2025ರಲ್ಲಿ ತನ್ನ ಆಶ್ರಯ್ ವಿಶ್ರಾಂತಿ ಕೇಂದ್ರಗಳ ಸಂಖ್ಯೆ 100ಕ್ಕೆ ವಿಸ್ತರಿಸಲಿರುವ ಅಮೆಜಾನ್ ಇಂಡಿಯಾ
ಹವಾನಿಯಂತ್ರಿತ ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ದೈಹಿಕ ಆಯಾಸ ನಿವಾರಿಸುವ ಎಲೆಕ್ಟ್ರೋಲೈಟ್ ಪಾನೀಯಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಶೌಚಾಲಯಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಮತ್ತು ಲಘು ತಿಂಡಿ ಹಾಗೂ ಪಾನೀಯ ಸೇವನೆ ಸೌಲಭ್ಯಗಳನ್ನು ನೀಡಲು ಮೀಸ ಲಾಗಿರುವ ವಿಶ್ರಾಂತಿ ತಾಣಗಳಾಗಿರುತ್ತವೆ


* ಆಶ್ರಯ್ ಕೇಂದ್ರಗಳು ಇ-ಕಾಮರ್ಸ್ ಮತ್ತು ಸರಕು ಸಾಗಣೆ ವಲಯಗಳಾದ್ಯಂತ ಸರಕು ವಿತರಕ ಸಿಬ್ಬಂದಿಗೆ ಹವಾನಿಯಂತ್ರಿತ ಆಸನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ದೈಹಿಕ ಆಯಾಸ ನಿವಾರಿಸುವ ಎಲೆಕ್ಟ್ರೋಲೈಟ್ ಪಾನೀಯಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಶೌಚಾಲಯ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಲಘು ತಿಂಡಿ ಹಾಗೂ ಪಾನೀಯ ಸೇವನೆ ಸೌಲಭ್ಯಗಳನ್ನು ಒದಗಿಸಲು ಮೀಸಲಾದ ವಿಶ್ರಾಂತಿ ಕೇಂದ್ರಗಳಾಗಿವೆ.
* ಸರಕು ವಿತರಿಸುವ ಸಿಬ್ಬಂದಿಯು ಈ ಆಶ್ರಯ್ ಕೇಂದ್ರಗಳನ್ನು ಉಚಿತವಾಗಿ ಬಳಸಬಹುದು
ನವದೆಹಲಿ: ದೇಶದಾದ್ಯಂತ ತನ್ನ ಆಶ್ರಯ್ ಕೇಂದ್ರಗಳ (Ashray centers) ಜಾಲವನ್ನು ಈ ವರ್ಷಾಂತ್ಯದ ವೇಳೆಗೆ (2025) 100ಕ್ಕೆ ವಿಸ್ತರಿಸುವುದಾಗಿ ಅಮೆಜಾನ್ ಇಂಡಿಯಾ ಪ್ರಕಟಿಸಿದೆ.
ಈ ಆಶ್ರಯ್ ಕೇಂದ್ರಗಳು ಇ-ಕಾಮರ್ಸ್ ಮತ್ತು ಸರಕು ಸಾಗಣೆ ವಲಯಗಳಲ್ಲಿ ಕಾರ್ಯನಿರ್ವ ಹಿಸುವ ಸರಕು ವಿತರಣಾ ಸಿಬ್ಬಂದಿಗೆ ಹವಾನಿಯಂತ್ರಿತ ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ದೈಹಿಕ ಆಯಾಸ ನಿವಾರಿಸುವ ಎಲೆಕ್ಟ್ರೋಲೈಟ್ ಪಾನೀಯಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಶೌಚಾಲಯಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಮತ್ತು ಲಘು ತಿಂಡಿ ಹಾಗೂ ಪಾನೀಯ ಸೇವನೆ ಸೌಲಭ್ಯಗಳನ್ನು ನೀಡಲು ಮೀಸಲಾಗಿರುವ ವಿಶ್ರಾಂತಿ ತಾಣಗಳಾಗಿರುತ್ತವೆ.
ಸರಕುಗಳನ್ನು ವಿತರಿಸುವವರು ಮತ್ತು ಸರಕು ಸಾಗಣೆ ವಾಹನಗಳ ಸಿಬ್ಬಂದಿಯ ಬಳಕೆಗೆಂದೇ ಮಹಾನಗರಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುವ ಪ್ರದೇಶ ಗಳಲ್ಲಿ ಆರಂಭಿಸಲಾಗಿರುವ ಈ ವಿಶ್ರಾಂತಿ ಕೇಂದ್ರಗಳ ಸೌಲಭ್ಯವು ಇ-ಕಾಮರ್ಸ್ ಉದ್ಯಮದಲ್ಲಿ ಪರಿಚಯಿಸಲಾಗಿರುವ ಮೊದಲ ಉಪಕ್ರಮವಾಗಿದೆ. ಪೆಟ್ರೋಲ್ ಪಂಪ್‌ಗಳು ಮತ್ತು ಇತರ ವಾಣಿಜ್ಯ ಉದ್ದೇಶದ ಬಾಡಿಗೆ ಸ್ಥಳಗಳಲ್ಲಿ ನೆಲೆಗೊಂಡಿರುವ ಈ ಕೇಂದ್ರಗಳು ಅಗತ್ಯ ಸೌಲಭ್ಯಗಳನ್ನೆಲ್ಲ ಹೊಂದಿರಲಿವೆ. ಈ ಆಶ್ರಯ್ ಕೇಂದ್ರಗಳು ವರ್ಷಪೂರ್ತಿ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ವಾರ ದಲ್ಲಿ 7 ದಿನಗಳು ಕಾರ್ಯನಿರ್ವಹಿಸುತ್ತವೆ. ಈ ಕೇಂದ್ರಗಳಿಗೆ ಭೇಟಿ ನೀಡುವ ಸರಕು ವಿತರಣಾ ಸಹವರ್ತಿಗಳಿಗೆ ಪ್ರತಿ ಭೇಟಿಗೆ 30 ನಿಮಿಷಗಳವರೆಗೆ ಉಚಿತ ಪ್ರವೇಶ ಇರಲಿದೆ. ಯಾವುದೇ ಸಮಯ ದಲ್ಲಿ 15 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುವ ಈ ಕೇಂದ್ರಗಳು ಅನುಕೂಲಕರ ಪಾರ್ಕಿಂಗ್ ಸ್ಥಳಗಳನ್ನು ಸಹ ಹೊಂದಿರುತ್ತವೆ.
ಈ ಉಪಕ್ರಮ ಆರಂಭಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಅಮೆಜಾನ್-ನ ಭಾರತ ಹಾಗೂ ಆಸ್ಟ್ರೇಲಿಯಾದ ಕಾರ್ಯಾಚರಣೆ ಉಪಾಧ್ಯಕ್ಷ ಅಭಿನವ್ ಸಿಂಗ್ ಅವರು, "ಸರಕು ವಿತರಿಸುವ ಸಿಬ್ಬಂದಿಯ ಆರೋಗ್ಯ ಹಾಗೂ ಯೋಗಕ್ಷೇಮ ನೋಡಿಕೊಳ್ಳುವುದು ಮತ್ತು ಅವರಿಗೆ ವಿಶ್ರಾಂತಿ ಸೌಲಭ್ಯ ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಹವಾನಿಯಂತ್ರಿತ ಸೌಲಭ್ಯ ಹೊಂದಿ ರುವ ಈ ಆಶ್ರಯ ಕೇಂದ್ರಗಳು ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳಂತಹ ಅಗತ್ಯ ಸೌಲಭ್ಯಗಳ್ನೂ ಒಳಗೊಂಡಿರಲಿವೆ. ಈ ಎಲ್ಲ ಸೌಲಭ್ಯಗಳು ಸರಕು ವಿತರಣೆ ಸಿಬ್ಬಂದಿಯು ತಮ್ಮ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಕೆಲ ಕಾಲ ಆರಾಮವಾಗಿ ವಿಶ್ರಾಂತಿ ಪಡೆಯಲು ಮತ್ತು ಸುರಕ್ಷಿತವಾಗಿರಲು ನೆರವಾಗುತ್ತವೆ. ಇ-ಕಾಮರ್ಸ್ ಮತ್ತು ಸರಕು ಸಾಗಣೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿತರಣಾ ಸಿಬ್ಬಂದಿಯ ಅನು ಕೂಲತೆಗಾಗಿ ಈ ಸೌಲಭ್ಯಗಳನ್ನು ಆರಂಭಿಸಲಾಗುತ್ತಿದೆ. ಇ-ಕಾಮರ್ಸ್ ಉದ್ಯಮವು ಕಾರ್ಯ ನಿರ್ವಹಿಸುವುದರ ಗುಣಮಟ್ಟ ಹೆಚ್ಚಿಸುವ ನಮ್ಮ ಬದ್ಧತೆಯನ್ನು ಈ ಉಪಕ್ರಮವು ಪ್ರತಿಬಿಂಬಿಸು ತ್ತದೆ. ಈ ಉಪಕ್ರಮಕ್ಕೆ ಇಲ್ಲಿಯವರೆಗೆ ನಮಗೆ ದೊರೆತಿರುವ ಪ್ರತಿಕ್ರಿಯೆ ಕಂಡು ನಾವು ಉತ್ತೇಜನ ಗೊಂಡಿದ್ದೇವೆ. ಭಾರತದಾದ್ಯಂತ ಇಂತಹ 100 ಕೇಂದ್ರಗಳಿಗೆ ಈ ಉಪಕ್ರಮವನ್ನು ವಿಸ್ತರಿಸಲು ಬದ್ಧರಾಗಿದ್ದೇವೆ" ಎಂದು ಅವರು ಹೇಳಿದ್ದಾರೆ.
ಈ ಆಶ್ರಯ್ ಕೇಂದ್ರಗಳು ಕಾರ್ಯಾರಂಭ ಮಾಡಿದ ದಿನದಿಂದ ಸರಕು ವಿತರಣೆ ಮತ್ತು ಸರಕು ಸಾಗಣೆ ಸೇವೆಯಲ್ಲಿ ತೊಡಗಿರುವ ಸಾವಿರಾರು ಸಿಬ್ಬಂದಿ ಈ ಕೇಂದ್ರಗಳಿಗೆ ಭೇಟಿ ನೀಡಿ ಪ್ರಯೋ ಜನ ಪಡೆದುಕೊಂಡಿದ್ದಾರೆ.
ಗ್ರಾಹಕರ ಮನೆ ಬಾಗಿಲಿಗೆ ಸರಕು ತಲುಪಿಸುವ ಸಿಬ್ಬಂದಿಗೆ ಈ ಸೌಲಭ್ಯದ ಹೆಚ್ಚುತ್ತಿರುವ ಬೇಡಿಕೆ ಮತ್ತು ಅಗತ್ಯ ಇರುವುದನ್ನು ಇದು ಸೂಚಿಸುತ್ತದೆ. ಈ ವಿಶ್ರಾಂತಿ ಕೇಂದ್ರಗಳ ಸಂಖ್ಯೆಯನ್ನು 100ಕ್ಕೆ ವಿಸ್ತರಿಸುತ್ತಿರುವುದು ಸರಕು ವಿತರಿಸುವ ಸಿಬ್ಬಂದಿಗೆ ಹೆಚ್ಚಿನ ಅನುಕೂಲತೆ ಒದಗಿಸಲಿದೆ. ಗ್ರಾಹಕರ ಬೇಡಿಕೆಗಳನ್ನು ಪೂರೈಸುವಾಗ ಬೇಕಾಗುವ ವಿಶ್ರಾಂತಿ ಮತ್ತು ಮೊಬೈಲ್‌ಗಳನ್ನು ರೀಚಾರ್ಜ್ ಮಾಡಲು ತಮಗಾಗಿ ಪ್ರತ್ಯೇಕ ಹಾಗೂ ವಿಶ್ವಾಸಾರ್ಹ ವಿಶ್ರಾಂತಿ ಕೇಂದ್ರಗಳು ಲಭ್ಯ ಇರುವುದನ್ನು ಸಿಬ್ಬಂದಿಗೆ ಖಚಿತಪಡಿಸುತ್ತವೆ.