ಐಎ.ಎಸ್, ಕೆ.ಎ.ಎಸ್, ಪಿಎಸೈ, ಬ್ಯಾಂಕಿಂಗ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ 11 ತಿಂಗಳ ಉಚಿತ ತರಬೇತಿಗೆ ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿರವರಿಂದ ವ್ಯವಸ್ಥೆ
11 ತಿಂಗಳುಗಳ ಕಾಲ ಸ್ಪರ್ಧಾಲೈನ್ ಮುಖಾಂತರ ಉಚಿತ, ತರಬೇತಿ ನೀಡಲಾಗುತ್ತಿದ್ದು ಈ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಮಟ್ಟದ ಸರ್ಕಾರಿ ನೌಕರರಾಗಿ ತಾಲೂಕಿಗೆ ಕೀರ್ತಿ ತರಬೇಕೆಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿರವರು ವಿದ್ಯಾರ್ಥಿಗಳಿಗೆ ಕರೆ

ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಮಟ್ಟದ ಸರ್ಕಾರಿ ನೌಕರರಾಗಿ ತಾಲೂಕಿಗೆ ಕೀರ್ತಿ ತರಬೇಕೆಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಚಿಂತಾಮಣಿ: ಐ.ಎ.ಎಸ್, ಕೆ.ಎ.ಎಸ್, ಬ್ಯಾಂಕಿಂಗ್ ಮತಿತ್ತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕೆಂಬ ಕನಸ್ಸು ಹೊಂದಿರುವ ಕ್ಷೇತ್ರದ ಗ್ರಾಮೀಣ ಹಾಗೂ ಬಡ ವಿದ್ಯಾವಂತ ಅನುಕೂಲವಾಗಲೆಂದು ೧೧ ತಿಂಗಳುಗಳ ಕಾಲ ಸ್ಪರ್ಧಾಲೈನ್ ಮುಖಾಂತರ ಉಚಿತ, ತರಬೇತಿಯನ್ನು ನೀಡಲಾಗುತ್ತಿದ್ದು ಈ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಮಟ್ಟದ ಸರ್ಕಾರಿ ನೌಕರರಾಗಿ ತಾಲೂಕಿಗೆ ಕೀರ್ತಿ ತರಬೇಕೆಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿಂತಾಮಣಿ ನಗರದ ಜೆಕೆ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇ ಶಿಸಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿರವರು ಮಾತನಾಡಿ ಚಿಂತಾಮಣಿ ವಿಧಾನ ಸಭಾ ಕ್ಷೇತ್ರದಲ್ಲಿ ಐಎ.ಎಸ್, ಕೆ.ಎ.ಎಸ್, ಪಿಎಸೈ ಮತ್ತು ಬ್ಯಾಂಕಿಂಗ್ ಮತಿತ್ತರ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಬರೆಯಬೇಕೆಂಬ ಕನಸ್ಸು ಹೊಂದಿರುವ ಕ್ಷೇತ್ರದಲ್ಲಿನ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಯುವ ಜನರ ಸಬಲಿಕರಣಕ್ಕಾಗಿ ಸ್ಪರ್ದಾಲೈನ್ ಮುಖಾಂತರ ೧೧ ತಿಂಗಳು ಕಾಲ ಚಿಂತಾಮಣಿ ತಾಲೂಕಿನ ಪದವೀಧರರು ಮತ್ತು ಪದವಿಯ ಅಂತಿಮ ವರ್ಷ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಐಎ.ಎಸ್, ಕೆ.ಎ.ಎಸ್. ಪಿಎಸೈ, ಬ್ಯಾಂಕಿAಗ್ ಪರೀಕ್ಷೆಗಳಿಗೆ ಸಮಗ್ರ ತರಬೇತಿ, ಅದ್ಯಯನ, ಟಿಪ್ಪಣಿಗಳು, ಪ್ರಚಲಿತ ವಿದ್ಯಾಮಾನಗಳ ನಿಯತಕಾಲಿಕೆ ಮತ್ತು ಪರೀಕ್ಷಾ ಸರಣಿ,. ತಜ್ಞರು ಮತ್ತು ಉನ್ನತ ಶ್ರೇಣಿಯ ಮಾರ್ಗದರ್ಶನದೊಂದಿಗೆ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಈ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ೭೨೦೪೭೪೭೭೮೯ ಕರೆ ಮಾಡಿ ತಮ್ಮ ಹೆಸರಗಳನ್ನು ನೊಂದಾಯಿಸಕೊಳ್ಳಬಹುದು ಅಥವಾ ನೇರವಾಗಿ ಜೆಕೆ ಭವನಕ್ಕೆ ಬಂದು ತಮ್ಮ ಹೆಸರುಗಳನ್ನು ನೊಂದಾಯಿಸಕೊಳ್ಳಬಹುದಾಗಿದ್ದು, ಮೇ ೧೧ ರ ಭಾನುವಾರ ತರಭೇತಿ ಆಯ್ಕೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯಲ್ಲಿ ಆಯ್ಕೆಯಾದ ನೂರು ಜನರಿಗೆ ೧೧ ತಿಂಗಳ ಕಾಲ ಯಾವುದೇ ಖರ್ಚುವೆಚ್ಚವಿಲ್ಲದೇ ಉಚಿತ ತರಬೇತಿಯನ್ನು ನೀಡುತ್ತಿದ್ದು, ಈ ತರಬೇತಿಗೆ ಯಾವುದೇ ಪಕ್ಷ ಜಾತಿ ಮತವಿಲ್ಲ, ಪಕ್ಷಾತೀತವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಈ ಉಚಿತ ತರಬೇತಿ ಕಾರ್ಯಾಗರ ನಡೆಯುತ್ತಿದ್ದು, ಈ ಉಚಿತ ತರಬೇತಿಯ ಸದುಪಯೋಗ ವನ್ನು ಸದ್ಬಳಿಕೆ ಮಾಡಿಕೊಂಡು ಉನ್ನತ ಮಟ್ಟದ ಅಧಿಕಾರಿಗಳಾಗಿ ತಾಲೂಕಿಗೆ ಕೀರ್ತಿ ತರಬೇಕೆಂದರು.
ಈ ಸಂದರ್ಭದಲ್ಲಿ ಸ್ಪರ್ದಾ ಲೈನ್ ನ ಶ್ರೀನಿವಾಸ್ ಸೇರಿದಂತೆ ನಗರಸಭಾ ಸದಸ್ಯರು, ಮುಖಂಡರು ಮತಿತ್ತರರು ಇದ್ದರು.