ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಶ್ರೀಮಂತ ಪುರುಷರನ್ನು ಬುಟ್ಟಿಗೆ ಹಾಕೋಳೋದು ಹೇಗೆ? ಸೋಶಿಯಲ್‌ ಮೀಡಿಯಾದಲ್ಲಿ ಈ ಲವ್‌ಗುರುದ್ದೇ ಫುಲ್‌ ಹವಾ!

ಸೋಶಿಯಲ್ ಮೀಡಿಯಾದಲ್ಲಿ ಲವ್ ಗುರು ಎಂದು ಕರೆಯಲ್ಪಡುವ ಚೀನೀ ಮಹಿಳೆ ಲೆ ಚುವಾಂಕು ತೆರಿಗೆ ವಂಚನೆ ಪ್ರಕರಣದಲ್ಲಿ ಸಿಲುಕಿದ ಕಾರಣ ಆಕೆಗೆ 7.58 ಮಿಲಿಯನ್ ಯುವಾನ್ (8.93 ಕೋಟಿ ರೂ.) ದಂಡ ವಿಧಿಸಲಾಗಿದೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ.

ಪೊಲೀಸರ ಬಲೆಗೆ ಬಿದ್ದ ಕಿಲಾಡಿ ʼಲವ್‌ಗುರುʼ!

Profile pavithra Apr 8, 2025 7:43 PM

ಬೀಜಿಂಗ್: ಹಿಂದೆ ಶ್ರೀಮಂತ ಪುರುಷರನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳಬೇಕು ಎಂದು ಕಲಿಸುವ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡುವ ಮೂಲಕ ಸುದ್ದಿಯಾದ ಚೀನಿ ಮಹಿಳೆ ಈಗ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ.‌ ಹೌದು 'ಲವ್ ಗುರು' ಎಂದು ಕರೆಯಲ್ಪಡುವ ಈ ಚೀನೀ ಮಹಿಳೆ ಇದೀಗ ತೆರಿಗೆ ವಂಚನೆ ಪ್ರಕರಣದಲ್ಲಿ ಸಿಲುಕಿ ಭಾರೀ ದಂಡಕ್ಕೆ ಗುರಿಯಾಗಿದ್ದಾಳೆ. ವರ್ಷಕ್ಕೆ 142 ಮಿಲಿಯನ್ ಯುವಾನ್ (1,67,35,55,200 ರೂ.) ಗಳಿಸುವ ಲೆ ಚುವಾಂಕು ಎಂಬಾಕೆ ಸರ್ಕಾರಕ್ಕೆ ತೆರಿಗೆ ಸರಿಯಾಗಿ ಕಟ್ಟದೇ ವಂಚನೆ ಮಾಡಿದ್ದಕ್ಕೆ ಇತ್ತೀಚೆಗೆ ಆಕೆಗೆ 7.58 ಮಿಲಿಯನ್ ಯುವಾನ್ (8.93 ಕೋಟಿ ರೂ.) ದಂಡ ವಿಧಿಸಲಾಗಿದೆ.ಈ ಸುದ್ದಿ ಈದೀಗ ವೈರಲ್‌(Viral News)ಆಗಿದೆ.

'ಕ್ಯೂಕ್ಯೂ ಬಿಗ್ ವುಮನ್' ಎಂಬ ಹೆಸರಿನಿಂದ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯಳಾಗಿರುವ ಚುವಾಂಕ್ಯೂಗೆ ಸ್ಟೇಟ್ ಅಡ್ಮಿನಿಸ್ಟ್ರೇಷನ್ ಆಫ್ ಟ್ಯಾಕ್ಸೇಷನ್‍ನ ಶಾಂಘೈ ಟ್ಯಾಕ್ಸೇಷನ್ ಬ್ಯೂರೋ ದಂಡ ವಿಧಿಸಿದೆ. ಬ್ಯೂರೋ ತನಿಖೆ ನಡೆಸಿ ಕಾನೂನಿಗೆ ಅನುಗುಣವಾಗಿ ಪ್ರಕರಣವನ್ನು ಮುಂದುವರಿಸಿದೆ ಎನ್ನಲಾಗಿದೆ.

ವೈಯಕ್ತಿಕ ಖಾತೆಗಳ ಮೂಲಕ ಪೇಮೆಂಟ್‍ ಅನ್ನು ಗಳಿಸುವ ಈಕೆ ಮಾರಾಟದ ಆದಾಯವನ್ನು ಮರೆಮಾಚಿದ್ದಾಳಂತೆ. ಆ ಮೂಲಕ ತೆರಿಗೆಗಳನ್ನು ತಪ್ಪಿಸಿಕೊಳ್ಳಲು ಹುನ್ನಾರ ಮಾಡಿದ್ದಾಳೆ ಎಂದು ವರದಿಯಾಗಿದೆ. ಈ ರೀತಿ ತೆರಿಗೆ ವಂಚನೆ ಮಾಡಿದ್ದಕ್ಕಾಗಿ ತೆರಿಗೆ ಅಧಿಕಾರಿಗಳು ಆಕೆಗೆ ದಂಡ ವಿಧಿಸಿದ್ದಾರೆ ಎಂದು ಹೇಳಲಾಗಿದೆ. ವಿಳಂಬ ಶುಲ್ಕ ಸೇರಿದಂತೆ ಒಟ್ಟು 7.58 ಮಿಲಿಯನ್ ಯುವಾನ್ ಮೊತ್ತವನ್ನು ದಂಡವಾಗಿ ಪಾವತಿಸುವಂತೆ ಆದೇಶಿಸಲಾಗಿದೆ.

ಈ ಮಹಿಳೆ ಒಂದಲ್ಲ ಒಂದು ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾಳೆ. ಈ ಹಿಂದೆ 2023 ರಲ್ಲಿ ಆರ್ಥಿಕ ಲಾಭಕ್ಕಾಗಿ ಶ್ರೀಮಂತ ಪುರುಷರನ್ನು ಹೇಗೆ ಮದುವೆಯಾಗಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗಾಗಿ ಆಕೆಯನ್ನು 'ಲವ್ ಗುರು' ಎಂದು ಕರೆಯಲಾಗಿತ್ತು. ಅವಳು ಲೈವ್ ಸ್ಟ್ರೀಮ್‍ಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿ ಅವರಿಗೆ ಸಲಹೆ ನೀಡುವ ನೆಪದಲ್ಲಿ ಅವರಿಂದ ಲಾಭ ಪಡೆಯುತ್ತಿದ್ದಳಂತೆ. ವರದಿ ಪ್ರಕಾರ, ಅವಳು ಮುಖಾಮುಖಿ ಸಮಾಲೋಚನೆಗಾಗಿ 1,143 ಯುವಾನ್ ಶುಲ್ಕ ವಿಧಿಸುತ್ತಾಳೆ ಮತ್ತು ಅವಳ ಖಾಸಗಿ ಕೋಚಿಂಗ್ ಪ್ಯಾಕೇಜ್‍ಗಳು 10,000 ಯುವಾನ್.

ಈ ಸುದ್ದಿಯನ್ನೂ ಓದಿ:Viral Video: ಈಜು ಬಾರದಿದ್ದರೂ ಸೀರಿಯಲ್ ಶೂಟಿಂಗ್‍ಗಾಗಿ ಬಾವಿಗೆ ಹಾರಿದ ನಟಿ; ಮುಂದೆ ಆಗಿದ್ದೇನು?

ಅವಳು ಆಗಾಗ್ಗೆ ತನ್ನ ಗ್ರಾಹಕರೊಂದಿಗೆ ಕೋಡ್ ಪದಗಳನ್ನು ಬಳಸಿ ಸಂವಹನ ನಡೆಸುತ್ತಿದ್ದಳಂತೆ, "ಶ್ರೀಮಂತ" ಅಥವಾ "ಹಣ" ಇಂತಹ ನೇರ ಪದಗಳನ್ನು ಬಳಸುವುದನ್ನು ತಪ್ಪಿಸುತ್ತಿದ್ದಳು. ಅವಳ ಹಣವನ್ನು "ಅಕ್ಕಿ" ಎಂದು, ಗರ್ಭಧಾರಣೆಯನ್ನು "ಚೆಂಡನ್ನು ಸಾಗಿಸುವುದು" ಮತ್ತು ಮದುವೆಯಾಗುವುದನ್ನು "ಕೋಟೆಯ ಒಳಗೆ" ಇತ್ಯಾದಿ ಕೋಡ್‌ವರ್ಡ್‌ಗಳನ್ನು ಬಳಸುತ್ತಾಳಂತೆ.