Tuesday, 10th December 2024

ಸಂರ್ಪೂಣ ನೀರಾವರಿ ಮಾಡುತ್ತೇನೆ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ಈ ಭಾಗದಲ್ಲಿ ನೀರಿನ ಸಮಸ್ಯ ಇದ್ದು ಚೋರಗಿ,ಚೌಡಿಹಾಳ ಸೇರಿದಂತೆ ಅನೇಕ ಗ್ರಾಮಗಳು ತೊಂದರೆಯಲ್ಲಿರುವದರಿ0ದ್ದ ಮುಬರುವ ದಿನಗಳಲ್ಲಿ ಒಂದು ಇಂಚ್ಚು ಸಹಿತ ರೈತರ ಭೂಮಿ ಉಳಿಯದಂತೆ ಸಂಪೂರ್ಣ ನೀರಾವರಿ ಮಾಡುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಚವಡಿಹಾಳ ಗ್ರಾಮ ಪಂಚಾಯತ ನೂತನ ಕಟ್ಟಡ್ ಹಾಗೂ ಡಿಜಟಲ್ ಗ್ರಂಥಾಲಯಉದ್ಘಾಟಿಸಿ ಮಾತನಾಡಿದ ಅವರು ಸ್ಥಳೀಯ ಗ್ರಾಮ ಪಂಚಾಯತ ಅಭಿವೃದ್ದಿಯೊಂದೇ ಮೂಲಮಂತ್ರವಾಗಿಸಿ ಇಡೀ ಚುನಾಯಿತ ಪ್ರತಿನಿಧಿಗಳು ಒಗ್ಗಟ್ಟಿನಿಂದ ಗ್ರಾಮದ ಏಳ್ಗೆ ಬಯಸಿದರೆ ಮಾದರಿ ಗ್ರಾಮವಾಗಲು ಸಾಧ್ಯೆ. ಪಂಚಾ ಯತ ಅಭಿವೃದ್ದಿ ಅಧಿಕಾರಿ ಸಿ.ಜಿ ಪಾರೆಯವರು ತಮ್ಮ ಅವಧಿಯಲ್ಲಿ ಏನಾದರೂ ಮಾಡಬೇಕು ಎಂದು ಚೋರಗಿಯಲ್ಲಿ ೧೪ ಎಕರೆ ಪ್ರದೇಶದ ಭೂಮಿಯಲ್ಲಿ ಕೆರೆ ನಿರ್ಮಿಸಿ ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಸಹಕಾರ ಗುಣ ತೋರಿಸುವ ಜೊತೆ ಗ್ರಾಮದಲ್ಲಿ ಮಹಾತ್ಮಾಗಾಂಧೀಜಿ ನರೇಗಾ ಯೋಜನೆಯಡಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಅಭಿವೃದ್ದಿ ಅಧಿಕಾರಿಯ ಬಗ್ಗೆ ಜನಪ್ರತಿನಿಧಿಗಳು, ಗ್ರಾಮಸ್ಥರು, ಮೇಲಾಧಿಕಾರಿಗಳು ಕೊಂಡಾಡುವುದು ನೋಡಿ ದರೆ ಜನರ ಮನಸ್ಸು ಗೆದ್ದು ಕೆಲಸ ಮಾಡಿದ್ದಾರೆ ಎಂದು ಅರ್ಥ, ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಲಭ್ಯ ನೀಡಿದರೆ ನಿಮ್ಮನ್ನು ಜನ ಜೀವನಪೂರ್ತಿ ಮರೇಯುವದಿಲ್ಲ ಎಂದರು.

ಅಧಿಕಾರಿಗಳು ಮನಸ್ಸು ಮಾಡಿದರೆ ಎನ್ನೇಲ್ಲಾ ಸಾಧಿಸಲು ಸಾಧ್ಯೆ ಎನ್ನುವುದಕ್ಕೆ ಚವಡಿಹಾಳ ಗ್ರಾಮ ಪಂಚಾ ಯತ ಅಭಿವೃದ್ದಿ ಅಧಿಕಾರಿಯೇ ನಿರ್ದೇಶನ ಅಭಿವೃದ್ದಿ ಅಧಿಕಾರಿ ಸಿ.ಜಿ ಪಾರೆ ಮಾಡುವ ಕೆಲಸಗಳಿಗೆ ಪಾರವೇ ಇಲ್ಲ.ಪೂಜ್ಯ ನಡೇದಾಡುವ ದೇವರು ಗುಡಿ, ದೇವಸ್ಥಾನ, ಗ್ರಂಥಾಲಯ, ಶಾಲೆಗಳ,ವನದೇವಿಯನ್ನು, ಉದ್ಯಾನವನ, ಲೋಕಾರ್ಪಣೆ ಮಾಡುವುದಕ್ಕೆ ಖುಷಿ ಪಡುತ್ತಿದ್ದರು.

ಮಾನಾಡುವುದೇ ಸಾಧನೆಯಾಗಬಾರದು ಮಾಡಿ ಸಾಧನೆಯಾಗಬೇಕು ಒಂದು ಟನ್ ಉಪದೇಶಕ್ಕಿಂತ ಒಂದು ತೊಲಿಯಾದರೂ ಜೀವನದಲ್ಲಿ ಕೃತಿ ಯಾಗಿರಲಿ. ಸಮಾಜ ಒಳ್ಳೇಯ ಕಡೆ ಇರಬೇಕು ಕೆಟ್ಟ ವಿಚಾರಗಳ ಕಡೆ ಕಣ್ಣು ಹಾಯಿಸಿಯೂ ನೋಡಬಾರದು ಮನೆ ನೋಡಾ ಬಡವರು ಮನ ನೋಡಾ ಘನ ಯಾರಲ್ಲಿ ಹಣ ಇರುತ್ತದೆ ಶ್ರೀಮಂತರಲ್ಲ ಗುಣ ಸಂಪನ್ನರಾಗಿರಬೇಕು ಹೃದಯದಲ್ಲಿ ಎಲ್ಲಿತನಕ ಬಡತನ ಇರುತ್ತದೆ ಶ್ರೀಮಂತರಾಗಲು ಸಾಧ್ಯವಿಲ್ಲ ಮನಸ್ಸು ಸರಿಯಾಗಿ ಇರಬೇಕು. ಈ ಭಾಗ ಸಂಪೂರ್ಣ ನೀರಾವರಿ ಮಾಡಿ ರೈತರ ಬದುಕು ಹಸನಾಗಿಸಬೇಕು ಎಂದು ಎಂದು ದಿವ್ಯ ಸಾನಿಧ್ಯ ವಹಿಸಿದ ಕಾತ್ರಾಳ ಬಾಲಗಾಂವ್ ಆಶ್ರಮದ ಅಮೃತಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.

ಲಿಂಬೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಕವಟಗಿಮಠ ಮಾತನಾಡಿದರು.

ದುಂಡಯ್ಯಾ ಸ್ವಾಮಿ, ಸಿದ್ದಯ್ಯಾ ಹಿರೇಮಠ ಸಾನಿಧ್ಯ ವಹಿಸಿದರು. ಗ್ರಾ.ಪಂ ಅಧ್ಯಕ್ಷೆ ದೀಲಶಾದ್ ಚೌದರಿ, ಎಂ.ಆರ್ ಪಾಟೀಲ, ಸಿದ್ದರಾಯಗೌಡ ಬಿರಾದಾರ, ಸುನೀಲ ಮದಿನ್ , ಎಸ್ ಆರ್ ರುದ್ರವಾಡಿ, ಸಂಜೇಯ ಖಡಗೇಕರ್, ಸಿದ್ದನಗೌಡ ಪಾಟೀಲ, ಸಂಜು ದಶವಂತ, ಉಪಾಧ್ಯಕ್ಷ ಕಾಮಣ್ಣಾ ದಶವಂತ, ಗ್ರಾ.ಪಂಚಾಯತ ಅಭಿವೃದ್ದಿ ಅಧಿಕಾರಿ ಸಿ.ಜೆ ಪಾರೆ ಸೇರಿದಂತೆ ಗ್ರಾಮ ಪಂಚಾಯತ ಸರ್ವಸದಸ್ಯರು ,ಗ್ರಾಮದ ಮುಖಂಡರು ,ವಿವಿಧ ಗ್ರಾಮ ಪಂಚಾಯತ ಅಧ್ಯಕ್ಷರು ಇದ್ದರು.