ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion: ಫ್ಯಾಷನ್‌ ಪ್ರಿಯ ಮಾನಿನಿಯರನ್ನು ಸೆಳೆದ ವಿಜಯಲಕ್ಷ್ಮಿ ದರ್ಶನ್‌ರವರ ದಾವಣಿ-ಲಂಗ ಶೈಲಿಯ ಲೆಹೆಂಗಾ

Star Fashion: ಡಿಬಾಸ್‌ ಪತ್ನಿ ವಿಜಯಲಕ್ಷ್ಮಿ ಟ್ರೆಡಿಷನಲ್‌ ಲುಕ್‌ ಇರುವಂತಹ ಅತ್ಯಾಕರ್ಷಕ ವಿನ್ಯಾಸದಲ್ಲಿ ಮೂಡಿಬಂದಿರುವ ದಾವಣಿ-ಲಂಗ ಶೈಲಿಯ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಮ್ಮರ್‌ ಸೀಸನ್‌ಗೆ ಸಖತ್‌ ಆಗಿ ಕಾಣಿಸುತ್ತಿರುವ ಅವರ ಈ ಸ್ಟೈಲಿಂಗ್‌ ಹೇಗಿದೆ? ಎಂಬುದರ ಕುರಿತಂತೆ ಫ್ಯಾಷನ್‌ ವಿಮರ್ಶಕರು ವಿಮರ್ಶಿಸಿದ್ದಾರೆ.

ಮಾನಿನಿಯರ ಮನ ಗೆದ್ದ ವಿಜಯಲಕ್ಷ್ಮಿ ದರ್ಶನ್‌ರವರ ದಾವಣಿ-ಲಂಗ ಶೈಲಿಯ ಲೆಹೆಂಗಾ

ಚಿತ್ರಕೃಪೆ: ವಿಜಯಲಕ್ಷ್ಮಿ ದರ್ಶನ್‌ ಇನ್ಸ್ಟಾಗ್ರಾಮ್‌ ಖಾತೆ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿಯವರ (Star Fashion) ದಾವಣಿ-ಲಂಗ/ಹಾಫ್‌ ಸೀರೆ ಶೈಲಿಯ ಲೆಹೆಂಗಾ ಫ್ಯಾಷನ್‌ ಪ್ರಿಯ ಮಾನಿನಿಯರನ್ನು ಆಕರ್ಷಿಸಿದೆ. ಹೌದು, ಸದಾ ಒಂದಲ್ಲ ಒಂದು ಔಟ್‌ಫಿಟ್‌ನಲ್ಲಿ ಸಖತ್‌ ಫ್ಯಾಷೆನಬಲ್‌ ಆಗಿ ಕಾಣಿಸುವ ವಿಜಯಲಕ್ಷ್ಮಿಯವರು ಈ ಬಾರಿ ಟ್ರೆಡಿಷನಲ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿರುವುದು ಮಾನಿನಿಯರ ಮನ ಗೆದ್ದಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಉಡುಗೆಯಲ್ಲಿ ಮನಮೋಹಕವಾಗಿ ಕಾಣಿಸುತ್ತಿದ್ದಾರೆ. ಅವರ ಈ ಲುಕ್‌ ಎಲ್ಲಾ ವರ್ಗದ ಮಹಿಳೆಯರನ್ನು ಸೆಳೆದಿದೆ. ಅವರು ಧರಿಸಿರುವ ದಾವಣಿ-ಲಂಗ ಹಾಗೂ ಡಿಸೈನರ್‌ ಕಾಂಟ್ರಾಸ್ಟ್‌ ಶೇಡ್‌ನ ದುಪಟ್ಟಾ ಟು ಇನ್‌ ವನ್‌ ಡಿಸೈನರ್‌ವೇರ್‌ನಂತಿದೆ. ಒಮ್ಮೆ ನಾರ್ತ್‌ ಇಂಡಿಯನ್‌ ಶೈಲಿಯ ಲೆಹೆಂಗಾದಂತೆಯೂ ಕಂಡರೆ, ಮತ್ತೊಮ್ಮೆ ದಾವಣಿ-ಲಂಗ/ಹಾಫ್‌ ಸೀರೆಯಂತೆಯೂ ಕಾಣಿಸುತ್ತಿದೆ. ಗೋಲ್ಡನ್‌ ವರ್ಕ್‌ ಇರುವ ಮೆಂತೆ ಕಲರ್‌ನ ಈ ಡಿಸೈನರ್‌ವೇರ್‌ನ ಲಂಗ ಕಂಪ್ಲೀಟ್‌ ನೆರಿಗೆಗಳನ್ನು ಹೊಂದಿದೆ. ಇದರೊಂದಿಗೆ ಧರಿಸಿರುವ ಬ್ಲೌಸ್‌ ಸ್ಲೀವ್‌ ಶೀರ್‌ ಡಿಸೈನ್‌ನಲ್ಲಿದ್ದು ಕಂಪ್ಲೀಟ್‌ ಗೋಲ್ಡನ್‌ ಲುಕ್‌ ನೀಡುವ ಹ್ಯಾಂಡ್‌ವರ್ಕ್‌ನಿಂದ ಕೂಡಿದೆ. ಪಿಂಕ್‌ ದುಪಟ್ಟಾ ಇಡೀ ಲುಕ್‌ಗೆ ಸಾಥ್‌ ನೀಡಿದೆ. ಹಾಗಾಗಿ ಒಟ್ಟಾರೆ, ಇದೊಂದು ಸಮ್ಮಿಲನಗೊಂಡ ಡಿಸೈನರ್‌ವೇರ್‌ ಎನ್ನಬಹುದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ. ‌

21

ರಾಯಲ್‌ ಲುಕ್‌ ನೀಡುವ ಗೋಲ್ಡನ್‌ ಹ್ಯಾಂಡ್‌ವರ್ಕ್‌

ಇಡೀ ಔಟ್‌ಫಿಟ್‌ಗೆ ಸಾಥ್‌ ನೀಡುವ ಡಿಸೈನರ್‌ ಬ್ಲೌಸ್‌, ಕಂಪ್ಲೀಟ್‌ ಹ್ಯಾಂಡ್‌ಮೇಡ್‌ ವರ್ಕ್‌ನಿಂದ ಕೂಡಿದೆ. ಜಯನಗರದ ಸುಮಯ ಡಿಸೈನ್‌ ಸ್ಟುಡಿಯೋ ಈ ಡಿಸೈನರ್‌ವೇರನ್ನು ಸಿದ್ಧಪಡಿಸಿದೆ.

22 (1)

ಸ್ಟೈಲಿಂಗ್‌ಗೆ ಫುಲ್‌ ಮಾರ್ಕ್‌

ಕೀರ್ತಿರಾಮ್‌ ಅವರ ಮೇಕಪ್‌ ಹಾಗೂ ಭವ್ಯಾ ಆಚಾರ್‌ರ ಹೇರ್‌ಸ್ಟೈಲ್‌ ವಿಜಯಲಕ್ಷ್ಮಿಯವರ ಸ್ಟೈಲಿಂಗ್‌ಗೆ ಸಾಥ್‌ ನೀಡಿದೆ.

ಈ ಸುದ್ದಿಯನ್ನೂ ಓದಿ | Holiday Fashion: ಸಮ್ಮರ್‌ ಹಾಲಿಡೇ ಫ್ಯಾಷನ್‌ಗೆ ಇಲ್ಲಿವೆ 5 ಕೂಲ್‌ ಐಡಿಯಾ

ಫ್ಯಾಷನ್‌ ವಿಮರ್ಶಕರ ಅಭಿಪ್ರಾಯ

ಸಮ್ಮರ್‌ನಲ್ಲಿ ಈ ಕಲರ್‌ನ ಟ್ರೆಡಿಷನಲ್‌ ಔಟ್‌ಫಿಟ್‌ಗಳು ಹೆಚ್ಚು ಮನಮೋಹಕವಾಗಿ ಕಾಣಿಸುತ್ತವೆ. ಇನ್ನು, ಈ ಔಟ್‌ಫಿಟ್‌ಗೆ ಮ್ಯಾಚ್‌ ಮಾಡಿರುವ ಗ್ರೀನ್‌ ಬೀಡ್ಸ್‌ನ ಪದಕದ ಲೇಯರ್‌ ಮಾಲೆ ಹಾಗೂ ಬಿಗ್‌ ಮ್ಯಾಚಿಂಗ್‌ ಜುಮ್ಕಾದಂತಹ ಆಭರಣಗಳು, ವಿಜಯಲಕ್ಷ್ಮಿ ಅವರನ್ನು ಮತ್ತಷ್ಟು ಸುಂದರವಾಗಿಸಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)