Car Accident: ನೋಯ್ಡಾ ಅಪಘಾತಕ್ಕೆ ಬಿಗ್ ಟ್ವಿಸ್ಟ್; ಕಾರು ಮಾಲೀಕ ಯೂಟ್ಯೂಬರ್ ಮೃದುಲ್ ತಿವಾರಿ ಎಂದ ಪೊಲೀಸರು
ಭಾನುವಾರ ನೋಯ್ಡಾದಲ್ಲಿ ಐಶಾರಾಮಿ ಕಾರೊಂದು ಇಬ್ಬರು ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ. ಸದ್ಯ ಪೊಲೀಸರು ಚಾಲಕ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಕಾರಿನ ಮಾಲೀಕ ಜನಪ್ರಿಯ ಯೂಟ್ಯೂಬರ್ ಮೃದುಲ್ ತಿವಾರಿ ಎಂದು ಪೊಲೀಸರು ತಿಳಿಸಿದ್ದಾರೆ.


ಲಖನೌ: ಭಾನುವಾರ ನೋಯ್ಡಾದಲ್ಲಿ ಐಶಾರಾಮಿ ಕಾರೊಂದು (Car Accident) ಇಬ್ಬರು ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ. ಸದ್ಯ ಪೊಲೀಸರು ಚಾಲಕ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಕಾರಿನ ಮಾಲೀಕ ಜನಪ್ರಿಯ ಯೂಟ್ಯೂಬರ್ ಮೃದುಲ್ ತಿವಾರಿ ಎಂದು ಪೊಲೀಸರು ತಿಳಿಸಿದ್ದಾರೆ.ನೋಯ್ಡಾದ ಸೆಕ್ಟರ್ 94 ರಲ್ಲಿ ಇಬ್ಬರು ವ್ಯಕ್ತಿಗಳಿಗೆ ಡಿಕ್ಕಿ ಹೊಡೆದ ನಂತರ ಚಾಲಕ ದೀಪಕ್ ನನ್ನು ಪೊಲೀಸರು ವಶಕ್ಕೆ ಪಡೆದರು. ಆರಂಭಿಕ ತನಿಖೆಯ ಸಮಯದಲ್ಲಿ, ದೀಪಕ್ ಕಾರನ್ನು ಟೆಸ್ಟ್ ಡ್ರೈವ್ ಗೆ ತೆಗೆದುಕೊಂಡು ಹೋಗುತ್ತಿದ್ದೆ ಮತ್ತು ಅದು ತನಗೆ ಸೇರಿದ್ದಲ್ಲ ಎಂದು ಒಪ್ಪಿಕೊಂಡಿದ್ದಾನೆ.
ಜೈಪುರ ಮೂಲದ ಆರೋಪಿ ದೀಪಕ್ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕಾರು ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದಾನೆ. ತನಿಖೆಯಿಂದ ಆತ ಐಷಾರಾಮಿ ಕಾರನ್ನು ಟೆಸ್ಟ್ ಡ್ರೈವ್‌ಗಾಗಿ ತೆಗೆದುಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ. ಅಪಘಾತಗೊಂಡ ಲ್ಯಾಂಬೋರ್‌ಗಿನಿ ಕಾರು ಯೂಟ್ಯೂಬರ್ ಮೃದುಲ್ ತಿವಾರಿ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ, ಸ್ಥಳೀಯರು ಜೋರಾಗಿ ಶಬ್ದ ಕೇಳಿದ್ದಾರೆ. ಕಾರು ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿನಗೆ ಜೀವದ ಬೆಲೆ ತಿಳಿದಿದೆಯೇ? ಎಂದು ಹೇಳಿದ್ದಾರೆ.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರಲ್ಲಿ ಒಬ್ಬರು ದೀಪಕ್ ಮೇಲೆ ಅತಿ ವೇಗದ ಚಾಲನೆ ಆರೋಪ ಮಾಡಿದರು. ದೀಪಕ್ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದ ಎಂದು ಆರೋಪಿಸಿದ್ದರು. ಗಾಯಗೊಂಡವರನ್ನು ಡಿಜೆನ್ ರವಿದಾಸ್ ಮತ್ತು ರಂಭು ಕುಮಾರ್ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ವಡೋದರಾ ಕಾರು ಅಪಘಾತ: ತಾನು ಕುಡಿದೇ ಇಲ್ಲ, ಎಲ್ಲ ತಪ್ಪು ರಸ್ತೆ ಗುಂಡಿಗಳದ್ದು; ಆರೋಪಿ ವಾದಕ್ಕೆ ಪೊಲೀಸರು ಸುಸ್ತು
ಗಂಟೆಗೆ 300 ಕಿ.ಮೀ ವೇಗದಲ್ಲಿ ತಮ್ಮ ಕಡೆಗೆ ಬರುತ್ತಿದ್ದ ಲ್ಯಾಂಬೋರ್ಘಿನಿ ಕಾರು ತಮಗೆ ಡಿಕ್ಕಿ ಹೊಡೆದಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ. "ಒಂದು ಕಾರು ಗಂಟೆಗೆ 300 ಕಿ.ಮೀ ವೇಗದಲ್ಲಿ ಬರುತ್ತಿತ್ತು. ಕಾರು ಡಿಕ್ಕಿ ಹೊಡೆದ ನಂತರ ನಾವು ಮೂವರೂ ಚರಂಡಿಯೊಳಗೆ ಬಿದ್ದೆವು. ಅವನು ಗಂಟೆಗೆ 300 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದನು" ಎಂದು ಕಾರ್ಮಿಕ ತಿಳಿಸಿದ್ದಾನೆ. ವಿಚಾರಣೆಯ ಸಮಯದಲ್ಲಿ, ವಾಹನದಲ್ಲಿನ ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂದು ದೀಪಕ್ ಪೊಲೀಸರಿಗೆ ತಿಳಿಸಿದ್ದ. ಆರೋಪಿ ದೀಪಕ್ ನನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು, ನಂತರ ಅಪಘಾತದ ಸಮಯದಲ್ಲಿ ಅವನು ಮದ್ಯ ಸೇವಿಸಿರಲಿಲ್ಲ ಎಂದು ತಿಳಿದು ಬಂದಿತ್ತು.