ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಯುಕೆ ಮಾಜಿ ಪ್ರಧಾನಿಗೆ ಕುಕ್ಕಿದ ಆಸ್ಟ್ರಿಚ್‌- ಶಾಕಿಂಗ್‌ ವಿಡಿಯೊ ಇದೆ

ಯುಕೆ ಮಾಜಿ ಪ್ರಧಾನಿ ಆಸ್ಟ್ರಿಚ್‌ ನಿಂದ ಕುಕ್ಕಿಸಿಕೊಂಡ ವಿಡಿಯೊ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪತ್ನಿ ಕ್ಯಾರಿ ಜಾನ್ಸನ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜಾನ್ಸನ್ ಕುಟುಂಬವು ತಮ್ಮ ವಾಹನದೊಳಗೆ ಕುಳಿತಿದ್ದಾಗ ಆಸ್ಟ್ರಿಚ್ ಬಂದು ಅವರಿಗೆ ಕುಕ್ಕಿದೆ. ಈ ಘಟನೆ ಯಾವ ವನ್ಯಜೀವಿ ಉದ್ಯಾನದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ,

ಆಸ್ಟ್ರಿಚ್‌ನಿಂದ ಕುಕ್ಕಿಸಿಕೊಂಡ ಬೋರಿಸ್ ಜಾನ್ಸನ್

ಟೆಕ್ಸಾಸ್‌: ಯುಕೆ ಮಾಜಿ ಪ್ರಧಾನಿ (UK PM) ಆಸ್ಟ್ರಿಚ್‌ ನಿಂದ (Ostrich) ಕುಕ್ಕಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಅವರ ಪತ್ನಿ ಕ್ಯಾರಿ ಜಾನ್ಸನ್ (Carrie Johnson) ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜಾನ್ಸನ್ ಕುಟುಂಬವು ತಮ್ಮ ವಾಹನದೊಳಗೆ ಕುಳಿತಿದ್ದಾಗ ಆಸ್ಟ್ರಿಚ್ ಬಂದು ಅವರಿಗೆ ಕುಕ್ಕಿದೆ. ಈ ಘಟನೆ ಯಾವ ವನ್ಯಜೀವಿ ಉದ್ಯಾನದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಟೆಕ್ಸಾಸ್‌ನ ವನ್ಯಜೀವಿ ಉದ್ಯಾನವನದಲ್ಲಿ ತಮ್ಮ ಕುಟುಂಬದೊಂದಿಗೆ ವಿಹರಿಸುತ್ತಿದ್ದ ಬೋರಿಸ್ ಜಾನ್ಸನ್ ಕಾರಿನಲ್ಲಿ ಕುಳಿತಿದ್ದಾಗ ಹತ್ತಿರ ಬಂದ ಆಸ್ಟ್ರಿಚ್‌ ಪಕ್ಷಿಯೊಂದು ಅವರ ಕಾರಿನೊಳಗೆ ಇಣುಕಿ ಜಾನ್ಸನ್ ಅವರನ್ನು ಕುಕ್ಕಿದೆ. ಇದರಿಂದ ಜಾನ್ಸನ್ ಗಾಬರಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಚಾಲಕನ ಸೀಟಿನಲ್ಲಿ ಜಾನ್ಸನ್ ಕುಳಿತಿದ್ದು, ಅವರ ಪಕ್ಕದಲ್ಲಿ ಮಗ ವಿಲ್ಫ್ರೆಡ್ ಇದ್ದರು. ಆಸ್ಟ್ರಿಚ್ ಪಕ್ಷಿ ಅವರ ಹತ್ತಿರ ಬಂದು ತೆರೆದ ಕಿಟಕಿಯ ಮೂಲಕ ಅವರ ಕೈಗೆ ಕುಟುಕಿದೆ. ಇದರಿಂದ ಜಾನ್ಸನ್ ಕಾರು ಚಲಾಯಿಸಿಕೊಂಡು ಮುಂದೆ ಸಾಗಬೇಕಾಯಿತು. ಈ ಹಿಂದೆ ಕ್ಯಾರಿ ಜಾನ್ಸನ್ ಟೆಕ್ಸಾಸ್‌ನ ಗ್ಲೆನ್ ರೋಸ್‌ಗೆ ಹತ್ತಿರದಲ್ಲಿರುವ ಡೈನೋಸಾರ್ ವ್ಯಾಲಿ ಸ್ಟೇಟ್ ಪಾರ್ಕ್‌ನಲ್ಲಿ ಕುಟುಂಬದ ಚಿತ್ರವನ್ನು ಹಂಚಿಕೊಂಡಿದ್ದರು. ಕ್ಯಾರಿ ಅವರ ಖಾತೆಗೆ ಅಪ್‌ಲೋಡ್ ಮಾಡಲಾದ ಇತರ ವಿಡಿಯೋಗಳಲ್ಲಿ ಅವರ ಕುಟುಂಬವು ಜಿಂಕೆ ಮತ್ತು ಮೇಕೆಯಂತಹ ಪ್ರಾಣಿಯಾದ ಔಡಾಡ್ ಅನ್ನು ಗಮನಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಕೂಡ ಅಲ್ಲಿದ್ದೇ ಆಗಿರಬಹುದು ಎಂದು ವೀಕ್ಷಕರು ಊಹಿಸಿದ್ದಾರೆ.

ಇದನ್ನೂ ಓದಿ: Google Map: ಗೂಗಲ್ ಮ್ಯಾಪ್ ಎಡವಟ್ಟು- 40 ಅಡಿ ಎತ್ತರದ ಬ್ರಿಡ್ಜ್ ನಿಂದ ಕೆಳಗೆ ಬಿದ್ದ ಕಾರು

ಜಾನ್ಸನ್ ತಮ್ಮ ಪತ್ನಿಯೊಂದಿಗೆ ಲೇಕ್ ಗ್ರಾನ್‌ಬರಿಯಲ್ಲಿರುವ ಸ್ಥಳೀಯ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಇಲ್ಲಿ ಅವರು ಸ್ಟಂಪೀಸ್ ಲೇಕ್‌ಸೈಡ್ ಗ್ರಿಲ್ ನ ಆತಿಥ್ಯವನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಪುಟದಲ್ಲಿ ಫೋಟೋವನ್ನು ಹಂಚಿಕೊಂಡ ರೆಸ್ಟೋರೆಂಟ್, ಅವರು ನಮ್ಮ ಅತಿಥಿಯಾಗಿ ಬಂದಿದ್ದು ನಮಗೆ ತುಂಬಾ ಗೌರವ ತಂದಿದೆ ಎಂದು ಹೇಳಿದೆ. 2019 ರಿಂದ 2022 ರವರೆಗೆ ಯುಕೆ ಪ್ರಧಾನಿಯಾಗಿದ್ದ ಜಾನ್ಸನ್, ತಮಾಷೆಯ ಅಥವಾ ವಿಚಿತ್ರ ಸನ್ನಿವೇಶಗಳಿಂದಾಗಿ ಆಗಾಗ್ಗೆ ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಾರೆ. ಅವರ ಅನಿರೀಕ್ಷಿತ ಹಾಸ್ಯ ಸನ್ನಿವೇಶಗಳು ಹಲವಾರು ಬಾರಿ ಸಾರ್ವಜನಿಕರ ಗಮನ ಸೆಳೆದಿವೆ.