ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Video: ವಿವಾಹ ವಾರ್ಷಿಕೋತ್ಸವಕ್ಕೆ ಪತಿಯ ಮಾಜಿ ಗೆಳತಿಯನ್ನು ಕರೆದ ಪತ್ನಿ; ಕೊನೆಗೆ ಆಗಿದ್ದೇ ಬೇರೆ...

ಪತ್ನಿಯೊಬ್ಬಳು ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಪತಿಯ ಮಾಜಿ ಗೆಳತಿಯನ್ನು ಆಹ್ವಾನಿಸಿ ಆಕೆಯ ಜತೆಗೆ ಕೇಕ್ ಕತ್ತರಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಮಾತ್ರವಲ್ಲ ಪತ್ನಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪತಿಯ ಮಾಜಿ ಗೆಳತಿಯನ್ನು ಅಪ್ಪಿಕೊಂಡ ಪತ್ನಿ; ಕಾರಣವೇನು?

husband -wife viral video

Profile pavithra Feb 20, 2025 6:58 PM

ಹೊಸದಿಲ್ಲಿ: ಸಾಮಾನ್ಯವಾಗಿ ಪತಿಯ ಮಾಜಿ ಗೆಳತಿಯನ್ನು ನೋಡಿದರೆ ಪತ್ನಿ ಉರಿದು ಬೀಳುತ್ತಾಳೆ. ಅಂಥದ್ದರಲ್ಲಿ ಇಲ್ಲೊಬ್ಬಳು ಪತ್ನಿ ಸವತಿ ದ್ವೇಷವನ್ನು ತೊರೆದು ಪತಿಯ ಗೆಳತಿಯನ್ನು ಅಪ್ಪಿಕೊಂಡಿದ್ದಾಳೆ. ಅರೇ... ಇದು ನಿಜನಾ...? ಎನ್ನುವ ಪ್ರಶ್ನೆ ನಿಮ್ಗೂ ಕಾಡ್ತಿದೆಯಾ? ಹೌದು, ಇಲ್ಲೊಬ್ಬಳು ಪತ್ನಿ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಪತಿಯ ಮಾಜಿ ಗೆಳತಿಯನ್ನು ಆಹ್ವಾನಿಸಿದ್ದಾಳೆ ಮತ್ತು ಕೇಕ್ ಕತ್ತರಿಸುವಾಗ ಪತಿಯ ಮಾಜಿ ಗೆಳತಿಯನ್ನು ಹತ್ತಿರ ನಿಲ್ಲಿಸಿಕೊಂಡಿದ್ದಾಳೆ. ಪತಿ ತನ್ನ ವಿವಾಹ ವಾರ್ಷಿಕೋತ್ಸವದಂದು ಪತ್ನಿ ಮತ್ತು ಮಾಜಿ ಗೆಳತಿಯ ಜೊತೆ ಸೇರಿ ಕೇಕ್‌ ಕತ್ತರಿಸಿದ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಪತಿ, ಪತ್ನಿಯ ನಡುವೆ ಪತಿಯ ಮಾಜಿ ಗೆಳತಿ ನಿಂತಿದ್ದಾಳೆ. ಪತ್ನಿಯ ಎದುರಲ್ಲಿ ಪತಿಯು ತನ್ನ ಮಾಜಿ ಗೆಳತಿಯನ್ನು ತಬ್ಬಿಕೊಂಡು ಸಮಾಧಾನ ಮಾಡಿ ಅವಳಿಗೆ ಕೆಂಪು ಗುಲಾಬಿ ಹೂವನ್ನು ನೀಡಿದ್ದಾನೆ. ವಿಶೇಷವೆನೆಂದರೆ, ಪತ್ನಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುಗುಳ್ನಕ್ಕು ಪತಿ ಹಾಗೂ ಅವನ ಮಾಜಿ ಗೆಳತಿಯನ್ನು ಬಹಳ ಖುಷಿಯಿಂದ ತಬ್ಬಿಕೊಂಡು ಸಮಾಧಾನ ಮಾಡಿದ್ದಾಳೆ.



ಪತ್ನಿ,ಮಾಜಿ ಗೆಳತಿ ಮತ್ತು ಪತಿ ಒಟ್ಟಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀಲ್ ಹಂಚಿಕೊಂಡ ನೆಟ್ಟಿಗರು, "ಪ್ರತಿಯೊಬ್ಬರೂ ಅಂತಹ ಹೆಂಡತಿಯನ್ನು ಪಡೆಯಬೇಕು" ಎಂದು ಬರೆದಿದ್ದಾರೆ. "ಇದು ನಿಜವೇ? ನನಗೆ ನಂಬಲು ಸಾಧ್ಯವಿಲ್ಲ. ಇಂತಹ ಪತ್ನಿಗೆ ಜಯವಾಗಲಿ" ಎಂದು ನೆಟ್ಟಿಗರೊಬ್ಬರು ಆಶ್ಚರ್ಯದಿಂದ ಕಾಮೆಂಟ್ ಮಾಡಿದ್ದಾರೆ.

ಕೆಲವರು ಈ ವಿಡಿಯೊವನ್ನು ಖಂಡಿಸಿದ್ದಾರೆ. ಕೆಂಪು ಸೀರೆ ಉಟ್ಟ ಮಹಿಳೆ ಪತಿಯ ಗೆಳತಿಯಲ್ಲ ಆಕೆ ಅವನ ಸಹೋದರಿ ಎಂದು ಹೇಳಿದ್ದಾರೆ. " ಕೆಂಪು ಸೀರೆಯಲ್ಲಿರುವ ಮಹಿಳೆ ನೇಹಾ ಆಶಿಶ್ ತಿವಾರಿ, ಆಕೆ ಕೋವಿಡ್‍ನಿಂದಾಗಿ ಪತಿಯನ್ನು ಕಳೆದುಕೊಂಡಿದ್ದರು" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Kalaburagi News: ಮನೆ ಕೆಲಸದಾಕೆ ಜತೆ ಸಲುಗೆ; ಪತಿ ಕಾಲು ಮುರಿಯಲು ಸುಪಾರಿ ಕೊಟ್ಟ ಪತ್ನಿ!

ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯ ಕಾಲು ಮುರಿಯಲು ಪತ್ನಿಯೇ ಸುಪಾರಿ ನೀಡಿರುವ ಘಟನೆ ಕಲಬುರಗಿ ನಗರದ (Kalaburagi News) ಅತ್ತರ ಕಾಂಪೌಂಡ್‌ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ತಿಂಗಳಿನಿಂದ ಪತಿ, ಮನೆ ಕೆಲಸದಾಕೆ ಜತೆ ಸಲುಗೆಯಿಂದ ವರ್ತಿಸುತ್ತಿದ್ದ. ಹೀಗಾಗಿ ದಂಪತಿ ನಡುವೆ ಹಲವು ಬಾರಿ ಜಗಳವಾಗಿತ್ತು. ಕೊನೆಗೆ ಮಾತು ಕೇಳದ ಪತಿಯ ಎರಡೂ ಕಾಲುಗಳನ್ನ ಮುರಿದ್ರೆ ಮನೆಯಲ್ಲಿಯೇ ಬಿದ್ದಿರುತ್ತಾನೆ ಎಂದು ಪತ್ನಿ ಸ್ಕೆಚ್‌ ಹಾಕಿದ್ದಳು. ಆಕೆಯಿಂದ ಸುಪಾರಿ ಪಡೆದ ಮೂವರು ವ್ಯಕ್ತಿಯ ಎರಡೂ ಕಾಲು ಮುರಿದುಹಾಕಿದ್ದರು. ಇದೀಗ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.

ವೆಂಕಟೇಶ್ ಎಂಬಾತನ ಕಾಲುಗಳನ್ನು ಮುರಿಯಲು ಸುಪಾರಿ ನೀಡಿದ್ದ ಪತ್ನಿ ಉಮಾದೇವಿ ಹಾಗೂ ಹಂತಕರಾದ ಆರೀಫ್, ಮನಹೋರ, ಸುನೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್ ಕೆಲ ತಿಂಗಳಿನಿಂದ ಮನೆ ಕೆಲಸದಾಕೆ ಜತೆ ಸಲುಗೆಯಿಂದ ವರ್ತಿಸುತ್ತಿದ್ದ. ಹೀಗಾಗಿ ಅನೈತಿಕ ಸಂಬಂಧ ಶಂಕೆಯಿಂದ ಪತಿಯ ಎರಡೂ ಕಾಲುಗಳನ್ನು ಮುರಿಯಲು 5 ಲಕ್ಷಕ್ಕೆ ಪತ್ನಿ ಸುಪಾರಿ ನೀಡಿದ್ದಳು. ಆದರೆ ವೆಂಕಟೇಶ್‌ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿತ ಎಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಸುಪಾರಿ ನೀಡಿದ ಪತ್ನಿ ಸೇರಿ ಕಾಲು ಮುರಿದ ಆರೋಪಿಗಳನ್ನು ಬ್ರಹ್ಮಪೂರ ಪೊಲೀಸರು ಬಂಧಿಸಿದ್ದಾರೆ.