ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಧುನಿಕ ಸಾರಿಗೆ ವ್ಯವಸ್ಥೆಯಲ್ಲಿ ಸ್ಮಾರ್ಟ್ ತಂತ್ರಜ್ಞಾನದ ಪಾತ್ರ

ರ್ಕಾರವು ರಸ್ತೆ ನಿರ್ಮಾಣಕ್ಕೆ ಮಾಡಿರುವ ದೊಡ್ಡ ಹೂಡಿಕೆಯಿಂದ ದೇಶಾದ್ಯಂತ ಬಸ್ ಸಂಚಾರ ವ್ಯವಸ್ಥೆಯು ಕ್ರಾಂತಿಕಾರಕ ಬದಲಾವಣೆ ಕಂಡಿದೆ. ಹೆದ್ದಾರಿಗಳು ವಿಶಾಲವಾಗಿದ್ದು, ರಸ್ತೆಗಳು ಅಭಿವೃದ್ಧಿ ಹೊಂದಿದ್ದು, ಬಸ್‌ಗಳು ತ್ವರಿತವಾಗಿ ಓಡಾಡುವುದು ಸಾಧ್ಯವಾಗಿದೆ. ಅಲ್ಲದೇ ಹೆದ್ದಾರಿ ಜಾಲದ ವಿಸ್ತರಣೆ ಯಿಂದ ಬಸ್‌ಗಳು ಸಾಗಲು ಅಸಾಧ್ಯವೆಂದು ಭಾವಿಸಲಾಗಿದ್ದದ ಪ್ರದೇಶ ಗಳಲ್ಲೂ ಸಹ ಈಗ ಬಸ್ ಗಳು ಕಾರ್ಯನಿರ್ವಹಿಸುತ್ತವೆ

ಸುರಕ್ಷತೆಯ ಮೇಲೆ ಬಸ್ ಉತ್ಪಾದನೆಯ ಗುಣಮಟ್ಟದ ನೇರ ಪರಿಣಾಮ

Profile Ashok Nayak Apr 10, 2025 11:24 AM

ಆನಂದ್‌ ಎಸ್‌., ಟಾಟಾ ಮೋಟಾರ್ಸ್‌ನ ಸಿವಿ ಪ್ಯಾಸೆಂಜರ್ಸ್‌ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್‌ ಹೆಡ್‌

ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸು ತ್ತದೆ. ನಗರೀಕರಣ ಹೆಚ್ಚಾದಂತೆ ಜನರು ಈ ಹಿಂದಿಗಿಂತ ಬಸ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಡಬ್ಲ್ಯೂ ಆರ್ ಐ ಇಂಡಿಯಾ 2021ರಲ್ಲಿ ಪ್ರಕಟಿಸಿದ "ನ್ಯಾಷನಲ್ ಇನ್ವೆಸ್ಟ್‌ ಮೆಂಟ್ ಪ್ರೋಗ್ರಾಂ ಫಾರ್ ಬಸ್- ಬೇಸ್ಡ್ ಪಬ್ಲಿಕ್ ಟ್ರಾನ್ಸ್‌ ಪೋರ್ಟ್ ಸಿಸ್ಟಮ್ಸ್ ಇನ್ ಇಂಡಿಯಾ" ಎಂಬ ವರದಿಯ ಪ್ರಕಾರ ಭಾರತದಲ್ಲಿ ಪ್ರತಿದಿನ 70 ಲಕ್ಷಕ್ಕೂ ಹೆಚ್ಚು ಜನರು ಬಸ್‌ ಗಳಲ್ಲಿ ಪ್ರಯಾಣಿಸುತ್ತಾರೆ.

ಅಲ್ಲದೇ ಸರ್ಕಾರವು ರಸ್ತೆ ನಿರ್ಮಾಣಕ್ಕೆ ಮಾಡಿರುವ ದೊಡ್ಡ ಹೂಡಿಕೆಯಿಂದ ದೇಶಾದ್ಯಂತ ಬಸ್ ಸಂಚಾರ ವ್ಯವಸ್ಥೆಯು ಕ್ರಾಂತಿಕಾರಕ ಬದಲಾವಣೆ ಕಂಡಿದೆ. ಹೆದ್ದಾರಿಗಳು ವಿಶಾಲವಾಗಿದ್ದು, ರಸ್ತೆಗಳು ಅಭಿವೃದ್ಧಿ ಹೊಂದಿದ್ದು, ಬಸ್‌ಗಳು ತ್ವರಿತವಾಗಿ ಓಡಾಡುವುದು ಸಾಧ್ಯವಾಗಿದೆ. ಅಲ್ಲದೇ ಹೆದ್ದಾರಿ ಜಾಲದ ವಿಸ್ತರಣೆಯಿಂದ ಬಸ್‌ಗಳು ಸಾಗಲು ಅಸಾಧ್ಯವೆಂದು ಭಾವಿಸಲಾಗಿದ್ದದ ಪ್ರದೇಶ ಗಳಲ್ಲೂ ಸಹ ಈಗ ಬಸ್ ಗಳು ಕಾರ್ಯನಿರ್ವಹಿಸುತ್ತವೆ. ಇದರಿಂದ ನಗರದಲ್ಲಿ ಅಥವಾ ಎರಡು ನಗರಗಳ ನಡುವಿನ ಪ್ರಯಾಣ ಸಂದರ್ಭದಲ್ಲಿ ಸುರಕ್ಷತೆ ಪ್ರಮುಖ ಆದ್ಯತೆಯಾಗಿ ಬದಲಾಗಿದೆ.

ಹಳೆಯ ಸಾಂಪ್ರದಾಯಿಕ ಬಸ್ ಗಳು ಈಗಿನ ಸಂದರ್ಭಕ್ಕೆ ಅಷ್ಟಾಗಿ ಸರಿ ಹೊಂದುವುದಿಲ್ಲ. ಆಧು ನಿಕ ಸಾರಿಗೆ ವ್ಯವಸ್ಥೆಯ ಬೇಡಿಕೆಗಳನ್ನು ಪೂರೈಸುವ ಮತ್ತು ಪ್ರತೀ ಪ್ರಯಾಣಿಕನಿಗೆ ಸುರಕ್ಷತೆಯನ್ನು ಒದಗಿಸುವ ಉತ್ಪನ್ನಗಳು ನಮಗೆ ಇಂದು ಬೇಕಾಗಿವೆ. ವಿಶೇಷವಾಗಿ ಇಂದು ಸ್ಮಾರ್ಟ್ ತಂತ್ರಜ್ಞಾನ ಬಂದಿದೆ. ಅದು ಚಾಲಕರು ಮತ್ತು ಪ್ರಯಾಣಿಕರಿಗೆ ಬಸ್‌ ಗಳಲ್ಲಿ ಉತ್ತಮ ಸುರಕ್ಷತೆಯನ್ನು ಒದಗಿಸುತ್ತಿದೆ.

ಇದನ್ನೂ ಓದಿ: E-Commerce: ಇ-ಕಾಮರ್ಸ್‌ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ

ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಲಭ್ಯತೆ ಒದಗಿಸುವುದು

ಆಧುನಿಕ ಬಸ್‌ ಗಳು ಭಾರತೀಯ ಪ್ರಯಾಣಿಕರ ವಿವಿಧ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿ ವಿನ್ಯಾಸಗೊಂಡಿವೆ. ಉದಾಹರಣೆಗೆ ಕಡಿಮೆ ಎತ್ತರದ ಪ್ರವೇಶ ದ್ವಾರವು ವಯಸ್ಸಾದವರಿಗೆ ಮತ್ತು ಅಂಗವಿಕಲರಿಗೆ ಸುಲಭವಾಗಿ ಒಳಗೆ ಹೊರಗೆ ಹೋಗಲು ಸಹಾಯ ಮಾಡುತ್ತದೆ. ಬೆಂಕಿ ಎಚ್ಚರಿಕೆ, ಜಿಪಿಎಸ್ ಟ್ರ್ಯಾಕಿಂಗ್, ಸಿಸಿ ಟಿವಿ ಕಣ್ಗಾವಲು ಮತ್ತು ಎಮರ್ಜೆನ್ಸಿ ಬಟನ್‌ ಗಳು ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ಒದಗಿಸುತ್ತವೆ. ಎಲೆಕ್ಟ್ರಿಕ್ ಬಸ್‌ ಗಳಲ್ಲಿ ಇರುವ ಸ್ಮಾರ್ಟ್ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯು ಕಾರ್ಯಾಚರಣೆಯ ತಾಪಮಾನವನ್ನು ನಿಯಂತ್ರಿಸುತ್ತದೆ ಮತ್ತು ಪ್ರಯಾಣಿಕರಿಗೆ ಅನುಕೂಲತೆ ಒದಗಿಸುತ್ತದೆ.

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇ ಎಸ್ ಸಿ) ವ್ಯವಸ್ಥೆಯು ಅಪಘಾತಗಳನ್ನು ತಡೆಗಟ್ಟಲು ನೆರವಾಗುತ್ತದೆ. ಇಬಿಎಸ್ (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇ ಎಸ್ ಪಿ) ಒಳಗೊಂಡ ಅತ್ಯಾಧುನಿಕ ಬ್ರೇಕಿಂಗ್ ವ್ಯವಸ್ಥೆಯು ತುರ್ತು ಪರಿಸ್ಥಿತಿಗಳಲ್ಲಿ ಚಾಲಕರಿಗೆ ನಿಯಂತ್ರಣ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇವೆಲ್ಲವನ್ನೂ ಸೂಕ್ತ ರೀತಿ ಯಲ್ಲಿ ನೋಡಿಕೊಳ್ಳಲು ಡಿಪೋಗಳು ವಿಶೇಷ ಸೇವಾ ಮತ್ತು ನಿರ್ವಹಣಾ ಕೇಂದ್ರಗಳಾಗಿ ಬದಲಾಗುತ್ತಿವೆ.

10

ಸುರಕ್ಷಿತ ಬಸ್‌ಗಳ ನಿರ್ಮಾಣ – ಉತ್ಪಾದನೆಯ ಪಾತ್ರ

ಬಸ್ ಉತ್ಪಾದನೆಯ ಗುಣಮಟ್ಟವು ಸುರಕ್ಷತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆಧುನಿಕ ಉತ್ಪಾದನಾ ಘಟಕಗಳು ಈಗ ಪ್ರತೀ ವೆಲ್ಡ್ ಮತ್ತು ಜಾಯಿಂಟ್ ಗಳನ್ನು ಪರಿಶೀಲಿಸಲು ನಿಖರತೆ ಆಧರಿತ ವ್ಯವಸ್ಥೆಗಳನ್ನು ಹೊಂದಿವೆ. ಅತ್ಯಾಧುನಿಕ ಮೇಲ್ವಿಚಾರಣಾ ಯಂತ್ರಗಳು ಸಂಪೂರ್ಣ ಒತ್ತಡ ಪರೀಕ್ಷೆಯನ್ನು ನಡೆಸುತ್ತವೆ. ಭಾರತೀಯ ರಸ್ತೆ ಪರಿಸ್ಥಿತಿಗಳ ಸವಾಲುಗಳನ್ನು ಈ ಬಸ್‌ ಗಳು ತಡೆದುಕೊಳ್ಳಬಲ್ಲವು ಎಂಬುದನ್ನು ಖಚಿತಪಡಿಸುತ್ತವೆ. ಸಂಕೀರ್ಣ ಜೋಡಣಾ ವಿಧಾನಗಳಿಂದ ಉತ್ತಮ, ವಿಶ್ವಾಸಾರ್ಹ ವಾಹನಗಳನ್ನು ಸೃಷ್ಟಿಸಲಾಗುತ್ತವೆ. ಈ ಮೂಲಕ ದೈನಂದಿನ ಸಂಕೀರ್ಣ ಸವಾಲುಗಳನ್ನು ತಡೆದುಕೊಳ್ಳಬಹುದಾದ ವಾಹನಗಳನ್ನು ತಯಾರಿಸಲಾಗುತ್ತದೆ.

ಆಧುನಿಕ ಎಂಜಿನಿಯರಿಂಗ್‌ ಪದ್ಧತಿಗಳಿಂದ ನಿರ್ಮಾಣ ಪ್ರಕ್ರಿಯೆಯಲ್ಲಿ ಬಹಳ ಸುಧಾರಣೆ ಉಂಟಾಗಿದೆ. ಹೆಚ್ಚು ಶಕ್ತಿಯುತ ಸಾಮಾಗ್ರಿಗಳು ಆಕಸ್ಮಿಕ ಘರ್ಷಣೆ ಉಂಟಾದ ಸಮಯದಲ್ಲಿ ಉತ್ತಮ ರಕ್ಷಣೆ ನೀಡುತ್ತವೆ. ಅಲ್ಲದೇ ಈಗ ಒಳಾಂಗಣವನ್ನು ಸುರಕ್ಷತೆ ಒದಗಿಸಲು ಮತ್ತು ಹೆಚ್ಚು ಸೌಲಭ್ಯ ಒದಗಿಸುವಂತೆ ವಿನ್ಯಾಸಗೊಳಿಸಲಾಗುತ್ತದೆ. ಸೀಟ್‌ ಬೆಲ್ಟ್‌ ಗಳು ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತದೆ. ಜೊತೆಗೆ ಹವಾಮಾನ ನಿಯಂತ್ರಣ ವ್ಯವಸ್ಥೆಯು ಬೇಸಿಗೆಯಲ್ಲಿ ಚಾಲಕರು ಮತ್ತು ಪ್ರಯಾಣಿಕರ ಆಯಾಸವನ್ನು ಕಡಿಮೆ ಮಾಡುತ್ತದೆ. ಇಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯ ಗಳಿಂದ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ನೀಡಲಾಗುತ್ತದೆ.

ರಚನೆಯ ಗುಣಮಟ್ಟ ಹೆಚ್ಚಿರುವುದರಿಂದ ವಾಹನದ ಜೀವಿತಾವಧಿಯಲ್ಲಿ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ. ಇದಲ್ಲದೆ, ಸುರಕ್ಷಿತ ಬಸ್‌ ಗಳಿಗೆ ಆದ್ಯತೆ ಹೆಚ್ಚುತ್ತಿರುವುದರಿಂದಯು ಪ್ರಯಾ ಣಿಕರ ಸಂಖ್ಯೆಯೂ ಹೆಚ್ಚುತ್ತಿದೆ ಮತ್ತು ಆಪರೇಟರ್‌ ಗಳ ಆರ್ಥಿಕ ಸಾಮರ್ಥ್ಯವನ್ನು ಉತ್ತಮ ಗೊಳಿಸುತ್ತದೆ.

ಭವಿಷ್ಯಕ್ಕಾಗಿ ಸಾಮೂಹಿಕ ಜವಬ್ದಾರಿ

ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸಂಯೋಜನೆಯಿಂದ ಸುರಕ್ಷತೆ ಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಎಐ ಆಧರಿತ ಸಿಮ್ಯುಲೇಶನ್‌ ಗಳು, ಪ್ರಿಡಿಕ್ಟಿವ್ ಮೇಂಟೆ ನೆನ್ಸ್ ಮತ್ತು ಅಡ್ವಾನ್ಸ್‌ ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್) ಮುಂತಾದ ಫೀಚರ್ ಗಳು ಪ್ರಯಾಣಿಕರಿಗೆ ಅತ್ಯುನ್ನತ ಮಟ್ಟದ ಸುರಕ್ಷತೆಯನ್ನು ಒದಗಿಸುತ್ತವೆ. ಟಾಟಾ ಮೋಟಾರ್ಸ್‌ ನ ಫ್ಲೀಟ್ ಎಡ್ಜ್‌ ನಂತಹ ಸಂಪರ್ಕಿತ ವಾಹನ ವೇದಿಕೆಗಳು ನಿಗಾವಹಿಸುವಿಕೆ ಮತ್ತು ಡೇಟಾ ಆಧರಿತ ಒಳನೋಟಗಳ ಮೂಲಕ ವಾಹನಗಳ ನಿರ್ವಹಣಾ ವಿಧಾನವನ್ನೇ ಬದಲಿಸುತ್ತಿವೆ. ಜೊತೆಗೆ ಎಲೆಕ್ಟ್ರಿಕ್ ಬಸ್‌ ಗಳು ಸುರಕ್ಷತೆ ಮತ್ತು ಪರಿಸರ ಸುಸ್ಥಿರತೆ ಎರಡರಲ್ಲೂ ಹೊಸ ಮಾನದಂಡ ಗಳನ್ನು ಹಾಕಿ ಕೊಡುತ್ತಿದ್ದು, ನಗರ ಸಾರಿಗೆಯ ಭವಿಷ್ಯವನ್ನು ರೂಪಿಸುತ್ತಿವೆ.

ಕೇವಲ ತಂತ್ರಜ್ಞಾನ ಮಾತ್ರದಿಂದ ಸುರಕ್ಷತೆ ಪಡೆಯಲು ಸಾಧ್ಯವಿಲ್ಲ. ಸಮಗ್ರ ವಿಧಾನದಿಂದ ಮಾತ್ರ ಸೂಕ್ತ ಸುರಕ್ಷತೆ ಹೊಂದಬಹುದಾಗಿದೆ. ಪ್ರಯಾಣಿಕರ ಸೌಲಭ್ಯದ ವೈಶಿಷ್ಟ್ಯಗಳು ಪ್ರಯಾಣದ ಸಮಯದಲ್ಲಿ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುವ ಮೂಲಕ ಸುರಕ್ಷತೆಗೆ ಗಣನೀಯ ಕೊಡುಗೆ ನೀಡುತ್ತವೆ. ನಿಯಮಿತವಾಗಿ ವಾಹನ ನಿರ್ವಹಣೆ ಮಾಡುವುದರಿಂದ ಮತ್ತು ಸಮಗ್ರ ಚಾಲಕ ತರಬೇತಿ ಕಾರ್ಯಕ್ರಮಗಳಿಂದ ಕಾರ್ಯಾಚರಣೆಯನ್ನು ಉತ್ತಮಗೊಳಿಸಬಹುದಾಗಿದೆ. ಟಾಟಾ ಮೋಟಾರ್ಸ್ ತನ್ನ ಮ್ಯಾಗ್ನಾ, ಅಲ್ಟ್ರಾ, ಸಿಟಿರೈಡ್ ಪ್ರೈಮ್ ಮತ್ತು ಸ್ಟಾರ್‌ ಬಸ್ ಶ್ರೇಣಿಯ ಬಸ್‌ ಗಳ ಮೂಲಕ ಈ ತತ್ವಗಳನ್ನು ಅನುಷ್ಠಾನಗೊಳಿಸಿದ್ದು, ಅಲ್ಲಿ ಸುರಕ್ಷತಾ ಫೀಚರ್ ಗಳು ಪ್ರಯಾಣಿಕರಿಗೆ ಉತ್ತಮ ಅನುಭವ ಒದಗಿಸುತ್ತವೆ.

ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಭವಿಷ್ಯವು ಸಹಯೋಗದ ವಿಧಾನದ ಮೇಲೆ ಅವಲಂಬಿತ ವಾಗಿದೆ. ಸ್ಮಾರ್ಟ್ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ, ರಸ್ತೆಗಳನ್ನು ಸುಧಾರಿಸುವ ಮೂಲಕ ಮತ್ತು ಉತ್ಪಾದನಾ ಮಾನದಂಡಗಳನ್ನು ಉನ್ನತೀಕರಿಸುವ ಮೂಲಕ ಭಾರತದಲ್ಲಿ ಹೆಚ್ಚು ವಿಶ್ವಾಸಾರ್ಹ ಮತ್ತು ಸಮರ್ಥ ಸಾರಿಗೆ ವ್ಯವಸ್ಥೆಯನ್ನು ಸೃಷ್ಟಿಸಬಹುದು. ಈ ಸಾಮೂಹಿಕ ಪ್ರಯತ್ನದಿಂದ ಲಕ್ಷಾಂತರ ಜನರಿಗೆ ಸುರಕ್ಷಿತ ಪ್ರಯಾಣ ವ್ಯವಸ್ಥೆಯನ್ನು ಒದಗಿಸಬಹುದಾಗಿದೆ. ಅಲ್ಲದೇ ಈ ಮೂಲಕ ದೇಶದ ಸುಸ್ಥಿರ ಸಾರಿಗೆ ಗುರಿ ಸಾಧನೆಗೆ ಕೊಡುಗೆ ನೀಡಬಹುದಾಗಿದೆ.

ಸ್ಮಾರ್ಟ್ ಅಸಿಸ್ಟೆನ್ಸ್ ಮೂಲಕ ಚಾಲಕರ ಸಬಲೀಕರಣ

ರಸ್ತೆ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ಬಸ್ ಚಾಲಕರು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅನಿರೀಕ್ಷಿತ ಟ್ರಾಫಿಕ್ ನಲ್ಲಿ ಸಿಲುಕಿಹಾಕಿಕೊಳ್ಳುತ್ತಾರೆ. ಪ್ರತೀದಿನ ಅಸಂಖ್ಯ ಪ್ರಯಾ ಣಿಕರಿಗೆ ಸುರಕ್ಷಿತ ಪ್ರಯಾಣ ವ್ಯವಸ್ಥೆ ಕಲ್ಪಿಸುತ್ತಾರೆ. ಆಯಾಸವಿಲ್ಲದೆ ಕೆಲಸ ಮಾಡುವ ಚಾಲಕ ಸುರಕ್ಷಿತ ಚಾಲಕನಾಗಿರುತ್ತಾನೆ ಮತ್ತು ಈ ನಿಟ್ಟಿನಲ್ಲಿ ಅವರಿಗೆ ನೆರವಾಗುವಂತೆ ಆಧುನಿಕ ಬಸ್‌ಗಳು ವಿನ್ಯಾಸಗೊಂಡಿವೆ.

ಇಂದಿನ ಬಸ್‌ ಗಳು ಅತ್ಯುತ್ತಮ ಗೋಚರತೆ, ಸರಳ ನಿಯಂತ್ರಣ ಕ್ರಮಗಳು ಮತ್ತು ಅತ್ಯುತ್ತಮ ಆಸನ ಹೊಂದಿರುವ ಎರ್ಗೊನಾಮಿಕ್ ಕಾಕ್‌ ಪಿಟ್‌ ಗಳನ್ನು ಹೊಂದಿವೆ. ಈ ಸುಧಾರಣೆಗಳಿಂದ ಚಾಲಕರ ಆಯಾಸವನ್ನು ಕಡಿಮೆ ಮಾಡಲಾಗುತ್ತದೆ. ದೀರ್ಘ ಪ್ರಯಾಣಗಳಲ್ಲಿ ಕಡಿಮೆ ಒತ್ತಡದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಚಾಲಕ ಮೇಲ್ವಿಚಾರಣಾ ವ್ಯವಸ್ಥೆಗಳಂತಹ ಅತ್ಯಾಧುನಿಕ ತಂತ್ರ ಜ್ಞಾನವು ಗಮನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಲೇನ್ ಡಿಪಾರ್ಚರ್ ವಾರ್ನಿಂಗ್ ಗಳು ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಫೀಚರ್ ಗಳು ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತವೆ. ಸುದೀರ್ಘ ಪ್ರಯಾಣ ಮಾರ್ಗಗಳಲ್ಲಿ ಈ ಫೀಚರ್ ಗಳು ಅತ್ಯಗತ್ಯವಾಗಿವೆ. ಯಾಕೆಂದರೆ ಅಲ್ಲಿ ಒಂದು ಕ್ಷಣದ ನಿರ್ಧಾರದಿಂದ ದೊಡ್ಡ ಅಪಘಾತವನ್ನು ತಡೆಯಬಹುದಾಗಿದೆ.

ಸುರಕ್ಷತೆ ವಿಚಾರದಲ್ಲಿ ತಂತ್ರಜ್ಞಾನವೊಂದೇ ಸಾಕಾಗುವುದಿಲ್ಲ. ಜೊತೆಗೆ ಚಾಲಕರಿಗೆ ನಿಯಮಿತ ತರಬೇತಿ ನೀಡಬೇಕಿರುತ್ತದೆ. ಈ ತರಬೇತಿ ಮೂಲಕ ಹೊಸ ವ್ಯವಸ್ಥೆಗಳ ಕುರಿತು ಮಾಹಿತಿ ನೀಡ ಬೇಕಿರುತ್ತದೆ. ಈ ಮೂಲಕ ಭಾರತದ ಜನದಟ್ಟಣೆಯ ರಸ್ತೆಗಳನ್ನು ವಿಶ್ವಾಸದಿಂದ ಸಾಗಲು ಅವರಿಗೆ ನೆರವಾಗಬಹುದಾಗಿದೆ. ಚಾಲಕರ ಯೋಗಕ್ಷೇಮ ಮತ್ತು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳಿಗೆ ಆದ್ಯತೆ ನೀಡುವ ಮೂಲಕ ಸುರಕ್ಷಿತ ಮತ್ತು ಹೆಚ್ಚು ಸಮರ್ಥ ಸಾರಿಗೆ ವ್ಯವಸ್ಥೆಯಲ್ಲಿ ರೂಪಿಸ ಲಾಗುತ್ತಿದೆ.