Assaulting Case: ಪತ್ನಿಯಿಂದ ಕೊಲೆ ಬೆದರಿಕೆ ಇದೆ, ರಕ್ಷಣೆ ಕೊಡಿ; ಸಿಎಂಗೆ ಪತ್ರ ಬರೆದ ವ್ಯಕ್ತಿ
ಮಧ್ಯಪ್ರದೇಶದ ಗ್ವಾಲಿಯರ್ ವ್ಯಕ್ತಿಯೊಬ್ಬ ತನ್ನ ಜೀವ ರಕ್ಷಣೆಗಾಗಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾನೆ. ಪತ್ನಿಗೆ ನಾಲ್ಕು ಪ್ರಿಯಕರರಿದ್ದಾರೆ. ಆಕೆಯಿಂದ ತನ್ನ ಪ್ರಾಣಕ್ಕೆ ಕುತ್ತಿದೆ ಎಂದು ಆತ ಪತ್ರದಲ್ಲಿ ಬರೆದಿದ್ದಾನೆ. ಸದ್ಯ ಆತ ಬರೆದ ಪತ್ರ ಎಲ್ಲೆಡೆ ವೈರಲ್ ಆಗಿದೆ.


ಭೋಪಾಲ್: ಉತ್ತರ ಪ್ರದೇಶದ ಮೀರತ್‌ನಲ್ಲಿ ಮರ್ಚೆಂಟ್ ನೌಕಾಪಡೆ ಅಧಿಕಾರಿ ಸೌರಭ್ ರಜಪೂತ್ (Assaulting Case) ಅವರ ಹತ್ಯೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಇದಾದ ಬಳಿಕ ಹಲವು ರಾಜ್ಯಗಳಲ್ಲಿ ಪತ್ನಿಯರೇ ಇದ್ದು ತಮ್ಮ ಪತಿಯನ್ನು ಕೊಲೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಮಧ್ಯಪ್ರದೇಶದ ಗ್ವಾಲಿಯರ್ ವ್ಯಕ್ತಿಯೊಬ್ಬ ತನ್ನ ಜೀವ ರಕ್ಷಣೆಗಾಗಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾನೆ. ಪತ್ನಿಗೆ ನಾಲ್ಕು ಪ್ರಿಯಕರರಿದ್ದಾರೆ. ಆಕೆಯಿಂದ ತನ್ನ ಪ್ರಾಣಕ್ಕೆ ಕುತ್ತಿದೆ ಎಂದು ಆತ ಪತ್ರದಲ್ಲಿ ಬರೆದಿದ್ದಾನೆ. ಸದ್ಯ ಆತ ಬರೆದ ಪತ್ರ ಎಲ್ಲೆಡೆ ವೈರಲ್ ಆಗಿದೆ. ಗ್ವಾಲಿಯರ್‌ನ ಸಿಹಿತಿಂಡಿ ತಯಾರಕನಾದ ಅನಿಲ್ ಎಂಬಾತ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರಿಗೆ ಪತ್ರ ಬರೆದಿದ್ದಾನೆ.
"ಮುಖ್ಯಮಂತ್ರಿ ಸರ್, ದಯವಿಟ್ಟು ನನಗೆ ನ್ಯಾಯ ನೀಡಿ. ನನ್ನ ಹೆಂಡತಿ ನನಗೆ ದ್ರೋಹ ಮಾಡಿದ್ದಾಳೆ. ಅವಳು ಈಗ ನನ್ನನ್ನು ಕೊಲೆ ಮಾಡಬಹುದು. ಅವಳಿಗೆ ನಾಲ್ಕು ಪ್ರಿಯಕರರಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಘಟನೆ ನನ್ನ ಜೊತೆಗೂ ಆಗಬಹುದು. ಆಕೆ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಅನಿಲ್ ಆರೋಪಿಸಿದ್ದಾರೆ. ಮುಖ್ಯಮಂತ್ರಿಗೆ ಪತ್ರ ಬರೆದು ಸ್ಥಳೀಯ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದ್ದೇನೆ ಎಂದು ಸೇನ್ ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ತಮ್ಮನ್ನು ತೊರೆದಿದ್ದ ತಮ್ಮ ಪತ್ನಿಗೆ ಬಹು ಗೆಳೆಯರಿದ್ದಾರೆ ಮತ್ತು ಪ್ರಸ್ತುತ ರಾಹುಲ್ ಬಾಥಮ್ ಎಂಬ ವ್ಯಕ್ತಿಯೊಂದಿಗೆ ವಾಸ ಮಾಡುತ್ತಿದ್ದಾಳೆ. ತಮ್ಮ ಒಂಬತ್ತು ವರ್ಷದ ಮಗನ ಸಾವಿಗೆ ಅವಳು ಕಾರಣ ಎಂದು ಸೇನ್ ಆರೋಪಿಸಿದ್ದಾರೆ ಮತ್ತು ಅವರ ಜೊತೆಗಿರುವ ಏಳು ವರ್ಷದ ಮಗುವಿನ ಜೀವಕ್ಕೆ ಭಯವಿದೆ ಎಂದು ಅನಿಲ್ ಹೇಳಿದ್ದಾರೆ. ಅವಳು ತನಗೆ ಬೆದರಿಕೆ ಹಾಕುತ್ತಿದ್ದಾಳೆ. ನನಗೆ ನನ್ನ ಮತ್ತೊಂದು ಮಗುವಿನ ಕುರಿತು ಚಿಂತೆಯಾಗುತ್ತಿದೆ. ದಯವಿಟ್ಟು ನನಗೆ ರಕ್ಷಣೆ ಕೊಡಿಸಿ ಎಂದು ಅನಿಲ್ ಕೇಳಿಕೊಂಡಿದ್ದಾರೆ.
ಈ ಬಗ್ಗೆ ಜನಕ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ವಿ.ಎಸ್. ಚೌಹಾಣ್ ಮಾತನಾಡಿ, ವ್ಯಕ್ತಿ ದೂರು ನೀಡಿದ ತಕ್ಷಣ ಸ್ಪಂದಿಸಿದ್ದೇವೆ. ಪೊಲೀಸರು ಈ ವಿಷಯವನ್ನು ಪರಿಶೀಲಿಸುತ್ತಾರೆ ಮತ್ತು ಅಗತ್ಯ ತನಿಖೆಗಳನ್ನು ನಡೆಸುತ್ತಾರೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Apsara Murder Case: ಕಿರುತೆರೆ ನಟಿ ಹತ್ಯೆ ಪ್ರಕರಣ; ದೇವಸ್ಥಾನದ ಅರ್ಚಕನಿಗೆ ಜೀವಾವಧಿ ಶಿಕ್ಷೆ
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಪತ್ನಿಯೊಬ್ಬಳು ತನ್ನ ಗೆಳೆಯನೊಟ್ಟಿಗೆ ಸೇರಿ ಪತಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಉತ್ತರ ಪ್ರದೇಶದ ಗೊಂಡಾದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ದೇಹದ ಭಾಗಗಳನ್ನು ಕತ್ತರಿಸಿ ಡ್ರಮ್‌ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಪ್ರಸ್ತುತ ಗೊಂಡಾದ ಜಲ ನಿಗಮದಲ್ಲಿ ಕೆಲಸ ಮಾಡುತ್ತಿರುವ ಜೂನಿಯರ್ ಎಂಜಿನಿಯರ್ (ಜೆಇ) ಧರ್ಮೇಂದ್ರ ಕುಶ್ವಾಹ, ತಮ್ಮ ಪತ್ನಿ ಮಾಯಾ ಮೌರ್ಯ ಮತ್ತು ಆಕೆಯ ಪ್ರಿಯಕರ ನೀರಜ್ ಮೌರ್ಯ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.