಿವರ್ಸರಿ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವ್ಯಕ್ತಿ ಹಠಾಟ್‌ ಕುಸಿದು ಬಿದ್ದು ದಾರುಣ ಸಾವು-ವಿಡಿಯೊ ವೈರಲ್!

ನೀನಾ ಮುಂಬೈ ಶೂಟಿಂಗ್ ಸಿಬ್ಬಂದಿಯನ್ನು ಹೊಗಳಿದ್ದೇಕೆ?

ಈ ನಡುವೆ ಮುಂಬೈಯ ಶೂಟಿಂಗ್ ಸಿಬ್ಬಂದಿಯನ್ನು ಹೊಗಳಿದ ನೀನಾ ಗುಪ್ತಾ, "ಇಲ್ಲಿನ ಲೈಟ್ ಮ್ಯಾನ್, ಸೌಂಡ್ ಮತ್ತು ಟೆಕ್ನಿಕಲ್ ಜನರು ಎಂದಿಗೂ ದಿಟ್ಟಿಸಿ ನೋಡುವುದಿಲ್ಲ. ಅವರು ಸಹ ಅದಕ್ಕೆ ಒಗ್ಗಿಕೊಂಡಿದ್ದಾರೆ. ಏಕೆಂದರೆ ಎಲ್ಲರೂ ಮೈಕ್ ಅನ್ನು ಇದೇ ರೀತಿ ಇಡುತ್ತಾರೆ. ನಾನು ಇನ್ನು ಮುಂದೆ ನಾಚಿಕೆಪಡುವುದಿಲ್ಲ. ನನ್ನ ಗಮನ ನನ್ನ ಕೆಲಸದ ಮೇಲಿದೆ. ಅನುಭವದೊಂದಿಗೆ, ಭಯಪಡುವ ಅಗತ್ಯವಿಲ್ಲ ಎಂದು ಅರ್ಥಮಾಡಿಕೊಂಡಿದ್ದೇನೆ. ನಾನು ಈಗಿರುವ ರೀತಿಯಲ್ಲಿರಲು ಇಷ್ಟಪಡುತ್ತೇನೆ" ಎಂದು ಹೇಳಿದ್ದಾರೆ.

.