ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ನಿರ್ಣಾಯಕ ಘಟ್ಟದಲ್ಲೇ ಮೈದಾನ ತೊರೆದು ಟೀಕೆಗೆ ಗುರಿಯಾದ ತಿಲಕ್‌ ವರ್ಮಾ

ಈ ಹಿಂದೆ 2022ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಲಕ್ನೋ ತಂಡದ ವಿರುದ್ಧ ಆರ್ ಅಶ್ವಿನ್ ಮೈದಾನ ತೊರೆದಿದ್ದರು. ಬಳಿಕ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಅಥರ್ವ ತೈಡೆ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ ಕೂಡ ಮೈದಾನ ತೊರೆದಿದ್ದರು. ಇದೀಗ ಈ ಪಟ್ಟಿಗೆ ತಿಲಕ್ ವರ್ಮಾ ಕೂಡ ಸೇರ್ಪಡೆಗೊಂಡಿದ್ದಾರೆ.

ನಿರ್ಣಾಯಕ ಘಟ್ಟದಲ್ಲೇ ಮೈದಾನ ತೊರೆದು ಟೀಕೆಗೆ ಗುರಿಯಾದ ತಿಲಕ್‌ ವರ್ಮಾ

Profile Abhilash BC Apr 5, 2025 8:10 AM

ಮುಂಬಯಿ: ಶುಕ್ರವಾರ ನಡೆದಿದ್ದ ಲಕ್ನೋ ಸೂಪರ್ ಜೈಂಟ್ಸ್(MI vs LSG) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ಬ್ಯಾಟರ್ ತಿಲಕ್ ವರ್ಮಾ(Tilak Varma) ಆಟದ ನಡುವೆಯೇ ಮೈದಾನ ತೊರೆದು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ತಂಡದ ಸೋಲಿಗೂ ಕೂಡ ತಿಲಕ್ ವರ್ಮಾ ನೇರ ಕಾರಣ ಎಂದು ತಂಡದ ಅಭಿಮಾನಿಗಳು ದೂರಿದ್ದಾರೆ. ಪಂದ್ಯದಲ್ಲಿ ಮುಂಬೈ ತಂಡ 12 ರನ್‌ ಅಂತರದ ಸೋಲಿಗೆ ತುತ್ತಾಯಿತು.

ತಂಡದ ಗೆಲುವಿಗೆ 7 ಎಸೆತಗಳಲ್ಲಿ 24 ರನ್‌ ಬೇಕಿದ್ದಾಗ ರಿಟರ್ಡ್‌ ಹರ್ಟ್‌ ಆಗಿ ಪೆವಿಲಿಯನ್‌ ಸೇರಿಕೊಂಡರು. ಬಳಿಕ ಕ್ರೀಸ್‌ಗೆ ಬಂದ ಮಿಚೆಲ್‌ ಸ್ಯಾಂಟ್ನರ್‌ ಮತ್ತು ಹಾರ್ದಿಕ್‌ ಪಾಂಡ್ಯ ಸೇರಿ 9 ರನ್ ಗಳಿಸಲಷ್ಟೇ ಶಕ್ತರಾದರು. ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ ತಿಲಕ್‌, 23 ಎಸೆತಗಳಲ್ಲಿ 25 ರನ್ ಗಳಿಸಿದರು. ಸ್ಫೋಟಕ ಬ್ಯಾಟರ್‌ ಆಗಿದ್ದರೂ ಪಂದ್ಯವನ್ನು ಗೆಲ್ಲಿಸದೇ ಅರ್ಧದಲ್ಲೇ ಮೈದಾನ ತೊರೆದ ಅವರ ಈ ನಿರ್ಧಾರಕ್ಕೆ ಮಾಜಿ ಆಟಗಾರರಾದ ಹರ್ಭಜನ್‌ ಸಿಂಗ್‌, ಇರ್ಫಾನ್‌ ಪಠಾಣ್‌ ಸೇರಿ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಕೊಂಚ ಮೊದಲೇ ಈ ನಿರ್ಧಾರ ಕೈಗೊಂಡಿದ್ದರೆ ಪಂದ್ಯ ಗೆಲ್ಲುವ ಸಾಧ್ಯತೆ ಇತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.



ನಾಲ್ಕನೇ ಆಟಗಾರ

ಪಂದ್ಯ ನಡೆಯುತ್ತಿರುವಾಗಲೇ ಮೈದಾನ ತೊರೆದ ತಿಲಕ್ ವರ್ಮಾ ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆಗೆ ಪಾತ್ರರಾದರು. ಪಂದ್ಯದ ನಡುವೆ ಮೈದಾನ ತೊರೆಯುವ ಮೂಲಕ ಈ ರೀತಿ ಮೈದಾನ ತೊರೆದ 4ನೇ ಆಟಗಾರ ಎಂಬ ಅನಗತ್ಯ ದಾಖಲೆ ಬರೆದರು.

ಇದನ್ನೂ ಓದಿ IPL 2025: ದಂಡ ಬಿದ್ದರೂ ನೋಟ್‌ಬುಕ್‌ ಸೆಲೆಬ್ರೇಷನ್‌ ಬಿಡದ ದಿಗ್ವೇಶ್‌!

ಈ ಹಿಂದೆ 2022ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಲಕ್ನೋ ತಂಡದ ವಿರುದ್ಧ ಆರ್ ಅಶ್ವಿನ್ ಮೈದಾನ ತೊರೆದಿದ್ದರು. ಬಳಿಕ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಅಥರ್ವ ತೈಡೆ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ ಕೂಡ ಮೈದಾನ ತೊರೆದಿದ್ದರು. ಇದೀಗ ಈ ಪಟ್ಟಿಗೆ ತಿಲಕ್ ವರ್ಮಾ ಕೂಡ ಸೇರಿದ್ದಾರೆ.

ಶುಕ್ರವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್‌ ಜಯಂಟ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 203 ರನ್‌ಗಳನ್ನು ಕಲೆ ಹಾಕಿತು. ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಿಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.