Viral Video: ʼನಾಯಿಯನ್ನು ಲಿಫ್ಟ್‌ನೊಳಗೆ ತರಬೇಡಿ ಪ್ಲೀಸ್ʼ... ಹೀಗಂದಿದ್ದೇ ತಪ್ಪಾಯ್ತಾ? ಮಹಿಳೆಯ ಹುಚ್ಚಾಟದ ವಿಡಿಯೊ ವೈರಲ್
ನಾಯಿಯನ್ನು ಕಂಡು ಹೆದರಿದ 8 ವರ್ಷದ ಬಾಲಕನೊಬ್ಬ ನಾಯಿಯನ್ನು ಲಿಫ್ಟ್‌ನೊಳಗೆ ತರಬೇಡಿ ಎಂದು ಮಹಿಳೆ ಬಳಿ ವಿನಂತಿಸಿದ್ದಾನೆ. ಆದರೆ ಕರುಣೆ ಇಲ್ಲದ ಆಕೆ ಬಾಲಕನನ್ನು ಕ್ರೂರವಾಗಿ ಥಳಿಸಿದ್ದಾಳೆ. ಈ ವಿಡಿಯೊ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಲಿಫ್ಟ್‌ನೊಳಗೆ ನಾಯಿಯನ್ನು ತರಬೇಡಿ ಎಂದಿದ್ದಕ್ಕೆ ಮಹಿಳೆಯೊಬ್ಬಳು ಬಾಲಕನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆಯೊಂದು ವರದಿಯಾಗಿದೆ. ಲಿಫ್ಟ್‌ನೊಳಗೆ ನಾಯಿಯನ್ನು ಕಂಡು ಹೆದರಿದ ಎಂಟು ವರ್ಷದ ಬಾಲಕ ನಾಯಿಯನ್ನು ಲಿಫ್ಟ್‌ನೊಳಗೆ ತರಬೇಡಿ ಎಂದು ಬೇಡಿಕೊಂಡಿದ್ದಕ್ಕೆ ಮಹಿಳೆಗೆ ಮನವಿ ಮಾಡಿದ್ದಾನೆ. ಆದರೆ ಇದರಿಂದ ಸಿಟ್ಟಿಗೆದ್ದ ತಿಳಿಗೇಡಿ ಮಹಿಳೆ ಬಾಲಕನನ್ನು ಕ್ರೂರವಾಗಿ ಥಳಿಸಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ವೈರಲ್ ವಿಡಿಯೊದಲ್ಲಿ, ಬಾಲಕನೊಬ್ಬ ಲಿಫ್ಟ್‌ನೊಳಗೆ ನಿಂತಿದ್ದಾಗ ಮಹಿಳೆಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಅಲ್ಲಿಗೆ ಬಂದಿದ್ದಾಳೆ. ನಾಯಿ ಕಂಡು ಹೆದರಿದ ಹುಡುಗ ಆಕೆಗೆ ಕೈಮುಗಿದು ನಾಯಿಯನ್ನು ಒಳಗೆ ಬಿಡಬೇಡಿ ಎಂದು ವಿನಂತಿಸಿಕೊಂಡಿದ್ದಾನೆ. ಆದರೆ ಆ ಮಹಿಳೆ ಕೋಪಗೊಂಡು ಬಾಲಕನನ್ನು ಲಿಫ್ಟ್‌ನಿಂದ ಹೊರಗೆಳೆದು ಕಪಾಳಮೋಕ್ಷ ಮಾಡಿದ್ದಾಳೆ. ಬಾಲಕನನ್ನು ಮಹಿಳೆ ಹೊಡೆಯುತ್ತಿರುವ ದೃಶ್ಯ ಲಿಫ್ಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
नोएडा: महिला कुत्ते के साथ लिफ्ट में आती है। कुत्ता देख बच्चा डर जाता है। महिला बच्चे को लिफ्ट से निकालती है और थप्पड़ों की बौछाड़ करती है। ऐसी महिला को लक्ष्मी का रूप कहा जाए या डायन? शहरों में ऐसी दुष्ट महिलाओं की संख्या बढ़ रही है। पागलखाने भेजा जाए इन्हें। pic.twitter.com/LXWaCGJAjc
— Aditya Kumar (@Adityakripa) February 19, 2025
ಈ ಘಟನೆಯಿಂದ ರೊಚ್ಚಿಗೆದ್ದ ನಿವಾಸಿಗಳು ಮಹಿಳೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರಂತೆ. ವೈರಲ್ ಆಗಿರುವ ವಿಡಿಯೊವನ್ನು ಗಮನಿಸಿದ ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಕೇಂದ್ರ ನೋಯ್ಡಾ ಡಿಸಿಪಿ ಶಕ್ತಿ ಅವಸ್ಥಿ ವರದಿ ಮಾಡಿದ್ದಾರೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ತನಿಖೆಯನ್ನು ಶುರುಮಾಡಿದ್ದಾರಂತೆ.
ಮಹಿಳೆ ಬಾಲಕನಿಗೆ ಥಳಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ನೆಟ್ಟಿಗರು ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ, ರೆಸಿಡೆನ್ಸಿಯಲ್ ಫ್ಲ್ಯಾಟ್‍ನಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ 11 ವರ್ಷದ ಬಾಲಕಿಯನ್ನು ಮನೆಕೆಲಸಕ್ಕಾಗಿ ನೇಮಿಸಿಕೊಂಡಿದ್ದು, ಆಕೆಗೆ ಕಿರುಕುಳ ನೀಡಿದ್ದನು. ನಂತರ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ ಮತ್ತು ಬಾಲಕಿಯನ್ನು ನಿಂದಿಸಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದರು. ಆರೋಪಿಯನ್ನು ಶಹಜಹಾನ್ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ. ಶಹಜಹಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 115 (2) ಮತ್ತು ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 14 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Viral News: ತಮ್ಮತ್ತ ನಾಯಿ ಬೊಗಳಿತೆಂದು ಮಾಲೀಕನ ಮೇಲೆ ಮಹಿಳೆಯರಿಂದ ಹಲ್ಲೆ... 10 ಮಹಿಳೆಯರ ವಿರುದ್ಧ ಪ್ರಕರಣ ದಾಖಲು!
ಅಪರಿಚಿತರನ್ನು ನೋಡಿದಾಗ ನಾಯಿಗಳು ಸಾಮಾನ್ಯವಾಗಿ ಬೊಗಳುತ್ತವೆ. ಬೊಗಳುವ ನಾಯಿಗಳ ಬಾಯಿ ಮುಚ್ಚಿಸಲು ಸಾಧ್ಯವೇ? ಆದರೆ ಇಲ್ಲೊಂದು ವಿಚಿತ್ರ ಮತ್ತು ಅಮಾನವೀಯ ಘಟನೆಯೊಂದು ವರದಿಯಾಗಿದೆ(Viral News). ಮಹಾರಾಷ್ಟ್ರದ(Maharashtra) ಥಾಣೆಯಲ್ಲಿ ಸಾಕು ನಾಯಿಯೊಂದು ಬೊಗಳಿದ್ದಕ್ಕೆ ಕೋಪಗೊಂಡ ಮಹಿಳೆಯರು ನಾಯಿಯ ಮಾಲಿಕ ಮತ್ತು ಆತನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪದಡಿ 10 ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ ಭಾನುವಾರ(ಜ.5) ಈ ಹಲ್ಲೆ ನಡೆದಿದೆ. ತರಕಾರಿ ಮಾರುವ ಕುಟುಂಬದ ಸಾಕು ನಾಯಿಯೊಂದು ಮಹಿಳೆಯರ ಗುಂಪೊಂದನ್ನು ನೋಡಿ ಬೊಗಳಿದೆ. ಇದರಿಂದ ಮಹಿಳೆಯರು ಕಿರಿಕಿರಿಯಾಗಿದ್ದು, ನಾಯಿಯ ಮಾಲೀಕರನ್ನು ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಮನೆಗೆ ಕಲ್ಲು ತೂರಿದ್ದಾರೆ. ನಂತರ ಮಹಿಳೆಯರ ಗುಂಪು ಮನೆಗೆ ನುಗ್ಗಿ ತರಕಾರಿ ಮಾರಾಟಗಾರರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಯಿಂದಾಗಿ ಕುಟುಂಬಸ್ಥರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.