ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನಾನು ಯಾವಾಗಲೂ ಥಲಾ ಎಂಎಸ್‌ ಧೋನಿ ಅಭಿಮಾನಿʼ: ಟೀಕಾಕಾರರಿಗೆ ಅಂಬಾಟಿ ರಾಯುಡು ತಿರುಗೇಟು!

Ambati Rayudu Slams Trolls: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸತತ ವೈಫಲ್ಯ ಅನುಭವಿಸುತ್ತಿರುವ ಕಾರಣ ಮಾಜಿ ನಾಯಕ ಎಂಎಸ್‌ ಧೋನಿಯನ್ನು ಸಾಕಷ್ಟು ಟೀಕೆ ಮಾಡಲಾಗುತ್ತಿದೆ. ಆದರೆ, ಸಿಎಸ್‌ಕೆ ಮಾಜಿ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ʻನಾನು ಯಾವಾಗಲೂ ಎಂಎಸ್‌ ಧೋನಿ ಅಭಿಮಾನಿʼ: ಅಂಬಾಟಿ ರಾಯುಡು!

ಎಂಎಸ್‌ ಧೋನಿ-ಅಂಬಾಟಿ ರಾಯುಡು

Profile Ramesh Kote Apr 10, 2025 8:11 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2205) ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಪರ ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಮೂಲಕ ಎಂಎಸ್‌ ಧೋನಿ (MS Dhoni) ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಆದರೆ, ಎಂಎಸ್‌ ಧೋನಿಯನ್ನು ಟೀಕೆ ಮಾಡಿದವರಿಗೆ ತಿರುಗೇಟು ನೀಡಿದ ಅಂಬಾಟಿ ರಾಯುಡು, ನಾನು ಎಂದಿಗೂ ʻಥಲಾ ಅಭಿಮಾನಿʼ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದಾರೆ.

ಚಂಡೀಗಢದ ಮುಲ್ಲಾನ್‌ಪುರದಲ್ಲಿ ನಡೆದಿದ್ದ ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ 220 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಚೆನೈ ಸೂಪರ್‌ ಕಿಂಗ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 5 ವಿಕೆಟ್‌ ನಷ್ಟಕ್ಕೆ 201 ರನ್‌ಗಳಿಗೆ ಸೀಮಿತವಾಗಿತ್ತು. ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಎಂಎಸ್‌ ಧೋನಿ 12 ಎಸೆತಗಳಲ್ಲಿ 27 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೂ ಅವರು ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈ ಹಿಂದಿನ ಪಂದ್ಯಗಳಲ್ಲಿ ಎಂಎಸ್‌ ಧೋನಿ ಕೆಳ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡುವ ಮೂಲಕ ಅಭಿಮಾನಿಗಳಿಂದ ಟೀಕೆಗಳಿಗೆ ಗುರಿಯಾಗಿದ್ದರು.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವಕ್ಕೆ ಮರಳಿದ ಎಂಎಸ್‌ ಧೋನಿ! ಋತುರಾಜ್‌ ಗಾಯಕ್ವಾಡ್‌ ಔಟ್‌

"ನಾನು ಥಲಾ ಅಭಿಮಾನಿ. ನಾನು ಥಲಾ ಅಭಿಮಾನಿ ಹಾಗೂ ಎಂದಿಗೂ ಥಲಾ ಅಭಿಮಾನಿಯೇ ಉಳಿಯುತ್ತೇನೆ," ಎಂದು ಅಂಬಾಟಿ ರಾಯುಡು ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳಿದ್ದರು.

"ಇದರ ಬಗ್ಗೆ ಬೇರೆಯವರು ಏನು ಯೋಚಿಸುತ್ತಾರೆ ಅಥವಾ ಏನು ಮಾಡುತ್ತಾರೆಂಬುದು ವಿಷಯವೇ ಅಲ್ಲ. ನಾನು ಒಂದೇ ಒಂದು ಅಂಶದಲ್ಲಿಯೂ ವ್ಯತ್ಯಾಸವನ್ನು ಮಾಡುವುದಿಲ್ಲ. ಪಿಆರ್‌ ಪ್ರಮೋಷನ್‌ಗೆ ಹಣ ವೆಚ್ಚ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ಅನೇಕ ಹಿಂದುಳಿದಿರುವ ಜನರು ಇದರ ಪ್ರಯೋಜನವನ್ನು ಪಡೆಯಬಹುದು," ಎಂದು ತಿಳಿಸಿದ್ದರು.



ಪಂಜಾಬ್‌ ಕಿಂಗ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ಪಂದ್ಯಕ್ಕೆ ಕಾಮೆಂಟರಿ ವೇಳೆ ಮಾತನಾಡಿದ್ದ ಅಂಬಾಟಿ ರಾಯುಡು, "ಎಂಎಸ್‌ ಧೋನಿ ಕತ್ತಿ ಹಿಡಿದಂತೆ ಕಾಣುತ್ತಿದೆ; ಕತ್ತಿ ಖಂಡಿತವಾಗಿಯೂ ಕೆಲಸ ಮಾಡುತ್ತದೆ. ಇಂದು ಧೋನಿಯ ಕತ್ತಿ ಕೆಲಸ ಮಾಡುತ್ತದೆ," ಎಂದು ಹೇಳಿದ್ದರು.

ಎಂಎಸ್‌ ಧೋನಿ ಕ್ರಿಕೆಟ್‌ ಆಡುವುದಕ್ಕೆ ಬಂದಿದ್ದಾರಾ? ಅಥವಾ ವಿನಃ ಯುದ್ದ ಮಾಡಲು ಬಂದಿದ್ದಾರಾ? ಎಂದು ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಎಂಎಸ್‌ ಧೋನಿ ಬ್ಯಾಟಿಂಗ್‌ಗೆ ಇಳಿಯುವ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ನವಜೋತ್‌ ಸಿಂಗ್‌ ಸಿಧು, ಅಂಬಾಡಿ ರಾಯುಡು ಅವರನ್ನು ಪ್ರಶ್ನೆ ಮಾಡಿದ್ದರು.



ಚೆನ್ನೈ ಸೂಪರ್‌ ಕಿಂಗ್ಸ್‌ಗೆ 25 ಎಸೆತಗಳಲ್ಲಿ 69 ರನ್‌ಗಳ ಅಗತ್ಯವಿದ್ದ ವೇಳೆ ಕ್ರೀಸ್‌ಗೆ ಬಂದಿದ್ದ ಎಂಎಸ್‌ ಧೋನಿ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಅವರು ಆಡಿದ್ದ 12 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 27 ರನ್‌ಗಳನ್ನು ಸಿಡಿಸಿದ್ದರು. ಎಂಎಸ್‌ ಧೋನಿಯ ಸ್ಪೋಟಕ ಬ್ಯಾಟಿಂಗ್‌ ಹೊರತಾಗಿಯೂ ಸಿಎಸ್‌ಕೆ 18 ರನ್‌ಗಳಿಂದ ಸೋಲು ಅನುಭವಿಸಿತ್ತು.



ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಎಂಎಸ್‌ ಧೋನಿ

ಋತುರಾಜ್‌ ಗಾಯಕ್ವಡ್‌ ಮೊಣಕೈ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ 2025ರ ಐಪಿಎಲ್‌ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಸ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವಕ್ಕೆ ಮರಳಿದ್ದಾರೆ. 2023ರ ಐಪಿಎಲ್‌ ಫೈನಲ್‌ ಪಂದ್ಯದ ಬಳಿಕ ಎಂಎಸ್‌ ಧೋನಿ ಇದೇ ಮೊದಲ ಬಾರಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಏಪ್ರಿಲ್‌ 11 ರಂದು ತವರು ಅಂಗಣದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.