Saturday, 14th December 2024

ಪಾವಗಡ ಗಡಿ ತಾಲ್ಲೂಕಿನ ಜನತೆಗೆ ಐಜಿಪಿ ಸಹಾಯ ಹಸ್ತ

ಪಾವಗಡ :ತಾಲ್ಲೂಕಿನಲ್ಲಿ ಇತ್ತೀಚಿಗೆ ಕರೋನ ಪ್ರಕರಣಗಳು ಹೆಚ್ಚಾಗಿ ಈ ಭಾಗದಲ್ಲಿ ಜನರು ಸಂಕಷ್ಟದ ಸ್ಥಿತಿಯನ್ನು ಗಮನಿಸಿದ ಬೆಂಗಳೂರು ಕೇಂದ್ರ ವಲಯದ ಪೋಲಿಸ್ ಮಹಾ ನಿರೀಕ್ಷಕ (IGP) ಚಂದ್ರ ಶೇಖರ ಎಂ ರವರು ತಮ್ಮ ಸ್ವಂತ ಹಣ ದಿಂದ ಪಾವಗಡ ತಾಲ್ಲೂಕಿಗೆ ಕೋವಿಡ್ ರೋಗಿಗಳ ಸಹಾಯಕ್ಕಾಗಿ ಮೂರು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿದ್ದಾರೆ. ಸ್ಥಳೀಯ ತಹಸೀಲ್ದಾರ್ ಕೆ.ಆರ್ ನಾಗರಾಜ್ ರವರಿಗೆ ಹಸ್ತಾಂತರಿಸಲಾಯಿತು.
ಪಾವಗಡ ತಾಲ್ಲೂಕಿನ ಜನರ ಕಾಳಜಿ ವಹಿಸಿದ ಬೆಂಗಳೂರು ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕ ಎಂ ಚಂದ್ರಶೇಖ ರವರಿಗೆ ಪಾವಗಡ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸಿದ್ದಾರೆ.
ಈ ವೇಳೆ ಉಪಸ್ಥಿತಿಯಲ್ಲಿ ಪಾವಗಡ ಪೊಲೀಸ್ ನಿರೀಕ್ಷಕ ಲಕ್ಷ್ಮಿಕಾಂತ್, ಪೊಲೀಸ್ ಉಪ ನಿರೀಕ್ಷಕರ(SI)  ಗುರುನಾಥ ಹಾಗೂ ಪಾವಗಡ ಪೊಲೀಸ್ ಸಿಬ್ಬಂದಿ ವರ್ಗ ಮತ್ತು ವೈದ್ಯ ಡಾ|| ವೆಂಕಟರಾಮಯ್ಯ , ರವಿಶಂಕರ್, ದೊಡ್ಡಹಳ್ಳಿ ಅಶೋಕ್, ಮಧು ಇದ್ದರು.