Sunday, 28th April 2024

ಆನ್ ಲೈನ್ ಮೂಲಕ ದೇಣಿಗೆ ನೀಡಿ: ದಾನಿಗಳಿಗೆ ಮುಖ್ಯಮಂತ್ರಿ ಮನವಿ

ಬೆಂಗಳೂರು:

ಕೋವಿಡ್ 19 ಸೋಂಕು ನಿಯಂತ್ರಣ, ಮುನ್ನೆಚ್ಚರಿಕೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ ಸಂಕಷ್ಟದಲ್ಲಿ ಸಿಲುಕಿರುವ ಬಡವರು ಹಾಗೂ ಕಾರ್ಮಿಕರಿಗೂ ನೆರವಿನ ಹಸ್ತ ಚಾಚಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ದಾನಿಗಳು ಸಾಧ್ಯವಾದಷ್ಟು ಆನ್ ಲೈನ್ ಮೂಲಕವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಯಲ್ಲಿ ಸರ್ಕಾರದ ವಿವಿಧ ನಿಗಮ/ಮಂಡಳಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳು, ದಾನಿಗಳು ದೇಣಿಗೆಯನ್ನು ಚೆಕ್/ಡಿ.ಡಿ.ಗಳ ಮೂಲಕ ನೀಡಿ ಸರ್ಕಾರದೊಂದಿಗೆ ಕೈಜೋಡಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಚಿತರ ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿರುವ್ಯದರಿಂದ ದಾನಿಗಳು ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿ ಮಾಡಿ ದೇಣಿಗೆಯನ್ನು ನೀಡುವುದರ ಬದಲಾಗಿ ಈ ಕೆಳಕಂಡ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿ ಖಾತೆಗೆ ಆನ್ ಲೈನ್ ಮುಖಾಂತರ ದೇಣಿಗೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ.

Account Name: Chief Minister Relief Fund Covid-19

Bank Name: State Bank of India (SBI)

Branch: Vidhana Soudha, Bangalore

Account No: 39234923151

IFSC Code: SBIN0040277

MICR No: 560002419

ಇದಲ್ಲದೆ cmrf.karnataka.gov.in ವೆಬ್ಸೈಟ್ ನಲ್ಲಿ ಯು ಪಿ ಐ ಆ್ಯಪ್ ಗಳ ಮೂಲಕ ಪಾವತಿಸಲು ಸಹ ಅವಕಾಶವಿದೆ.

ಆನ್‍ಲೈನ್ ಮೂಲಕ ದೇಣಿಗೆಯನ್ನು ಪಾವತಿಸಲು ಸಾಧ್ಯವಾಗದವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಥವಾ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ದೇಣಿಗೆಯನ್ನು ನೀಡಬಹುದಾಗಿದೆ.

ಕೋವಿಡ್-19 ನಿಧಿಗೆ ಸೇವಾ ಮನೋಭಾವದಿಂದ ದೇಣಿಗೆ ನೀಡುವ ಪ್ರತಿಯೊಬ್ಬ ದಾನಿಯನ್ನು ಕರೋನಾ ವೈರಾಣುವಿನ ಹರಡುವಿಕೆಯು ನಿಯಂತ್ರಣಕ್ಕೆ ಬಂದ ನಂತರ ಸಂಪರ್ಕಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!