Viral Video: ಮೆಟ್ರೊದಲ್ಲಿ ಹಳದಿ ಸೆಲೆಬ್ರೇಷನ್ ವಿಡಿಯೊ ವೈರಲ್; ಆಗ್ರಾ ರೈಲ್ವೆ ಪ್ರಾಧಿಕಾರದಿಂದ ಸ್ಪಷ್ಟನೆ
ಸಾಮಾನ್ಯವಾಗಿ ಜನ ಪ್ರಯಾಣಕ್ಕಾಗಿ ಮೆಟ್ರೋ ರೈಲು ಬಳಸುತ್ತಾರೆ. ಆದರೆ ಇಲ್ಲೊಂದು ಕಡೆ ಮೆಟ್ರೋದಲ್ಲೇ ಹಳದಿ ಶಾಸ್ತ್ರ ನಡೆದಿರುವ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಆಗ್ರಾದ ಮೆಟ್ರೋ ರೈಲು ನಿಗಮವು ಎಚ್ಚೆತ್ತುಕೊಂಡಿದ್ದು ರೈಲಿನಲ್ಲಿ ಯಾವುದೇ ತರನಾದ ಹಳದಿ ಕಾರ್ಯಕ್ರಮ ಆಯೋಜಿಸಿಲ್ಲ. ಬದಲಾಗಿ ಬಸಂತ್ ಪಂಚಮಿ ಪೂಜೆ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.

Haldi ceremony

ಆಗ್ರಾ: ಸೋಷಿಯಲ್ ಮೀಡಿಯಾ ವ್ಲಾಗರ್ ಒಬ್ಬರು ಮೆಟ್ರೋ ರೈಲಿನಲ್ಲಿ ಹಳದಿ ಕಾರ್ಯಕ್ರಮ ಆಚರಣೆ ಮಾಡಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ (Viral Video). ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಜನ ಪ್ರಯಾಣಕ್ಕಾಗಿ ಮೆಟ್ರೋ ಬಳಕೆ ಮಾಡುತ್ತಾರೆ. ಅದರೆ ಇಲ್ಲೊಂದು ಕಡೆ ಮೆಟ್ರೋದಲ್ಲೇ ಹಳದಿ ಶಾಸ್ತ್ರ ನಡೆದಿರುವ ವಿಡಿಯೊ ಸದ್ದು ಮಾಡುತ್ತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಆಗ್ರಾದ ಮೆಟ್ರೋ ರೈಲು ನಿಗಮವು ಎಚ್ಚೆತ್ತುಕೊಂಡಿದ್ದು, ರೈಲಿನಲ್ಲಿ ಯಾವುದೇ ತರನಾದ ಹಳದಿ ಕಾರ್ಯಕ್ರಮ ಆಯೋಜಿಸಿಲ್ಲ ಬದಲಾಗಿ ಬಸಂತ್ ಪಂಚಮಿ ಪೂಜೆ ಆಯೋಜಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.
ಸೋಶಿಯಲ್ ಮೀಡಿಯಾ ವ್ಲಾಗರ್ ದಿವ್ಯತಾ ಉಪಾಧ್ಯಾಯ ಎನ್ನುವ ಮಹಿಳೆಯು ರೈಲಿನಲ್ಲಿ ಹಳದಿ ಕಾರ್ಯಕ್ರಮ ಆಯೋಜಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದರು. ಮೆಟ್ರೋದಲ್ಲಿ ಪ್ರಯಾಣ ಅಷ್ಟೇ ಅಲ್ಲ ಹಳದಿ ಶಾಸ್ತ್ರ ಕೂಡ ನಡೆಯುತ್ತದೆ ಎಂದು ಅವರು ಬರೆದುಕೊಂಡಿದ್ದರು.
ಮೆಟ್ರೊದಲ್ಲಿ ಖಾಸಗಿ ಕಾರ್ಯಕ್ರಮ ಕೂಡ ಆಯೋಜನೆ ಮಾಡಬಹುದು. ಈ ರೀತಿ ಮೆಟ್ರೊದಲ್ಲಿ ಹುಟ್ಟುಹಬ್ಬ ಇನ್ನಿತರ ಸಮಾರಂಭಗಳಿಗೆ ರೆಂಟ್‌ಗಾಗಿ ನೀಡುತ್ತಾರೆ. ಆದರೆ ರೈಲಿನ ಒಳಗೆ ಯಾವುದೇ ತರನಾದ ತಿಂಡಿ ತಿನಿಸುಗಳನ್ನು ಸೇವಿಸುವಂತಿಲ್ಲ. ಆಹಾರ ಸಂಬಂಧಿತ ವಸ್ತುಗಳನ್ನು ತರಲು ಕೂಡ ಅನುಮತಿ ಇಲ್ಲ ಎಂದು ವೈರಲ್ ಆದ ವಿಡಿಯೊದಲ್ಲಿ ವ್ಲಾಗರ್ ದಿವ್ಯತಾ ತಿಳಿಸಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಆಗ್ರಾ ಮೆಟ್ರೋ ನಿಗಮ ಸ್ಪಷ್ಟನೆ ನೀಡಿದ್ದು, ರೈಲಿನಲ್ಲಿ ಯಾವುದೇ ತರನಾದ ಹಳದಿ ಕಾರ್ಯಕ್ರಮ ಆಯೋಜಿಸಿಲ್ಲ. ಬದಲಾಗಿ ಬಸಂತ್ ಪಂಚಮಿ ಪೂಜೆ ಆಯೋಜಿಸಲಾಗಿತ್ತು. ಮೆಟ್ರೋದಲ್ಲಿ ಯಾವುದೇ ಖಾಸಗಿ, ವಿವಾಹ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ ಎಂದಿದೆ. ಜತೆ ಈ ರೀತಿ ತಪ್ಪು ಮಾಹಿತಿಯನ್ನು ಹಂಚಿಕೊಳ್ಳದಂತೆ ಆಗ್ರಾ ಮೆಟ್ರೋ ನಿಗಮವು ಸೂಚನೆ ನೀಡಿದೆ.
ಇದನ್ನು ಓದಿ: Viral Video: ವಿವಾಹ ವಾರ್ಷಿಕೋತ್ಸವಕ್ಕೆ ಪತಿಯ ಮಾಜಿ ಗೆಳತಿಯನ್ನು ಕರೆದ ಪತ್ನಿ; ಕೊನೆಗೆ ಆಗಿದ್ದೇ ಬೇರೆ...
ಮೆಟ್ರೋದಲ್ಲಿ ಹಳದಿ ಕಾರ್ಯಕ್ರಮ ಎಂಬ ವಿಡಿಯೊ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯೆ ನೀಡಿದ ರೈಲ್ವೆ ಪ್ರಾಧಿಕಾರ ಸಾಕ್ಷಿ ಸಮೇತ ಇದು ಬಸಂತ್ ಪಂಚಮಿಯ ಪೂಜೆ ಎಂದು ತಿಳಿಸಿದೆ. ಬಲೂನ್ ಡೆಕೋರೆಶನ್, ಹೂವಿನ ಅಲಂಕಾರ ಎಲ್ಲವನ್ನು ಕೂಡ ವಿಡಿಯೊ ಮಾಡಿ ಹಂಚಿಕೊಂಡಿದೆ. ಆ ಮೂಲಕ ಇದೊಂದು ಹಬ್ಬದ ಆಚರಣೆ ಎಂದು ಸ್ಪಷ್ಟನೆ ನೀಡಿದೆ.