Saturday, 27th April 2024

ಇಂದು ರಾಯಲ್ಸ್‌ ಚ್ಯಾಲೆಂಜರ‍್ಸ್‌’ಗೆ ಸನ್‌ರೈಸರ‍್ಸ್‌ ಸವಾಲು

ದುಬಾಯಿ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಯಲ್ ಚ್ಯಾಲೆಂಜರ‍್ಸ್‌ ಬೆಂಗಳೂರು ಹಾಗೂ ಸನ್ ರೈಸರ‍್ಸ್ ಹೈದರಾಬಾದ್‌ ನಡುವಿನ ಐಪಿಎಲ್ ೧೩ನೇ ಅವತರಣಿಕೆಯ ಮೂರನೇ ಪಂದ್ಯ ಸೋಮವಾರ ನಡೆಯಲಿದೆ.

ರಾಯಲ್ಸ್ ಚ್ಯಾಲೆಂಜರ‍್ಸ್’ಗೆ ವಿರಾಟ್ ಕೊಹ್ಲಿ ಹಾಗೂ ಸನ್‌ರೈಸರ‍್ಸ್’ಗೆ ಸ್ಪೋಟಕ ಆಟಗಾರ ಡೇವಿಡ್ ವಾರ್ನರ‍್ ಸಾರಥ್ಯವಿದೆ.

ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಮಿ. ೩೬೦ ಎಬಿಡಿ ವಿಲಿಯರ‍್ಸ್ ಅವರ ಆಟವನ್ನು ಮತ್ತೊಮ್ಮೆ ಆಸ್ವಾದಿಸುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಗಲಿದೆ. ಈ ಬಾರಿ ಕರ್ನಾಟಕದ ದೇವಧರ್‌ ಪಡಿಕ್ಕಲ್‌ ಅವರಿಗೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದೇ ಅಥವಾ ಅನುಭವಿ ಪಾರ್ಥಿವ್ ಪಟೇಲ್ ಆಯ್ಕೆಯಾಗುವರೇ ಎಂಬುದನ್ನು ಕಾದು ನೋಡಬೇಕಿದೆ. ಸ್ಪಿನ್ ದಾಳಿಗೆ ಯಜುವೇಂದ್ರ ಚಹಲ್ ಮುಂದಾಳತ್ವವಿದ್ದರೆ, ವೇಗದ ವಿಭಾಗವನ್ನು ಡೇಲ್ ಸ್ಟೈನ್ ಮತ್ತು ಕ್ರಿಸ್ ಮೋರಿಸ್ ನಿಭಾಯಿಸುವರು. ಇವರಿಗೆ ಸಾಥ್ ನೀಡಲು ನವದೀಪ್ ಸೈನಿ ಇದ್ದಾರೆ.

ಸನ್‌ ರೈಸರ‍್ಸ್ ತಂಡದಲ್ಲಿ ಆರಂಭಿಕರಾಗಿ ನಾಯಕ ಡೇವಿಡ್ ವಾರ್ನರ್‌ ರನ್‌ ಹೊಳೆ ಹರಿಸಲು ನಿಸ್ಸೀಮರು. ವಿಕೆಟ್ ಕೀಪರ್‌ ಜಾನಿ ಬೇರ‍್ ಸ್ಟೋ, ಕನ್ನಡಿಗ ಮನೀಶ್‌ ಪಾಂಡೆ, ಆಲ್ರೌಂಡರ್‌ ಆಗಿ ವಿಜಯ್ ಶಂಕರ್‌ ಸಮರ್ಥ ಸಾಥ್‌ ಸಿಕ್ಕರೆ, ವಿರಾಟ್‌ ಪಡೆಗೆ ಸವಾಲಾಗಬಲ್ಲರು. ಬೌಲಿಂಗ್ ಪಡೆಯಲ್ಲಿ ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹಮದ್‌, ಸಂದೀಪ್ ಶರ್ಮಾ ಮತ್ತು ಸ್ಪಿನ್ ವಿಭಾಗದಲ್ಲಿ  ರಶೀದ್‌ ಖಾನ್‌ ಎದುರಾಳಿಯ ನಿದ್ದೆಗೆಡಿಸಬಲ್ಲರು.

ಸಂಭಾವ್ಯ ತಂಡ ಇಂತಿದೆ: 

ರಾಯಲ್ಸ್‌ ಚ್ಯಾಲೆಂಜರ‍್ಸ್‌ ಬೆಂಗಳೂರು: ಆರನ್‌ ಫಿಂಚ್‌, ದೇವದತ್‌ ಪಡಿಕ್ಕಲ್/ಪಾರ್ಥಿವ್ ಪಟೇಲ್‌, ವಿರಾ‌ಟ್‌ ಕೊಹ್ಲಿ (ಕ್ಯಾ), ಎಬಿಡಿ ವಿಲಿಯರ‍್ಸ್‌, ಗುರುಕೀರತ್ ಸಿಂಗ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಕ್ರಿಸ್‌ ಮೋರಿಸ್‌, ಡೇಲ್‌ ಸ್ಟೈನ್‌, ನವದೀಪ್‌ ಸೈನಿ, ಯಜುವೇಂದ್ರ ಚಹಲ್‌

ಸನ್‌ರೈಸರ‍್ಸ್‌ ಹೈದರಾಬಾದ್‌: ಡೇವಿಡ್‌ ವಾರ್ನರ್‌ (ಕ್ಯಾ), ಜಾನಿ ಬೇರ್‌ಸ್ಟೋ (ವಿ.ಕೀ), ಮನೀಶ್‌ ಪಾಂಡೆ, ವಿರಾಟ್‌ ಸಿಂಗ್‌, ವಿಜಯ್‌ ಶಂಖರ್‌, ಅಬ್ದುಲ್‌ ಸಮದ್‌, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹಮದ್‌, ಸಿದ್ದಾರ್ಥ್‌ ಕೌಲ್‌/ಸಂದೀಪ್‌ಶರ್ಮಾ.

Leave a Reply

Your email address will not be published. Required fields are marked *

error: Content is protected !!