ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನಿಜವಾದ ಫ್ಯಾನ್ಸ್‌ ಸಿಎಸ್‌ಕೆ ಪರ ನಿಲ್ಲುತ್ತಾರೆʼ: ಟೀಕೆಗಳಿಗೆ ತಿರುಗೇಟು ನೀಡಿದ ಆರ್‌ ಅಶ್ವಿನ್‌!

R Ashwin on CSK criticism: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಐದು ನಾಲ್ಕು ಪಂದ್ಯಗಳನ್ನು ಸೋತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಕೆಲ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಟೀಕಿಸುತ್ತಿದ್ದಾರೆ ಹಾಗೂ ಸಿಕ್ಕಾಪಟ್ಟೆ ಟ್ರೋಲ್‌ ಮಾಡುತ್ತಿದ್ದಾರೆ. ಇದೀಗ ಟೀಕಾಕಾರರಿಗೆ ಸಿಎಸ್‌ಕೆ ಸ್ಪಿನ್ನರ್‌ ಅಶ್ವಿನ್‌ ತಿರುಗೇಟು ನೀಡಿದ್ದಾರೆ.

ಸಿಎಸ್‌ಕೆಯನ್ನು ಟೀಕಿಸಿದ ಫ್ಯಾನ್ಸ್‌ಗೆ ಆರ್‌ ಅಶ್ವಿನ್‌ ತಿರುಗೇಟು!

ಸಿಎಸ್‌ಕೆ ಟೀಕಾಕಾರರಿಗೆ ಆರ್‌ ಅಶ್ವಿನ್‌ ತಿರುಗೇಟು.

Profile Ramesh Kote Apr 10, 2025 5:38 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಈ ಬಗ್ಗೆ ಸಿಎಸ್‌ಕೆ ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ (R Ashwin) ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಟ್ರೋಲ್‌ಗಳಿಗೆ ಹಾಗೂ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಿನ್‌ ಆಲ್‌ರೌಂಡರ್‌ ತಿಳಿಸಿದ್ದಾರೆ. ಋತುರಾಜ್‌ ಗಾಯಕ್ವಾಡ್‌ ನಾಯಕತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನ ಮೊಲದಲನೇ ಪಂದ್ಯವನ್ನು ಗೆದ್ದು ಟೂರ್ನಿಯಲ್ಲಿ ಶುಭಾರಂಭ ಕಂಡಿತ್ತು. ಆದರೆ, ನಂತರ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸತತವಾಗಿ ಸೋಲು ಅನುಭವಿಸುವ ಮೂಲಕ ಭಾರಿ ಹಿನ್ನಡೆ ಅನುಭವಿಸಿದೆ.

ಕಳೆದ ಕೆಲ ಆವೃತ್ತಿಗಳಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡಿದ್ದ ಆರ್‌ ಅಶ್ವಿನ್‌ ಅವರನ್ನು ಮೆಗಾ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ 9.75 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆ ಮೂಲಕ 2015ರ ಬಳಿಕ ಆರ್‌ ಅಶ್ವಿನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮರಳಿದ್ದು, ಇಲ್ಲಿಯತನಕ ಆಡಿದ ಐದು ಪಂದ್ಯಗಳಿಂದ ಅವರು ಐದು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ಧ ಕಳೆದ ಪಂದ್ಯದ ಪವರ್‌ಪ್ಲೇನಲ್ಲಿ 21 ರನ್ ನೀಡಿದ್ದರು.

IPL 2025: ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ; ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

"ಸಾಮಾನ್ಯವಾಗಿ ಸೋಲುವುದನ್ನು ಯಾರೂ ಇಷ್ಟಪಡುವುದಿಲ್ಲ. ಪ್ರಾಮಾಣಿಕವಾಗಿ ನಾನು ಟ್ರೋಲ್‌ಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಟ್ರೋಲ್‌ ಹಾಗೂ ಟೀಕಿಸಬೇಡಿ ಎಂದು ನೀವು ಹೇಳಬಹದು, ಆದರೆ, ನಾನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ನಿಮ್ಮ ಬಗ್ಗೆ ಮಾತನಾಡುತ್ತಿದ್ದರೆ, ನಿಮ್ಮ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದರೆ, ಅದು ಒಳ್ಳೆಯ ಅರ್ಥಪೂರ್ಣ ದೃಷ್ಟಿಕೋನದಿಂದ ಬರಬಹುದು. ಇದನ್ನು ನಾವು ರಚನಾತ್ಮಕ ಟೀಕೆಯಾಗಿ ಸ್ವೀಕರಿಸುತ್ತೇವೆ. ಕೆಲವು ಜನರು ನಿಮ್ಮನ್ನು ಟೀಕಿಸುವ ಮೂಲಕ ಸಂತೋಚಪಡಬಹುದು ಇದು ನನ್ನ ಪ್ರಕಾರ ವಿಷ," ಎಂದು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಆರ್‌ ಅಶ್ವಿನ್‌ ತಿಳಿಸಿದ್ದಾರೆ.

"ವ್ಯತ್ಯಾಸವನ್ನು ಕಂಡುಹಿಡಿಯುವುದು ಸುಲಭ, ರಚನಾತ್ಮಕ ಟೀಕೆ ಮತ್ತು ವಿಷ ಯಾವುದು ಎಂದು ನಾನು ಸುಲಭವಾಗಿ ಕಂಡುಹಿಡಿಯಬಲ್ಲೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇವತ್ತಿಗಿಂತ ಉತ್ತಮವಾಗಿರುವುದನ್ನು ತರಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ. ಇದು ನನ್ನ ಜೀವನದಲ್ಲಿ ನಾನು ಅಳವಡಿಸಿಕೊಂಡಿರುವ ಮಂತ್ರವಾಗಿದೆ. ಅದರ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ. ನಿಮ್ಮ ಬಗ್ಗೆ ಜನ ಮಾತನಾಡಿದಾಗ ಹಾಗೂ ನಿಮ್ಮ ಪ್ರದರ್ಶನವನ್ನು ಗುಣಗಾನ ಮಾಡಿದಾಗ ಈ ಎಲ್ಲಾ ಅಂಶಗಳು ತಲೆಗೆ ಬರುತ್ತವೆ. ನಾನು ಔಟ್‌ ಆದಾಗ ಈಗಲೂ ನನ್ನ ತಂದೆ ನನ್ನನ್ನು ಟೀಕಿಸುತ್ತಾರೆ. ನನ್ನ ಪೋಷಕರು ಕೂಡ ನನ್ನನ್ನು ಟೀಕಿಸುತ್ತಾರೆ. ಪ್ರೀತಿಯ ಕಡೆಯಿಂದ ಟೀಕೆಗಳು ಬಂದರೆ, ಅದು ಚೆನ್ನಾಗಿರುತ್ತದೆ," ಎಂದು ಹೇಳಿದ್ದಾರೆ.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ನ ಹ್ಯಾಟ್ರಿಕ್‌ ಸೋಲಿಗೆ ಕಾರಣ ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

ಸೋಶಿಯಲ್‌ ಮೀಡಿಯಾವನ್ನು ತ್ಯಜಿಸಿದ್ದೇನೆ: ಅಶ್ವಿನ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಂತಹ ದೊಡ್ಡ ಟೂರ್ನಿಗಳ ಸಮಯದಲ್ಲಿ ನಾನು ಸೋಶಿಯಲ್‌ ಮೀಡಿಯಾವನ್ನು ತ್ಯಜಿಸುತ್ತೇನೆ. ಈ ವರ್ಷವೂ ನಾನು ಸೋಶಿಯಲ್‌ ಮೀಡಿಯಾದಿಂದ ಹೊರಗಿದ್ದೇನೆ ಅಶ್ವಿನ್‌ ತಿಳಿಸಿದ್ದಾರೆ.

"ಅಭಿಮಾನಿಯಾಗಿ ಇರುವುದು ಕೂಡ ಸುಲಭವಲ್ಲ. ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಇದ್ದಾಗಲೂ ನಾನು ಸೋಶಿಯಲ್‌ ಮೀಡಿಯಾವನ್ನು ಆಫ್‌ ಮಾಡುತ್ತಿದ್ದೆ. ಆಟದ ಬಗ್ಗೆ ನೀವು ನನ್ನ ಬಳಿ ಮಾತನಾಡಿದರೂ ನಾನು ಅದರ ಬಗ್ಗೆ ಚರ್ಚಿಸುವುದಿಲ್ಲ. ಟೂರ್ನಿಯ ಸಮಯದಲ್ಲಿ ನಾನು ಈ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ನಾನು ಸಾಮಾಜಿಕ ಮಾಧ್ಯಮವನ್ನು ಸಂಪೂರ್ಣವಾಗಿ ತ್ಯಜಿಸುತ್ತೇನೆ. ನಾನು ಯಾವುದಕ್ಕೂ ಕಾಮೆಂಟ್ ಮಾಡುವುದಿಲ್ಲ. ನಾನು ಚೆನ್ನಾಗಿ ಕೆಲಸ ಮಾಡದಿದ್ದಾಗ ನನ್ನ ಸ್ನೇಹಿತರು ಕೆಲವೊಮ್ಮೆ 'ಚಿಂತಿಸಬೇಡಿ, ದೃಢವಾಗಿರಿ' ಎಂದು ನನಗೆ ಸಂದೇಶ ಕಳುಹಿಸುತ್ತಾರೆ. ನಾನು ಅವರಿಗೆ ಈ ವಿಷಯಗಳನ್ನು ಸಹ ನನಗೆ ಹೇಳಬೇಡಿ ಎಂದು ಹೇಳುತ್ತೇನೆ. ಹೊರಗೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ನನಗೆ ಆಸಕ್ತಿ ಇಲ್ಲ," ಎಂದು ಆರ್‌ ಅಶ್ವಿನ್‌ ಹೇಳಿದ್ದಾರೆ.

IPL 2025: ಕೊಹ್ಲಿ ಬಳಿಕ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲು ಸಜ್ಜಾದ ಪಾಟೀದಾರ್‌

ಆರ್‌ಸಿಬಿ ಅಭಿಮಾನಿಗಳನ್ನು ಶ್ಲಾಘಿಸಿದ ಅಶ್ವಿನ್‌

"ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ, ಕಳೆದ ವರ್ಷ ನಾನು ದಿನೇಶ್‌ ಕಾರ್ತಿಕ್‌ ಅವರೊಂದಿಗೆ ಕುಟ್ಟಿ ಸ್ಟೋರಿಯ ಸಂಚಿಕೆಯಲ್ಲಿ ಭಾಗವಹಿಸಿದ್ದೆ. ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಅವರು ಒಂದು ಮಾತನ್ನು ನನ್ನ ಬಳಿ ಹೇಳಿದ್ದರು. ಆರ್‌ಸಿಬಿ ಅಭಿಮಾನಿಗಳು ಯಾವುದೇ ಹಂತದಲ್ಲಿ ಆಟಗಾರರನ್ನು ಬಿಟ್ಟುಕೊಡುವುದಿಲ್ಲ ಕಾರ್ತಿಕ್‌ ನನಗೆ ತಿಳಿಸಿದ್ದರು. ಅಭಿಮಾನಿಗಳ ಬಳಗ ಎಂದರೆ ಟೀಕೆ ಮಾಡುವುದು ಮತ್ತು ಅದನ್ನು ನೈಜವಾಗಿ ಇಟ್ಟುಕೊಳ್ಳುವುದು ಎಂದು ನಾನು ಒಪ್ಪುತ್ತೇನೆ. ಆದರೆ, ಯಾವುದೇ ಆಟಗಾರ ತಪ್ಪುಗಳನ್ನು ಮಾಡಲು ಹೋಗುವುದಿಲ್ಲ," ಎಂದು ಅಶ್ವಿನ್‌ ತಿಳಿಸಿದ್ದಾರೆ.